ಮುಡಾ ಹಗರಣ ವಿಚಾರ: ಜೆಡಿಎಸ್​​ ಕಾರ್ಯಕರ್ತರ ಸಭೆ, ನಿಖಿಲ್ ಕುಮಾರಸ್ವಾಮಿ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2024 | 8:19 PM

ಇಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್​ ನೇತೃತ್ವದಲ್ಲಿ ಮುಡಾ ಹಗರಣ ವಿಚಾರವಾಗಿ ಜೆಡಿಎಸ್​​ ಕಾರ್ಯಕರ್ತರ ಸಭೆ ಮಾಡಲಾಗಿದೆ. ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ನಿರ್ಧಾರ ಕೈಗೊಂಡಿದ್ದರೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷ ಅಧಿಕಾರದಲ್ಲಿರುತ್ತಿತ್ತು. ಈ ವಿಚಾರವನ್ನು ಎಲ್ಲಾ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದಿದ್ದಾರೆ.

ಮುಡಾ ಹಗರಣ ವಿಚಾರ: ಜೆಡಿಎಸ್​​ ಕಾರ್ಯಕರ್ತರ ಸಭೆ, ನಿಖಿಲ್ ಕುಮಾರಸ್ವಾಮಿ ಹೇಳಿದ್ದಿಷ್ಟು
ಮುಡಾ ಹಗರಣ ವಿಚಾರ: ಜೆಡಿಎಸ್​​ ಕಾರ್ಯಕರ್ತರ ಸಭೆ, ನಿಖಿಲ್ ಕುಮಾರಸ್ವಾಮಿ ಹೇಳಿದ್ದಿಷ್ಟು
Follow us on

ಮೈಸೂರು, ಜುಲೈ 27: ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ನಿರ್ಧಾರ ಕೈಗೊಂಡಿದ್ದರೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷ ಅಧಿಕಾರದಲ್ಲಿರುತ್ತಿತ್ತು ಅಂತ ಎಲ್ಲಾ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ಜೆಡಿಎಸ್​ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)  ಹೇಳಿದ್ದಾರೆ. ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಆಷಾಢ ಮುಗಿದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾದೆ

ಮಂಡ್ಯ ಜನರ ಆಶೀರ್ವಾದಿಂದ ಜೆಡಿಎಸ್​ಗೆ ಹೊಸ ಹುರುಪು ಬಂದಿದೆ. ಯುವಕರಿಗೆ ಅವಕಾಶ ಕೊಡ್ಬೇಕೆಂದು ನನಗೆ ಟಿಕೆಟ್​ ಕೊಟ್ಟಿದ್ದರು. ಆದರೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾದೆ. ಅದರ ಬಗ್ಗೆ ಮಾತಾಡುವುದಿಲ್ಲ‌ ಎಂದಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸರ್ವೆ ನಂಬರ್​ ಹುಡುಕಿಸಿ ನಾನೇ ಬಹಿರಂಗಪಡಿಸ್ತೇನೆ, ಸರ್ಕಾರಕ್ಕೆ ಸಾರಾ ಮಹೇಶ್ ಸವಾಲು

ವಿಧಾನಸೌಧದಲ್ಲಿ ಕುಮಾರಣ್ಣನ ಅನುಪಸ್ಥಿತಿ ಕಾಡುತ್ತಿದೆ. ಜೆಡಿಎಸ್​ನ 18 ಶಾಸಕರು ಇರಬಹುದು, ಎಲ್ಲರೂ ಧ್ವನಿ ಎತ್ತಿದರೆ. ನನ್ನ ಅನುಪಸ್ಥಿತಿ ಸರಿದೂಗಿಸಬಹುದು ಎಂದು ಹೇಳಿದ್ದಾರೆ. ಶಾಸಕರಿಗೆ ರಾಜ್ಯ ಸರ್ಕಾರ ಅನುದಾನವನ್ನೇ ಕೊಡುತ್ತಿಲ್ಲ. ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡಲು ಕುಮಾರಸ್ವಾಮಿ ಹೇಳಿದ್ದಾರೆ. ಶೀಘ್ರದಲ್ಲೇ ಪಾದಯಾತ್ರೆಗೆ ದಿನಾಂಕ ನಿಗದಿ ಮಾಡುತ್ತೇನೆ ಎಂದು ತಿಳಿಸಿದರು.

ಮುಡಾ ಹಗರಣ ವಿಚಾರವಾಗಿ ಜೆಡಿಎಸ್​​ ಕಾರ್ಯಕರ್ತರ ಸಭೆ

ಇಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್​ ನೇತೃತ್ವದಲ್ಲಿ ಮುಡಾ ಹಗರಣ ವಿಚಾರವಾಗಿ ಜೆಡಿಎಸ್​​ ಕಾರ್ಯಕರ್ತರ ಸಭೆ ಮಾಡಲಾಗಿದೆ. ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ ಮಾಡಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಹರೀಶ್​ ಗೌಡ, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಕೆ.ಅನ್ನದಾನಿ ಭಾಗಿ ಆಗಿದ್ದರು.

ಇದನ್ನೂ ಓದಿ: 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬರೆದಿಟ್ಟುಕೊಳ್ಳಿ; ಹೆಚ್​ಡಿಕೆಗೆ ಸವಾಲ್ ಹಾಕಿದ ಡಿಕೆ ಶಿವಕುಮಾರ್

ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್​​ ನಾಯಕರ ಪಟ್ಟಿಯನ್ನು ನಿನ್ನೆ ಕಾಂಗ್ರೆಸ್​ ಬಿಡುಗಡೆ ಮಾಡಿದೆ. ಸದ್ಯ ಈ ಬಗ್ಗೆ ಕೆಲ ಬಿಜೆಪಿ ಮತ್ತು ಜೆಡಿಎಸ್​ ನಾಯಕರುಗಳು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.