ನಿರ್ಲಕ್ಷ್ಯ ಬೇಡ: ‘ವಯಸ್ಕರರ’ ಪಾಲಿಗೇ ಕೊರೊನಾ ಮಾರಿ ವಿಲನ್ ಆಗ್ತಿದೇ..
ಬೆಂಗಳೂರು: ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದೆ. ರಾಜಧಾನಿಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಏರುತ್ತಿದೆ. ಇನ್ನೂ ಎನಾದ್ರು ಜನ ನಿರ್ಲಕ್ಷ್ಯ ಹೀಗೆ ಮುಂದುವರೆಸಿದ್ರೆ ಕೊರೊನಾಗೆ ಶಕ್ತಿ ತುಂಬಿದಂತಾಗುತ್ತೆ. ಈಗಾಗಲೇ ನಮಗೆ ಕೊರೊನಾ ಬರಲ್ಲ. ಕೊರೊನಾ ಇಲ್ಲ. ಬರೀ ಕೆಮ್ಮು, ಜ್ವರ ಅಷ್ಟೇ. ಬೇಗ ಹೋಗುತ್ತೆ ಬಿಡಿ ಅಂತ ಸುಮ್ಮನಾದ್ರೆ. ಸೋಂಕು ಫೈನಲ್ ಸ್ಟೇಜ್ಗೆ ಬಂದ್ರೆ ಜೀವ ಉಳಿದಸೋದು ಕಷ್ಟ, ಕಷ್ಟ. ಆಸ್ಪತ್ರೆ ಸೇರಿದ 14 ದಿನಗಳೊಳಗೆ 2,504 ಜನ ಮೃತಪಟ್ಟಿದ್ದಾರೆ.. ಕೊರೊನಾ ಸೋಂಕು ಉಲ್ಬಣ ಬಳಿಕ […]

ಬೆಂಗಳೂರು: ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದೆ. ರಾಜಧಾನಿಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಏರುತ್ತಿದೆ. ಇನ್ನೂ ಎನಾದ್ರು ಜನ ನಿರ್ಲಕ್ಷ್ಯ ಹೀಗೆ ಮುಂದುವರೆಸಿದ್ರೆ ಕೊರೊನಾಗೆ ಶಕ್ತಿ ತುಂಬಿದಂತಾಗುತ್ತೆ. ಈಗಾಗಲೇ ನಮಗೆ ಕೊರೊನಾ ಬರಲ್ಲ. ಕೊರೊನಾ ಇಲ್ಲ. ಬರೀ ಕೆಮ್ಮು, ಜ್ವರ ಅಷ್ಟೇ. ಬೇಗ ಹೋಗುತ್ತೆ ಬಿಡಿ ಅಂತ ಸುಮ್ಮನಾದ್ರೆ. ಸೋಂಕು ಫೈನಲ್ ಸ್ಟೇಜ್ಗೆ ಬಂದ್ರೆ ಜೀವ ಉಳಿದಸೋದು ಕಷ್ಟ, ಕಷ್ಟ.
ಆಸ್ಪತ್ರೆ ಸೇರಿದ 14 ದಿನಗಳೊಳಗೆ 2,504 ಜನ ಮೃತಪಟ್ಟಿದ್ದಾರೆ.. ಕೊರೊನಾ ಸೋಂಕು ಉಲ್ಬಣ ಬಳಿಕ ಸೋಂಕಿತರು ತಡವಾಗಿ ಆಸ್ಪತ್ರೆಗೆ ದಾಖಲಾದರೆ, ವಿಳಂಬ ಮಾಡಿದರೆ ಕೊರೊನಾ ಸೋಂಕಿತರ ಪ್ರಾಣಕ್ಕೇ ಕುತ್ತು. ಆಸ್ಪತ್ರೆಗೆ ದಾಖಲಾದ 14 ದಿನದೊಳಗೆ ಸಾವಿನ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾದ 14 ದಿನಗಳೊಳಗೆ 2,504 ಜನ ಮೃತಪಟ್ಟಿದ್ದಾರೆ.
ಕೊನೇ ಕ್ಷಣದಲ್ಲಿ ರೋಗಿಯನ್ನ ಬದುಕುಳಿಸೋದೂ ಕಷ್ಟ ಸೋಂಕು ಉಲ್ಬಣ ಬಳಿಕ ಆಸ್ಪತ್ರೆಗೆ ಹೋದ್ರೆ ವೈದ್ಯರು ಕೂಡ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಲ್ಲ. ಕೊನೇ ಕ್ಷಣದಲ್ಲಿ ರೋಗಿಯನ್ನ ಬದುಕುಳಿಸೋದೂ ಕಷ್ಟವಾಗುತ್ತೆ. ವೆಂಟಿಲೇಟರ್ಗೆ ಹೋದ ಮೇಲೆ ರೋಗಿ ಬದುಕೋದೆ ಕಷ್ಟ. ಕೊನೇ ಕ್ಷಣದಲ್ಲಿ ಬಂದು ಸೋಂಕಿತರು ಅಡ್ಮಿಟ್ ಆದರೆ ಪ್ರಯೋಜನವಿಲ್ಲ. ಹೀಗಾಗಿ ಸೋಂಕು ಪತ್ತೆಯಾದ ಕೂಡಲೆ ಆಸ್ಪತ್ರೆಗೆ ದಾಖಲಾಗಲು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ನಿರ್ಲಕ್ಷ್ಯವಹಿಸದೆ ನಮ್ಮ ಜೀವದ ಬಗ್ಗೆ ನಾವೇ ಕಾಳಜಿ ವಹಿಸಬೇಕು.
Published On - 11:46 am, Sat, 3 October 20




