ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು: ಕರ್ನಾಟಕದಾದ್ಯಂತ ತೀವ್ರಗೊಂಡ ಬಿಜೆಪಿ ಪ್ರತಿಭಟನೆ

ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ-ಜೆಡಿಎಸ್ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಸಚಿವರು ಮುಖ್ಯಮಂತ್ರಿಗಳ ಬೆನ್ನಿಗೆ ನಿಂತಿದ್ದಾರೆ. ರಾಜ್ಯದಾದ್ಯಂತ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ಅಪ್​ಡೇಟ್ಸ್ ಇಲ್ಲಿವೆ.

ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು: ಕರ್ನಾಟಕದಾದ್ಯಂತ ತೀವ್ರಗೊಂಡ ಬಿಜೆಪಿ ಪ್ರತಿಭಟನೆ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
Follow us
|

Updated on: Sep 25, 2024 | 1:07 PM

ಬೆಂಗಳೂರು, ಸೆಪ್ಟೆಂಬರ್ 25: ಸಿಎಂ ಸಿದ್ದರಾಮಯ್ಯಗೆ ಮುಡಾ ಪ್ರಕರಣದ ತೂಗುಗತ್ತಿ ಮತ್ತಷ್ಟು ಚೂಪಾಗಿದ್ದು, ಸಿಎಂ ಕುರ್ಚಿ ಮೇಲೆಯೇ ನೇತಾಡುತ್ತಿದೆ. ಇದೇ ಅಸ್ತ್ರ ಮುಂದಿಟ್ಟಿರುವ ಜೆಡಿಎಸ್-ಬಿಜೆಪಿ ನಾಯಕರು ಸಿದ್ದರಾಮಯ್ಯ ರಾಜೀನಾಮೆಗೆ ಬಿಗಿ ಪಟ್ಟು ಬಿಗಿಹಿಡಿದಿದ್ದಾರೆ. ನೈತಿಕತೆಯ ಪ್ರಶ್ನೆ ಮಾಡುತ್ತಲೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಂತೂ ಮಂಗಳವಾರದಿಂದಲೇ ಅಲರ್ಟ್ ಆಗಿದ್ದಾರೆ. ಬುಧವಾರ ಕೂಡ ಯಾದಗಿರಿ, ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಬಿಜೆಪಿ ಮಾತ್ರವಲ್ಲ, ಜೆಡಿಎಸ್ ಕಾರ್ಯಕರ್ತರು ಕೂಡ ಬೀದಿಗಿಳಿದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಹೋರಾಟ ನಡೆಸಿ, ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇಷ್ಟೆ ಅಲ್ಲದೆ, ಸಿಎಂ ವಿರುದ್ಧ ಎಫ್​ಐಆರ್ ದಾಖಲಿಸಿ ಎಂದು ಮೈಸೂರು ಲೋಕಾಯುಕ್ತ ಎಸ್​​ಪಿಗೆ ಜೆಡಿಎಸ್ ನಿಯೋಗ ದೂರು ಕೊಟ್ಟಿದೆ.

ಭಂಡತನ ಬದಿಗಿಡಿ, ರಾಜೀನಾಮೆ ಕೊಡಿ: ಬಿಜೆಪಿ ಆಗ್ರಹ

ಬಿಜೆಪಿ ನಾಯಕರಿಗೆ ಹೈಕೋರ್ಟ್ ತೀರ್ಪಿನಿಂದ ಕೊಂಚ ಮೇಲುಗೈಯಾಗಿದೆ. ಸಿಕ್ಕಿದ್ದೇ ಅವಕಾಶ ಎಂದು ಕೇಸರಿ ಕಲಿಗಳು ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದ್ದಾರೆ. ಸಿಎಂ ಸಮರ್ಥನೆ ವಿರೋಧಿಸುತ್ತಲೇ, ಭಂಡತನ ಬದಿಗಿಟ್ಟು ರಾಜೀನಾಮೆ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಇತರ ನಾಯಕರು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬೆಂಬಲಕ್ಕೆ ನಿಂತ ಅಹಿಂದ ವರ್ಗ

ಒಂದೆಡೆ, ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದ್ದರೆ ಅಹಿಂದ ವರ್ಗ ಸಿಎಂ ಬೆಂಬಲಕ್ಕೆ ನಿಂತಿದೆ. ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಶನ್ ತೀರ್ಪು ಹಿನ್ನೆಲೆಯಲ್ಲಿ ಅಹಿಂದಾ ಮುಖಂಡರು ಹುಬ್ಬಳ್ಳಿಯಲ್ಲಿ ತುರ್ತು ಸಭೆ ಕರೆದಿದ್ದಾರೆ. ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ನೇತೃತ್ವದಲ್ಲಿ ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ನೂರಾರು ಮುಖಂಡರು ಭಾಗಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬಾರದು, ಅವರಿಗೆ ಬೆಂಬಲ ನೀಡಬೇಕೆಂದು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು.

ಅತ್ತ ಸಿಎಂ ಸಿದ್ದರಾಮಯ್ಯ ಪರ ಮಂಡ್ಯದಲ್ಲಿ ಶೋಷಿತ ಸಮುದಾಯಗಳ ಒಕ್ಕೂಟ ಮೌನ ಪ್ರತಿಭಟನೆ ನಡೆಸಿತು. ಸಿದ್ದರಾಮಯ್ಯ ವಿರುದ್ದ ಬಿಜೆಪಿ-ಜೆಡಿಎಸ್ ಷಡ್ಯಂತ್ರ ಮಾಡುತ್ತಿವೆ. ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಪ್ರಾಸಿಕ್ಯೂಷಸ್​ಗೆ ಅನುಮತಿ ನೀಡಲಾಗಿದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟ ಆರೋಪಿಸಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ಕಾರ್ಯಕರ್ತರು, ನಾಯಕರು ಪೊಲೀಸ್ ವಶಕ್ಕೆ

ಶೋಷಿತ ಸಮುದಾಯಗಳ ಒಕ್ಕೂಟದವರು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಪಾರ್ಕ್​ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಮೈತ್ರಿ ಪಕ್ಷದಿಂದ ಕಾಂಗ್ರೆಸ್ ಸರ್ಕಾರ ಉರುಳಿಸುವ ಪ್ರಯತ್ನವಾಗುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ