ಮುಡಾ ಹಗರಣ: ಸೈಟ್​ ಹಂಚಿಕೆ ಬಗ್ಗೆ ವಿವರ ಕೇಳಿದ ಕಾಗದ ಪತ್ರ ಸಮಿತಿ ಅಧ್ಯಕ್ಷ ರೇವಣ್ಣ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 02, 2024 | 6:29 PM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈವರೆಗೆ ಸೈಟ್​ ಹಂಚಿಕೆ ಬಗ್ಗೆ ರಾಜ್ಯಸಭಾ ಸದಸ್ಯರು, ಲೋಕಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರ ವಿವರನ್ನು ಕಾಗದ ಪತ್ರ ಸಮಿತಿ ಅಧ್ಯಕ್ಷ ಹೆಚ್​ಡಿ ರೇವಣ್ಣ ಕೇಳಿದ್ದಾರೆ. ಆದರೆ ಸಂಪೂರ್ಣ ವಿವರ ನೀಡಲು ಕನಿಷ್ಟ 3 ತಿಂಗಳ ಕಾಲಾವಕಾಶ ಬೇಕೆಂದು ಮುಡಾ ಅಧಿಕಾರಿಗಳು ಹೇಳಿದ್ದಾರೆ.

ಮುಡಾ ಹಗರಣ: ಸೈಟ್​ ಹಂಚಿಕೆ ಬಗ್ಗೆ ವಿವರ ಕೇಳಿದ ಕಾಗದ ಪತ್ರ ಸಮಿತಿ ಅಧ್ಯಕ್ಷ ರೇವಣ್ಣ
ಮುಡಾ ಹಗರಣ: ಸೈಟ್​ ಹಂಚಿಕೆ ಬಗ್ಗೆ ವಿವರ ಕೇಳಿದ ಕಾಗದ ಪತ್ರ ಸಮಿತಿ ಅಧ್ಯಕ್ಷ ರೇವಣ್ಣ
Follow us on

ಬೆಂಗಳೂರು, ಆಗಸ್ಟ್​ 2: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (muda) ಸೈಟ್​ ಹಂಚಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಪ್ರಕರಣ. ರಾಜ್ಯಪಾಲರಿಗೆ ನೀಡಿದ್ದ ಒಂದೇ ಒಂದು ದೂರು, ಸಿಎಂ ಸಿದ್ದರಾಮಯ್ಯ ಬುಡಕ್ಕೆ ಬಂದು ನಿಂತಿದೆ. ದೂರಿನ ಬಳಿಕ ರಾಜ್ಯಪಾಲರು ಹಗರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಮುಖ್ಯಕಾರ್ಯದರ್ಶಿಗೆ ವರದಿ ಕೇಳಿದ್ದರು. ಬಳಿಕ ಸಿದ್ದರಾಮಯ್ಯರಿಗೆ ಶೋಕಸ್ ನೋಟಿಸ್ ನೀಡಿದ್ದರು. ಇದೆಲ್ಲದರ ಮಧ್ಯೆ ಇದೀಗ ಸೈಟ್​ ಹಂಚಿಕೆ ಬಗ್ಗೆ ಮುಡಾದಿಂದ ಕಾಗದ ಪತ್ರ ಸಮಿತಿ ಅಧ್ಯಕ್ಷ ಹೆಚ್.ಡಿ.ರೇವಣ್ಣ (HD Revanna) ವಿವರ ಕೇಳಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈವರೆಗೆ ಸೈಟ್​ ಹಂಚಿಕೆ ಬಗ್ಗೆ ರಾಜ್ಯಸಭಾ ಸದಸ್ಯರು, ಲೋಕಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರ ವಿವರನ್ನು ಹೆಚ್​ಡಿ ರೇವಣ್ಣ ಕೇಳಿದ್ದಾರೆ. ಆದರೆ ಸಂಪೂರ್ಣ ವಿವರ ನೀಡಲು ಕನಿಷ್ಟ 3 ತಿಂಗಳ ಕಾಲಾವಕಾಶ ಬೇಕೆಂದು ಮುಡಾ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ, ಅವರ ನೋಟಿಸ್​ಗೆ ಹೆದರಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಮುಡಾ ಹಗರಣದ ವರದಿ ಕೇಳಿದ್ದೇ ತಡ, ಕಾಂಗ್ರೆಸ್ ನಾಯಕರು ಶೇಕ್ ಆಗಿದ್ದರು. ದೆಹಲಿಯಿಂದ ಬರ್ತಿದ್ದಂತೆ ನಿನ್ನೆ ರಾತ್ರಿ ಸಚಿವ ಕೆ.ಜೆ ಜಾರ್ಜ್ ನಿವಾಸದಲ್ಲಿ ಒಂದು ಸುತ್ತಿನ ಸಭೆ ನಡೆಸಿದ್ದರು. ಬೆಳಗ್ಗೆ ಸಿಎಂ ಕಾವೇರಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಸಭೆ ಮಾಡಲಾಗಿತ್ತು. ಸಭೆಯಲ್ಲಿ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿತ್ತು. ಸಚಿವರೆಲ್ಲರೂ ಸಿಎಂ ಬೆಂಬಲಕ್ಕೆ ನಿಲ್ಲೋದಾಗಿ ಅಭಯ ನೀಡಿದ್ದರು.

ತಮ್ಮ ವಿರುದ್ಧದ ಪ್ರಕರಣವೇ ಆಗಿದ್ದರಿಂದ ಸಂಪುಟ ಸಭೆಯಿಂದ ಅಂತರ ಕಾಯ್ದುಕೊಂಡ ಸಿಎಂ ಸಿದ್ದರಾಮಯ್ಯ ಸಭೆಯ ಅಥಾರಿಟಿಯನ್ನ ಡಿಕೆ ಶಿವಕುಮಾರ್​ಗೆ ನೀಡಿದ್ದರು. ಹೀಗಾಗಿ ನಿನ್ನೆ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಡಾ ದಾಖಲೆಗಳನ್ನ ತರಿಸಿಕೊಂಡು ಯಾರ್ಯಾರಿಗೆ ಸೈಟು ಹಂಚಿಕೆಯಾಗಿದೆ ಎನ್ನುವ ಬಗ್ಗೆ ಚರ್ಚೆ ಮಾಡಲಾಗಿತ್ತು.

ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ ನೊಟೀಸ್ ವಾಪಸಿಗೆ ಸಂಪುಟ ನಿರ್ಣಯ, ರಾಜ್ಯಪಾಲರ ಮುಂದಿನ ನಡೆ ಏನು?

ಕ್ಯಾಬಿನೆಟ್ ಸಭೆಯಲ್ಲೂ ಸಚಿವರು ಸಿಎಂಗೆ ಸಂಪೂರ್ಣ ಸಹಕಾರ ನೀಡಿದ್ದರು. ರಾಜ್ಯಪಾಲರ ನೋಟಿಸ್‌ನಲ್ಲಿ ಬಳಸಿದ ಪದ ಮತ್ತು ಒಕ್ಕಣಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯಪಾಲರು ಅಧಿಕಾರ ದುರುಪಯೋಗದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವರು, ರಾಜ್ಯಪಾಲರು ನೀಡಿರುವ ನೋಟಿಸ್‌ ಹಿಂಪಡೆಯುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಡಿಕೆ ಶಿವಕುಮಾರ್​ ಸುದ್ದಿಗೊಷ್ಠಿ ಮಾಡಿ ಸಿಎಂಗೆ ನೀಡಿದ್ದ ನೋಟಿಸ್‌ ಹಿಂಪಡೆಯುವಂತೆ ಸಚಿವರು ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.