ಕಾವೇರಿಯಿಂದ ಮುಡಾ ವರೆಗೆ: ಕರ್ನಾಟಕದಲ್ಲಿ ನಡೆದ ಪಾದಯಾತ್ರೆಗಳ ಇಣುಕು ನೋಟ

ಆಡಳಿತಾರೂಢ ಸರ್ಕರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಮಾಡುವ ಪಾದಯಾತ್ರೆ ಸಹಜವಾಗಿಯೇ ಆಡಳಿತಾರೂಢ ಪಕ್ಷಕ್ಕೆ ತಲೆ ನೋವು ತರಸುತ್ತವೆ. ಇದೀಗ ಬಿಜೆಪಿ ಮತ್ತು ಜೆಡಿಎಸ್​ ಮುಡಾ ಹಗರಣಕ್ಕ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜಿನಾಮೆಗಾಗಿ ಪಾದಯಾತ್ರೆ ನಡೆಸಲಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ನಡೆದ ಪಾದಯಾತ್ರೆ ಇಣುಕು ನೋಟ ಇಲ್ಲಿದೆ.

ಕಾವೇರಿಯಿಂದ ಮುಡಾ ವರೆಗೆ: ಕರ್ನಾಟಕದಲ್ಲಿ ನಡೆದ ಪಾದಯಾತ್ರೆಗಳ ಇಣುಕು ನೋಟ
ಸಾಂದರ್ಭಿಕ ಚಿತ್ರ
Follow us
|

Updated on:Aug 02, 2024 | 11:56 AM

ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನೀವೇಶನ ಹಂಚಿಕೆ ಹಗರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಹೀಗಾಗಿ ಸಿದ್ದರಾಮಯ್ಯ (Siddaramaiah) ಅವರು ಕೂಡಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಲು ನಿರ್ಧರಿಸಿವೆ. ಆಗಸ್ಟ 3 ರಂದು ಪಾದಯಾತ್ರೆಗೆ ಚಾಲನೆ ದೊರೆಯಲಿದೆ.

ಕರ್ನಾಟಕದಲ್ಲಿ ಅನೇಕ ವಿಚಾರಗಳಿಗಾಗಿ ಪಾದಯಾತ್ರೆಗಳು ನಡೆದಿವೆ. ನಮ್ಮ ನೆಲ, ಜಲ, ನಾಡು, ಭಾಷೆ ಹೀಗೆ ಹಲವು ವಿಚಾರವಾಗಿ ಪಾದಯಾತ್ರೆಗಳು ನಡೆದಿವೆ. ಕೆಲವು ಪಾದಯಾತ್ರೆಗಳು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿವೆ. ಅದರಲ್ಲಂತೂ ಆಡಳಿತಾರೂಢ ಸರ್ಕರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಮಾಡುವ ಪಾದಯಾತ್ರೆ ಸಹಜವಾಗಿಯೇ ಆಡಳಿತಾರೂಢ ಪಕ್ಷಕ್ಕೆ ತಲೆ ನೋವು ತರಸುತ್ತವೆ. ರಾಜ್ಯದಲ್ಲಿ ನಡೆದ ಪ್ರಮುಖ ಪಾದಯಾತ್ರೆಗಳ ಮಾಹಿತಿ ಇಲ್ಲಿದೆ.

ನೀರಾ ಹೋರಾಟ ಪಾದಯಾತ್ರೆ

ಅದು 1999ರ ಲೋಕಸಭಾ ಚುನಾವಣೆ, ಹಾಸನ ಕ್ಷೇತ್ರದಲ್ಲಿ ಸೋತು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಮನೆ ಸೇರಿದ್ದರು. ಇನ್ನು ದೇವೇಗೌಡ ಅವರ ರಾಜಕೀಯ ಮುಗಿದೇ ಹೋಯಿತು ಎಂಬ ಮಾತುಗಳು ರಾಜಕಾರಣದಲ್ಲಿ ಕೇಳಿ ಬಂದಿದ್ದವು. 2002ರಲ್ಲಿ ಅಂದಿನ ಕನಕಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಸಂಸದ ಚಂದ್ರಶೇಖರ್​ ಮೂರ್ತಿ ಮೃತಪಟ್ಟಿದ್ದರಿಂದ ಉಪಚುನಾವಣೆ ನಡೆಯುತ್ತೆ. ಉಪಚುನಾವಣೆ ಆಸು-ಪಾಸಿನಲ್ಲೇ ಚನ್ನಪಟ್ಟಣದಲ್ಲಿ ನೀರಾ ಹೋರಾಟ ತೀವ್ರಗೊಂಡು ಇಬ್ಬರು ರೈತರು ಗೋಲಿಬಾರ್​​ನಲ್ಲಿ ಮೃತಪಟ್ಟಿದ್ದರು.

ಇದನ್ನು ರಾಜಕೀಯವಾಗಿ ಬಳಸಿಕೊಂಡ ಹೆಚ್​ಡಿ ದೇವೇಗೌಡರು, ಅಂದಿನ ಎಸ್​​ಎಂ ಕೃಷ್ಣ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಿ, ರಾಜಕೀಯ ದಾಳ ಉರುಳಿಸುತ್ತಾರೆ. ನಂತರ ಅಂದಿನ ಕನಕಪುರ ಲೋಕಸಭಾ ಕ್ಷೇತ್ರ (ಬೆಂಗಳೂರು ಗ್ರಾಮಾಂತರ)ದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ರಾಜಕೀಯವಾಗಿ ಮರುಜನ್ಮ ಪಡೆಯುತ್ತಾರೆ. ಆಗ ಡಿಕೆ ಶಿವಕುಮಾರ್​ ಎದುರಾಳಿ.

ಜೀತವಿಮುಕ್ತಿ, ಬಗರ್​ ಹುಕುಂ ಭೂಮಿ ನೀಡಲು ಆಗ್ರಹಿಸಿ ಪಾದಯಾತ್ರೆ

1981ರ ದಶಕ, ಜೀತವಿಮುಕ್ತಿ ಮತ್ತು ಹರಿಜನ-ಗಿರಿಜನರಿಗೆ ಭೂಮಿ ನೀಡಬೇಕೆಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಪಾದಯಾತ್ರೆ ನಡೆಸಿದರು. 1700 ಮಂದಿಯನ್ನು ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸುವಲ್ಲಿ ಸಫಲರಾದರು.

ಕಾವೇರಿ ನೀರಿಗಾಗಿ ಪಾದಯಾತ್ರೆ

ಕಾವೇರಿ ನೀರಿಗಾಗಿ ಮಾಜಿ ಮುಖ್ಯಮಂತ್ರಿಗಳಾ ಎಸ್​ಎಂ ಕೃಷ್ಣ ಹಾಗೂ ಬಿಎಸ್​ ಯಡಿಯೂರಪ್ಪ ಅವರು 1998ರಲ್ಲಿ ಪಾದಯಾತ್ರೆ ನಡೆಸಿದರು.

ಗಣಿ ಕುಳಗಳ ವಿರುದ್ಧ ಸಿದ್ದರಾಮಯ್ಯ ಪಾದಯಾತ್ರೆ ಮೆಲುಕು

2010ರ ಜುಲೈನಲ್ಲಿ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ರೆಡ್ಡಿ ಸಹೋದರರ ವಿರುದ್ಧ ದಿನೇಶ್​ ಗುಂಡೂರಾವ್​ ಅಕ್ರಮ ಗಣಿಗಾರಿಕೆ ಆರೋಪ ಮಾಡಿದ್ದರು. ಇದರಿಂದ ಸದನದಲ್ಲಿ ಮಾತಿನ ಚಕಮಕಿ ಆರಂಭವಾಯಿತು. ಈ ವೇಳೆ ಅಂದಿನ ಬಿಜೆಪಿ ಶಾಸಕ ಟಿ.ಎಸ್​ ಸುರೇಶ್​ ಬಾಬು ಗುಂಡುರಾವ್​ ವಿರುದ್ಧ ಹರಿಹಾಯ್ದರು. ಬಳ್ಳಾರಿಗೆ ಬಾ ನೋಡಿಕೊಳ್ಳುತ್ತೇವೆ ಎಂದು ಸವಾಲು ಎಸೆದರು.

ಇದರಿಂದ ಸದನ ಮತ್ತಷ್ಟು ಗದ್ದಲಮಯವಾಯಿತು. ಬಳ್ಳಾರಿ ಶಾಸಕರು ತೋಳೇರಿಸಿಕೊಂಡು ವಿಪಕ್ಷ ನಾಯಕರ ಬಳಿ ಹೊರಟರು. ಇವರಲ್ಲಿ ಮೂವರು ರೆಡ್ಡಿ ಸಹೋದರರೂ ಇದ್ದರು. ಆಗ ಸಿಟ್ಟಿಗೆದ್ದ ಸಿದ್ದರಾಮಯ್ಯ ತೋಳು ತಟ್ಟಿ ‘ಬಳ್ಳಾರಿಗೆ ಬರ್ತೇವೆ, ರೆಡ್ಡಿ ಮನೆ ಮುಂದೆಯೇ ಮೆರವಣಿಗೆ ಮಾಡ್ತೆವೆ’ ಎಂದು ಅಬ್ಬರಿಸಿ ಸವಾಲೆಸೆದರು. ನಂತರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ನಂತರ ನಡೆದಿದೆಲ್ಲ ಇತಿಹಾಸ

ಮೇಕೆದಾಟು ಪಾದಯಾತ್ರೆ

ತೀರ ಇತ್ತೀಚಿಗೆ 2022ರಲ್ಲಿ ಮೇಕೆದಾಟುಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಕನಕಪುರ ಸಂಗಮ ಕ್ಷೇತ್ರದಿಂದ ಬೆಂಗಳೂರಿನವರೆಗು ಪಾದಯಾತ್ರೆ ನಡೆಯಿತು. ಇದರಿಂದ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್​ ವರ್ಚಸ್ಸು ಹೆಚ್ಚಿತು.

ಪಾಂಚಜನ್ಯ ಪಾದಯಾತ್ರೆ

ಎಸ್​ಎಂ ಕೃಷ್ಣ ಅವರು ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಊದಿದ ಪಾಂಚಜನ್ಯ ಯಾತ್ರೆ ಮೂಲ ಕಾಂಗ್ರೆಸಿಗರ ಕಿವಿಯಲ್ಲಿ ಇನ್ನೂ ಗುನುಗುಡುತ್ತಿದೆ. ಎಸ್​ಎಂ ಕೃಷ್ಣ ಅವರ ನೇತೃತ್ವದಲ್ಲಿ 1999ರಲ್ಲಿ ರಾಜ್ಯಾದ್ಯಂತ ಪಾಂಚಜನ್ಯ ಯಾತ್ರೆ ನಡೆಸಲಾಗಿತ್ತು. ಇದರ ಫಲವಾಗಿಯೇ ವಿಧಾನಸಭೇ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದು ಅಧಿಕಾರದ ಗದ್ದುಗೆ ಏರಿತ್ತು.

ನರಗುಂದ ರೈತರ ಪಾದಯಾತ್ರೆ

ಮಲಪ್ರಭಾ ನೀರಾವರಿ ಪ್ರದೇಶದ ರೈತರ ಸಮನ್ವಯ ಸಮಿಯೊಂದನ್ನು ಸ್ಥಾಪಿಸಿಕೊಂಡು ನೀರಾವರಿ ಕಾಲುವೆಗಳ ರಿಪೇರಿ, ಬೆಳೆ ವಿಮೆ ಜಾರಿ, ರಸಗೊಬ್ಬರ ಕ್ರಿಮಿನಾಶಕಗಳಿಗೆ ರಿಯಾಯಿತಿ ಹಾಗೂ ಸಬ್ಸಿಡಿ ನೀಡಿಕೆ, ಅಭಿವೃದ್ಧಿ ಕರ ರದ್ಧತಿ ಮುಂತಾದ ಬೇಡಿಕಗಳನ್ನು ಇಡೇರಿಸುವಂತೆ 1980ರಲ್ಲಿ ನರಗುಂದದಿಂದ ಬೆಂಗಳೂರಿನವರೆಗೆ ರೈತರು ಪಾದಯಾತ್ರೆ ನಡೆಸಿದರು.

ರೈತ ಶ್ರಮಿಕರ ಪಾದಯಾತ್ರೆ

1980ರಲ್ಲಿ ಅಂದಿನ ಸರ್ಕಾರದ ರೈತ ವಿರೋಧಿ ನೀತಿ ಪ್ರತಿಭಟಿಸಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ನೇತೃತ್ವದಲ್ಲಿ ಸ್ಥಾಪನೆಗೊಂಡ ಪ್ರಗತಿಪರ ಪ್ರಜಾಸತ್ತಾತ್ಮಕ ರಂಗ ನರಗುಂದದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿತು. ಇದು ಕರ್ನಾಟಕದಲ್ಲಿ ರೈತಸಂಘ ಉದಯಕ್ಕೂ ನಾಂದಿ ಹಾಡಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:22 am, Fri, 2 August 24

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ