ಮುಡಾ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಮುಡಾ ಮಾಜಿ ಆಯುಕ್ತ ನಟೇಶ್ ಇಡಿ ವಶಕ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2024 | 7:54 PM

ಮುಡಾ ಮಾಜಿ ಆಯುಕ್ತ ನಟೇಶ್ ಅವರ ಮನೆಯಲ್ಲಿ 33 ಗಂಟೆಗಳ ಕಾಲ ನಡೆದ ಇಡಿ ದಾಳಿ ಇದೀಗ ಅಂತ್ಯಗೊಂಡಿದೆ. ದಾಳಿಯ ನಂತರ ನಟೇಶ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಮೂಲಕ ಮುಡಾ ಹಗರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಮುಡಾ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಮುಡಾ ಮಾಜಿ ಆಯುಕ್ತ ನಟೇಶ್ ಇಡಿ ವಶಕ್ಕೆ
ಮುಡಾ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಮುಡಾ ಮಾಜಿ ಆಯುಕ್ತ ನಟೇಶ್ ಇಡಿ ವಶಕ್ಕೆ
Follow us on

ಬೆಂಗಳೂರು, ಅಕ್ಟೋಬರ್​ 29: ಮುಡಾ ಸೈಟ್​ ಹಗರಣ (muda case) ಸಂಬಂಧ ಮುಡಾ ಮಾಜಿ ಆಯುಕ್ತ ನಟೇಶ್ ಮನೆಯಲ್ಲಿ ನಡೆದ ಇಡಿ ದಾಳಿ ಇದೀಗ ಅಂತ್ಯವಾಗಿದೆ. ಸದ್ಯ ನಟೇಶ್​ರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಲ್ಲೇಶ್ವರಂ ಮನೆಯಿಂದ ನಟೇಶ್​ಗೆ ಸೇರಿದ ಕೆಂಪು ಬಣ್ಣದ ಕಿಯಾ ಕಾರಲ್ಲೇ ಶಾಂತಿನಗರ ಇಡಿ ಕಚೇರಿಗೆ ಅಧಿಕಾರಿಗಳು ಕರೆತಂದಿದ್ದಾರೆ.

ನಗರದ ಮಲ್ಲೇಶ್ವರಂನ 10ನೇ ಕ್ರಾಸ್ ನಲ್ಲಿರುವ‌ ನಟೇಶ್ ಮನೆಗೆ ನಿನ್ನೆ ಬೆಳಗ್ಗೆ 8 ಗಂಟೆಗೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ರಾತ್ರಿ10 ಗಂಟೆಯವರೆಗೂ ದಾಖಲೆಗಳನ್ನು ಜಾಲಾಡಿದ್ದು, 4 ಬ್ಯಾಗ್ ಕೊಂಡೊಯ್ದಿದ್ದರು. ಇಂದು ಕೂಡ ತಲಾಶ್​ ಮಾಡಿದ್ದು, ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮುಗಿಸಿ ತೆರಳಿದ್ದಾರೆ.

ಇದನ್ನೂ ಓದಿ: ಇಡಿ ದಾಳಿ: ವಕ್ರತುಂಡ ಸೊಸೈಟಿ ಹೆಸರಿನಲ್ಲಿ ನಡೆದಿತ್ತಾ ಬಹುದೊಡ್ಡ ಭ್ರಷ್ಟಾಚಾರ?

ಇನ್ನು ಸಿಎಂ ಸಿದ್ದರಾಮಯ್ಯ ಆಪ್ತ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಇಡಿ ವಿಚಾರಣೆ ಅಂತ್ಯವಾಗಿದೆ. ಮೈಸೂರಿನ ಹಿನಕಲ್​ನಲ್ಲಿರುವ ರಾಕೇಶ್ ಪಾಪಣ್ಣ ಮನೆ ಮೇಲೆ ನಿನ್ನೆ ಬೆಳಗ್ಗೆ 7 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಸತತ 35 ಗಂಟೆ ತನಿಖೆ, ವಿಚಾರಣೆ ನಡೆಸಿ ಇದೀಗ ನಿರ್ಗಮಿಸಿದ್ದಾರೆ.

ಮಂಡ್ಯ ಜಿಲ್ಲೆಯ 3 ಕಡೆ ಕೂಡ ಇಡಿ ಅಧಿಕಾರಿಗಳ ಪರಿಶೀಲನೆ ಅಂತ್ಯವಾಗಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರೋಹಳ್ಳಿಯ ಕುರುಬರ ಬೀದಿಯಲ್ಲಿರುವ ಜಯರಾಮ್ ಸಂಬಂಧಿಕರು ಮತ್ತು ಪಾಲುದಾರರ ಮನೆ ಮೇಲೆ ದಾಳಿ ಮಾಡಲಾಗಿತ್ತು. ದಾಳಿ ವೇಳೆ ಹಲವು ಮಹತ್ವದ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಸಂಬಂಧಿಕರ ಮನೆಯಲ್ಲಿ ಸಿಕ್ಕ ದಾಖಲೆ ಆಧಾರದಲ್ಲಿ ಜಯರಾಮ್​ಗೆ ಗ್ರಿಲ್ ಮಾಡಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವಾಕಿಂಗ್​ನಲ್ಲಿದ್ದ ಮುಡಾ ಅಧಿಕಾರಿ ಇಡಿ ದಾಳಿ ಸುದ್ದಿ ಕೇಳ್ತಿದ್ದಂತೆ ಅಲ್ಲಿಂದಲೇ ರನ್ನಿಂಗ್!

ದಿನೇಶ್ ಕುಮಾರ್ ಆಯುಕ್ತರಾಗಿ ಮೈಸೂರಿಗೆ ಬಂದ ಬಳಿಕವೇ ವಕ್ರತುಂಡ ಸೊಸೈಟಿ ಪ್ರಾರಂಭವಾಗಿತ್ತು. ಸಂಘಕ್ಕೆ ನಿರ್ದೇಶಕರಾದ ಇಬ್ಬರು ದಿನೇಶ್ ಕುಟುಂಬಸ್ಥರು ಎನ್ನುವ ಅನುಮಾನವಿದೆ. ಎಂಎಂಜಿ ಕಚೇರಿ ಕೆಳಗೆ ಈ ವಕ್ರತುಂಡ ಸೊಸೈಟಿ ಇದೆ. ಹೀಗಾಗಿ ಇಡಿ ಅಧಿಕಾರಿಗಳು ವಕ್ರತುಂಡ ಸೊಸೈಟಿಯಲ್ಲಿ ದಾಖಲೆ ಪರಿಶೀಲಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:32 pm, Tue, 29 October 24