ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿವಾದ: ಮುಖ್ಯಮಂತ್ರಿ ಚಂದ್ರು, ಬಿವಿ ಶ್ರೀನಿವಾಸ್ ಪ್ರತಿಕ್ರಿಯೆ

Indira Canteen: ಹಿಂದುತ್ವದ ನಶೆ ತಲೆಗೇರಿದ್ದರಿಂದ ಹುಕ್ಕಾ ಬಾರ್ ಅಂತಾರೆ. ಜವಾಹರಲಾಲ್ ನೆಹರು ಬಗ್ಗೆ ಮಾತನಾಡುವ ಯೋಗ್ಯತೆ ಸಿ.ಟಿ. ರವಿಗೆ ಇದೆಯಾ? ನಾವು ಇಂದಿರಾ ಕ್ಯಾಂಟೀನ್ ಹೋರಾಟ ಮುಂದುವರಿಸ್ತೇವೆ ಎಂದು ಬಿ.ವಿ.ಶ್ರೀನಿವಾಸ್ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿವಾದ: ಮುಖ್ಯಮಂತ್ರಿ ಚಂದ್ರು, ಬಿವಿ ಶ್ರೀನಿವಾಸ್ ಪ್ರತಿಕ್ರಿಯೆ
ಮುಖ್ಯಮಂತ್ರಿ ಚಂದ್ರು ಹಾಗೂ ಬಿವಿ ಶ್ರೀನಿವಾಸ್
Follow us
TV9 Web
| Updated By: ganapathi bhat

Updated on: Aug 14, 2021 | 3:46 PM

ಕೋಲಾರ: ಆ ಕಾಲದಲ್ಲಿ ಹೆಸರು ಇಡೋವಾಗ್ಲೇ ಆಕ್ಷೇಪ ಮಾಡಬೇಕಿತ್ತು. ಈಗ ಹೆಸರು ಇಟ್ಟಾಗಿದೆ. ಇಟ್ಟ ಹೆಸರು ಅವತ್ತು ತಿರಸ್ಕಾರವಾಗಿಲ್ಲ. ಹೆಸರು ಇಟ್ಟ ಮೇಲೂ ಕಾಂಗ್ರೇಸ್ ಪಕ್ಷ ಬಿಟ್ಟು ಎಷ್ಟೋ ಪರ್ಯಾಯ ಪಕ್ಷಗಳು ಅಧಿಕಾರಿಕ್ಕೆ ಬಂದಿವೆ. ಬಿಜೆಪಿ ಸರ್ಕಾರವೂ ಸಹ ಅಧಿಕಾರಕ್ಕೆ ಬಂದಿತ್ತು. ನಮಗೆ ಇಷ್ಟ ಇಲ್ಲ ತೆಗೆದು ಹಾಕ್ತಿವಿ ಅಂತ ತೆಗೆದು ಹಾಕಬೇಕು. ಅದು ಬಿಟ್ಟು ಮಾತನಾಡುವಾಗ ಹೊಲಸು ಮಾತಗಳನ್ನು ಮಾತನಾಡಬಾರ್ದು ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಕೊಲಾರದಲ್ಲಿ ಅವರು ಇಂದು (ಆಗಸ್ಟ್ 14) ಪ್ರತಿಕ್ರಿಯೆ ನೀಡಿದ್ದಾರೆ.

ಒಂದಕ್ಕೊಂದು ಹೆಸರು ಈಗ ತಳುಕುಹಾಕಿಕೊಂಡು ಕೇಳಿಬರುತ್ತಿದೆ. ಅಟಲ್ ಬಿಹಾರಿ ವಾಜಪೇಯಿ, ಉಪಾದ್ಯಾಯರ ಹೆಸರುವರೆಗೂ ವಿಚಾರ ಹೋಯ್ತು. ಹಿಂದೆ ನಾವುಗಳು ಇಟ್ಟಿರುವ ಹೆಸರುಗಳು ಪೂರಕವಾಗಿಲ್ಲವೇ ಎಂದು ಪ್ರಶ್ನೆ ಇದೆ. ರಾಜಕಿಯವಾಗಿ ಇದನ್ನ ದಾಳ ಮಾಡಿಕೊಂಡು ಸಾರ್ವಜನಿಕರು ಅಸಹ್ಯ ಪಟ್ಟಕೊಳ್ಳುವ ರೀತಿ ವರ್ತಿಸಬೇಡಿ. ತೆಗೆದು ಹಾಕಬೇಕು ಎಂದ್ರೆ ಬೈ ನೇಮ್ ಇರೋದೆಲ್ಲಾ ತೆಗೆದು ಹಾಕಿ ಅದಕ್ಕೆ ಸಾರ್ವತ್ರಿಕವಾಗಿ ಹೆಸರುಗಳನ್ನ ಇಡಿ. ಇಲ್ಲದೆ ಇದ್ರೆ ಇರೋದನ್ನ ಬಿಟ್ಟು, ಮುಂದೆ ಹಾಗೋದಕ್ಕೆ ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಿ ಎಂದು ಕೋಲಾರ ಪತ್ರಕರ್ತರ ಭವನದ ಬಳಿ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿ.ಟಿ. ರವಿಗೆ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಿದ್ಧ: ಬಿ.ವಿ. ಶ್ರೀನಿವಾಸ್ ‘ಇಂದಿರಾ’ ಬದಲು ಅನ್ನಪೂರ್ಣ ಕ್ಯಾಂಟೀನ್ ಮಾಡಲಿ. ಆದ್ರೆ ಮೊದಲು ಇಂದಿರಾ ಕ್ಯಾಂಟೀನ್ ಸರಿಯಾಗಿ ನಡೆಸಲಿ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. ಈಗ ಸಿ.ಟಿ. ರವಿ ನೆಹರು ಬಗ್ಗೆ ಉಡಾಫೆ ಮಾತನಾಡುತ್ತಾರೆ. ಅವರಿಗೆ ಇತಿಹಾಸದ ಪುಸ್ತಕ ಬೇಕಾದರೆ ನಾವೇ ಕೊಡ್ತೇವೆ. ಈ ರೀತಿಯಾಗಿ ಹೇಳಿಕೆಗಳನ್ನು ನೀಡುವವರು ಅರೆ ಹುಚ್ಚರು. ಅವರಿಗೆ ಬೇಕಾದರೆ ಯುವ ಕಾಂಗ್ರೆಸ್​ನಿಂದ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತೇವೆ. ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಿದ್ಧ ಎಂದು ಶ್ರೀನಿವಾಸ್ ಕುಟುಕಿದ್ದಾರೆ.

ಹಿಂದುತ್ವದ ನಶೆ ತಲೆಗೇರಿದ್ದರಿಂದ ಹುಕ್ಕಾ ಬಾರ್ ಅಂತಾರೆ. ಜವಾಹರಲಾಲ್ ನೆಹರು ಬಗ್ಗೆ ಮಾತನಾಡುವ ಯೋಗ್ಯತೆ ಸಿ.ಟಿ. ರವಿಗೆ ಇದೆಯಾ? ನಾವು ಇಂದಿರಾ ಕ್ಯಾಂಟೀನ್ ಹೋರಾಟ ಮುಂದುವರಿಸ್ತೇವೆ ಎಂದು ಬಿ.ವಿ.ಶ್ರೀನಿವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ: ಗೋವಿಂದ ಕಾರಜೋಳ

TV9 Kannada Digital Poll: ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೇ? ಬೇಡವೇ? ನಿಮ್ಮ ಅಭಿಪ್ರಾಯ ತಿಳಿಸಿ

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ