AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ, ಅವರ ನೋಟಿಸ್​ಗೆ ಹೆದರಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಮುಡಾ ಹಗರಣ ವಿಚಾರವಾಗಿ ನೋಟಿಸ್ ನೀಡಿರುವುದರಿಂದ ಸಿಎಂ ಸಿದ್ದರಾಮಯ್ಯ ಕೆರಳಿದ್ದಾರೆ. ರಾಜ್ಯಪಾಲರ ವಿರುದ್ಧ ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಜರೆದಿದ್ದಾರೆ. ಸಿದ್ದರಾಮಯ್ಯ ಹೇಳಿದ್ದೇನು ಎಂಬ ವಿವರ ಇಲ್ಲಿದೆ.

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ, ಅವರ ನೋಟಿಸ್​ಗೆ ಹೆದರಲ್ಲ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲರು
ರಾಮ್​, ಮೈಸೂರು
| Updated By: Ganapathi Sharma|

Updated on: Aug 02, 2024 | 1:02 PM

Share

ಮೈಸೂರು, ಆಗಸ್ಟ್ 2: ಮುಡಾ ಹಗರಣ ಸಂಬಂಧ ರಾಜ್ಯಪಾಲರು ಶೋಕಾಸ್ ನೀಡಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಇದಕ್ಕೆಲ್ಲ ನಾನು ಹೆದರಲ್ಲ. ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ‌. ತಪ್ಪು ಮಾಡಿದ್ದರೆ ತಾನೇ ಹೆದರುವುದು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಜೆಡಿಎಸ್, ಬಿಜೆಪಿ ಕೈಗೊಂಬೆಯಾಗಿ ವರ್ತಿಸಿದ್ದಾರೆ. 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು ನಾನು ಎಂದರು.

ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ನೋಟಿಸ್​​ಗೆ ನಾನೇಕೆ ಹೆದರಲಿ. ಅಶೋಕ್ ಹೆದರಿರಬೇಕು ಅವರಿಗೆ ಭಯ ನನಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಟಿಜೆ ಅಹ್ರಾಂ ಬ್ಲ್ಯಾಕ್​​ಮೇಲರ್

ಟಿಜೆ ಅಹ್ರಾಂ ಒಬ್ಬ ಬ್ಲ್ಯಾಕ್​​ಮೇಲರ್. ಜುಲೈ 26 ಕ್ಕೆ ಬೆಳಿಗ್ಗೆ 11:30 ಕ್ಕೆ ಆತ ದೂರು ಕೊಡುತ್ತಾನೆ. ಆ ದೂರಿನ ಪರಾಮರ್ಶೆ ಮಾಡದೇ ಆ ದಿನ ಸಂಜೆಯೇ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್​ಕೆ ಅತೀಕ್​​ಗೆ ಹೇಳುತ್ತಾರೆ. ಜೊಲ್ಲೆ, ಮುರುಗೇಶ್ ನಿರಾಣಿ, ಜರ್ನಾರ್ಧನ ರೆಡ್ಡಿ ವಿರುದ್ಧದ ದೂರು ಇನ್ನೂ ಹಾಗೆಯೇ ಇವೆ. ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ನನಗೆ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಅನುಮತಿ: ಕಾಂಗ್ರೆಸ್ ಸರ್ಕಾರದಿಂದ ಮಹತ್ವದ ನಿರ್ಧಾರ

ಬಿಜೆಪಿ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್​ಡಿಕೆ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮುಡಾ ಕೇಸ್​​ನಲ್ಲಿ ಏನೂ ಇಲ್ಲ, ಪಾದಯಾತ್ರೆ ಬೇಡ ಅಂದಿದ್ದರು. ರಾಜ್ಯದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ನೆರೆ ಪರಿಸ್ಥಿತಿ ಅವಲೋಕಿಸಿ, ಜನರ ಸಮಸ್ಯೆ ಸ್ಪಂದಿಸಿ ಅಂದಿದ್ದರು. ಬಿಜೆಪಿಯವರ ಒತ್ತಡಕ್ಕೆ ಮಣಿದು ಪಾದಯಾತ್ರೆ ಬೆಂಬಲಿಸಿದ್ದಾರೆ. ಹಾಗಾದರೆ ಈಗ ಮಳೆ ಹಾನಿ, ಪ್ರವಾಹ ಹೋಗಿದೆಯಾ? ಹೆಚ್.ಡಿ.ಕುಮಾರಸ್ವಾಮಿ ಸ್ವಇಚ್ಛೆಯಿಂದ ಇದನ್ನು ಮಾಡುತ್ತಿಲ್ಲ. ಇದನ್ನೆಲ್ಲ ನಾವು ಎದುರಿಸಲು ಸಿದ್ಧರಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ