ಕಲಬುರಗಿ ಕೋರಣೇಶ್ವರ ಮಠಕ್ಕೆ ಮಹಿಳಾ ಉತ್ತರಾಧಿಕಾರಿ; ಹೊಸ ಪರಂಪರೆಗೆ ನಾಂದಿ ಹಾಡಿದ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ

ಖಜೂರಿಯಲ್ಲಿರುವ ಕೋರಣೇಶ್ವರ ಮಠದಲ್ಲಿ ಹಿಂದಿನಿಂದ ಪದ್ಧತಿಯೊಂದು ನಡೆದುಕೊಂಡು ಬಂದಿದ್ದು, ಖಜೂರಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಲಿಂಗಾಯತ ಸಮಾಜದವರು ತಮ್ಮ ಹೆಣ್ಣು ಮಕ್ಕಳನ್ನು ಮಠಕ್ಕೆ ಬಿಡುತ್ತಾರೆ.

ಕಲಬುರಗಿ ಕೋರಣೇಶ್ವರ ಮಠಕ್ಕೆ ಮಹಿಳಾ ಉತ್ತರಾಧಿಕಾರಿ; ಹೊಸ ಪರಂಪರೆಗೆ ನಾಂದಿ ಹಾಡಿದ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ
ಮುರಘೇಂದ್ರ ಕೋರಣೇಶ್ವರ ಸ್ವಾಮೀಜಿ ಮಠದ ಉತ್ತರಾಧಿಕಾರಿಯನ್ನಾಗಿ ನೀಲಲೋಚನಾ ತಾಯಿ ಅವರನ್ನು ನೇಮಕ ಮಾಡಿದ ಕ್ಷಣ
Follow us
preethi shettigar
| Updated By: Skanda

Updated on:Apr 03, 2021 | 11:41 AM

ಕಲಬುರಗಿ ; ಸಾಮಾನ್ಯವಾಗಿ ರಾಜ್ಯದ ಅನೇಕ ಗುರು ವಿರಕ್ತ ಮಠಗಳಿಗೆ ಪುರುಷರೇ ಪೀಠಾಧಿಪತಿಗಳು ಹಾಗೂ ಉತ್ತರಾಧಿಕಾರಿಗಳಾಗಿ ನೇಮಕ ಆಗುತ್ತಾರೆ. ಪರಂಪರೆಯ ಹೆಸರಿನಲ್ಲಿ ಪುರುಷರ ನೇಮಕವೇ ಹೆಚ್ಚಿನ ಮಠಗಳಲ್ಲಿ ಇಂದಿಗೂ ನಡೆಯುತ್ತದೆ. ಮಹಿಳಾ ಸಮಾನತೆ ಬಗ್ಗೆ ಅನೇಕ ಸ್ವಾಮೀಜಿಗಳು ಮತಾನಾಡಿದರು ಕೂಡ ತಮ್ಮ ಮಠಗಳಿಗೆ ಮಹಿಳೆಯನ್ನು ಉತ್ತರಾಧಿಕಾರಿ ಮಾಡಿದ್ದು, ಮಹಿಳೆಯರಿಗೆ ಮಠದ ಪಟ್ಟಾಧಿಕಾರ ನೀಡಿದ್ದು ಕಡಿಮೆ. ಆದರೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿರುವ ಕೋರಣೇಶ್ವರ ಮಠಕ್ಕೆ, ಓರ್ವ ಮಹಿಳೆಯನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಮೂಲಕ, ಮಠದ ಪೀಠಾಧಿಪತಿಯಾಗಿರುವ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.

ಖಜೂರಿ ಗ್ರಾಮದ ಕೋರಣೇಶ್ವರ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಹಿಳೆಯನ್ನು ನೇಮಕ ಮಾಡುವ ಮೂಲಕ, ವಿರಕ್ತ ಪರಂಪರೆಯಲ್ಲಿ ಹೊಸ ಇತಿಹಾಸಕ್ಕೆ ಮಠದ ಪೀಠಾದಿಪತಿಯಾಗಿರುವ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಚಾಲನೆ ನೀಡಿದ್ದಾರೆ. ಮಾರ್ಚ್ 29 ರಂದು ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅನೇಕ ಭಕ್ತರ ಸಮ್ಮುಖದಲ್ಲಿ, 40 ವರ್ಷದ ನೀಲಲೋಚನಾ ತಾಯಿಯನ್ನು ಮಠದ ನೂತನ ಉತ್ತರಾಧಿಕಾರಿಯಾಗಿ, ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಕೋರಣೇಶ್ವರ ಮಠದ ಇತಿಹಾಸವೇನು? ಖಜೂರಿ ಗ್ರಾಮದಲ್ಲಿರುವ ಕೋರಣೇಶ್ವರ ಮಠ ಇತಿಹಾಸವನ್ನು ಹೊಂದಿರುವ ಮಠ. ಚಿತ್ರದುರ್ಗದ ಮುರುಘಾಮಠದ ಶಾಖಾ ಮಠವಾಗಿರುವ ಕೋರಣೇಶ್ವರ ಮಠವನ್ನು ಮರುಘಾಮಠದ ಸ್ವಾಮೀಜಿ 1700 ರಲ್ಲಿ ಪ್ರಾರಂಭ ಮಾಡಿದರು. ಅಂದಿನಿಂದ ವಿರಕ್ತ ಪರಂಪರೆಯನ್ನು ಪಾಲಿಸಿಕೊಂಡು ಬರುತ್ತಿದ್ದು, ಬಸವಣ್ಣನವರ ಆಚಾರ ವಿಚಾರಗಳನ್ನು ಪಾಲಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸದ್ಯ ಈಗ ಇರುವ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಮಠದ ಐದನೇ ಪೀಠಾಧಿಪತಿಯಾಗಿದ್ದಾರೆ. ಆರವತ್ತೊಂದು ವರ್ಷದ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಅನೇಕ ಮಠಗಳ ಉಸ್ತುವಾರಿಯನ್ನು ಹೊಂದಿದ್ದು, ಅನೇಕ ಕಡೆ ಪ್ರವಾಸ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಹೀಗಾಗಿ ತಮ್ಮ ನಂತರ, ಮಠವನ್ನು ಮುನ್ನೆಡೆಸಿಕೊಂಡು ಹೋಗುವ ಉದ್ದೇಶದಿಂದ ಮಹಿಳೆಯನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಇದೇ ಮುರಘೇಂದ್ರ ಕೋರಣೇಶ್ವರ ಸ್ವಾಮೀಜಿ, ಕೆಲ ವರ್ಷಗಳ ಹಿಂದಷ್ಟೇ ತಮ್ಮದೊಂದು ಶಾಖಾ ಮಠಕ್ಕೆ ಮುಸ್ಲಿಂ ವ್ಯಕ್ತಿಗೆ ಲಿಂಗಧೀಕ್ಷೆ ನೀಡಿ, ಅವರನ್ನೇ ಮಠಕ್ಕೆ ಸ್ವಾಮೀಜಿಯನ್ನಾಗಿ ನೇಮಕ ಮಾಡಿದ್ದರು. ಇದೀಗ ತಮ್ಮ ಮಠಕ್ಕೆ ಮಹಿಳೆಯನ್ನು ಉತ್ತರಾಧಿಕಾರಿಯನ್ನಾಗಿ ಮಾಡುವ ಮೂಲಕ, ಬಸವ ತತ್ವವನ್ನು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು, ಅದನ್ನು ಆಚರಣೆಗೆ ತರುವ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ.

ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಸ್ವಾಮೀಜಿ ಖಜೂರಿಯಲ್ಲಿರುವ ಕೋರಣೇಶ್ವರ ಮಠದಲ್ಲಿ ಹಿಂದಿನಿಂದ ಪದ್ಧತಿಯೊಂದು ನಡೆದುಕೊಂಡು ಬಂದಿದ್ದು, ಖಜೂರಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಲಿಂಗಾಯತ ಸಮಾಜದವರು ತಮ್ಮ ಹೆಣ್ಣು ಮಕ್ಕಳನ್ನು ಮಠಕ್ಕೆ ಬಿಡುತ್ತಾರೆ. ಮಠದಲ್ಲಿ ಅವರಿಗೆ ಶಿಕ್ಷಣ, ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ಕಲಿಸಲಾಗುತ್ತಿತ್ತು. ಅವರು ಬೆಳೆದು ದೊಡ್ಡವರಾದ ನಂತರ ಅವರನ್ನು ಜಂಗಮ ವರಗಳನ್ನು ನೋಡಿ ಮದುವೆ ಮಾಡಿಕೊಡಲಾಗುತ್ತಿತ್ತು. ಇದೇ ಪದ್ಧತಿಯಲ್ಲಿ ನೀಲಲೋಚನಾ ತಾಯಿಯನ್ನು ಕೂಡ ಅವರ ಹೆತ್ತವರು ಮಠಕ್ಕೆ ಬಿಟ್ಟಿದ್ದರು. ಆದರೆ ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಈ ಪದ್ಧತಿಗೆ 1997 ರಲ್ಲಿ ಬ್ರೇಕ್ ಹಾಕಿದ್ದರು.

ಹಳೆಯ ಪದ್ಧತಿಗೆ ತಿಲಾಂಜಲಿ ನೀಡಿದ ಅವರು ಯಾರು ಆಸಕ್ತಿಯಿಂದ ಮಠಕ್ಕೆ ಬರುತ್ತಾರೋ, ಅಂತವರಿಗೆ ಲಿಂಗದೀಕ್ಷೆ ನೀಡುವ ಕೆಲಸವನ್ನು ಪ್ರಾರಂಭಿಸಿದ್ದರು. ಇನ್ನು ನೀಲಲೋಚನಾ ತಾಯಿಗೆ ಕೂಡಾ 1997 ರಲ್ಲಿ ಲಿಂಗದೀಕ್ಷೆ ನೀಡಿದ್ದ ಸ್ವಾಮೀಜಿ, ಅವರಿಗೆ ಸನ್ಯಾಸತ್ವ ದೀಕ್ಷೆ ನೀಡಿದ್ದರು. ನಂತರ ಚಿತ್ರದುರ್ಗದಲ್ಲಿರುವ ಮುರುಘಾ ಮಠಕ್ಕೆ ಕಳುಹಿಸಿ, ಅಲ್ಲಿ ಬಸವ ತತ್ವ ಅಧ್ಯಯನ, ಬಸವತತ್ವದ ವಿಧಿವಿಧಾನಗಳನ್ನು ಕಲಿಯಲು ಹೇಳಿದ್ದರು. ಅದರಂತೆ ಬಸವತತ್ವ ಅಧ್ಯಯನ ಮಾಡಿದ್ದ ನೀಲಲೋಚನಾ ತಾಯಿ, 2005 ರಲ್ಲಿ ಮರಳಿ ಖಜೂರಿ ಮಠಕ್ಕೆ ಆಗಮಿಸಿ, ಮಠದಲ್ಲಿಯೇ ಸೇವೆ ಮಾಡಿಕೊಂಡಿದ್ದರು.

ಖಜೂರಿ ಮಠಕ್ಕೆ ಆಗಮಸಿದ್ದ ನೀಲಲೋಚನಾ ತಾಯಿ, ಮಠದಲ್ಲಿದ್ದುಕೊಂಡು ಶಿಕ್ಷಣ ಧಾಸೋಹ, ಅನ್ನ ಧಾಸೋಹ, ಜ್ಞಾನ ದಾಸೋಹದ ಸೇವೆಯನ್ನು ಮಾಡಿಕೊಂಡಿದ್ದರು. ನೀಲಲೋಚನಾ ತಾಯಿಯ ಭಕ್ತಿ, ತಿಳುವಳಿಕೆ, ಮತ್ತು ಮಠದ ಆಡಳಿತವನ್ನು ಅವರು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗುತ್ತಾರೆ ಎನ್ನುವುದನ್ನು ಅರಿತಿದ್ದ, ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಪುರುಷರನ್ನು ಮಠದ ಉತ್ತರಾಧಿಕಾರಿಯನ್ನು ಮಾಡುವ ಬದಲಾಗಿ, ಮಹಿಳೆಗೆ ಆ ಉನ್ನತ ಸ್ಥಾನ ನೀಡುವ ಉದ್ದೇಶದಿಂದ ನೀಲಲೋಚನಾ ತಾಯಿಯನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.

ಯಾರು ಈ ನೀಲಲೋಚನಾ ತಾಯಿ? ಸದ್ಯ ಖಜೂರಿಯ ಕೋರಣೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿರುವ ನೀಲಲೋಚನಾ ತಾಯಿ ಕೂಡ ಖಜೂರಿ ಗ್ರಾಮದವರೆ. ಗ್ರಾಮದ ಮಥುರಾಬಾಯಿ ಮತ್ತು ಹನುಮಂತಪ್ಪ ನಗರದ ದಂಪತಿಯ ಪುತ್ರಿಯಾಗಿರುವ ನೀಲಲೋಚನಾ ತಾಯಿ, ಎಸ್ಎಸ್ಎಲ್​ಸಿವರಗೆ ಮಹಾರಾಷ್ಟ್ರದ ಮುರಮ್​ನಲ್ಲಿ ಸಂಬಂಧಿಯೊಬ್ಬರ ಮನೆಯಲ್ಲಿದ್ದುಕೊಂಡು ಮರಾಠಿ ಭಾಷೆಯಲ್ಲಿ ಅಧ್ಯಯನ ಮಾಡಿದ್ದರು. ನಂತರ ಗ್ರಾಮಕ್ಕೆ ಮರಳಿ, ಖಜೂರಿ ಮಠದಲ್ಲಿ ಲಿಂಗಧೀಕ್ಷೆ ಹಾಗೂ ಸನ್ಯಾಸತ್ವದ ದೀಕ್ಷೆ ಪಡೆದುಕೊಂಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಖಜೂರಿ ಮಠದಲ್ಲಿಯೇ ಇದ್ದು, ಶಾಲೆಯನ್ನು ಪ್ರಾರಂಭಿಸಿ,ಮಕ್ಕಳಿಗೆ ಶಿಕ್ಷಣ ದಾಸೋಹದ ಜೊತೆಗೆ, ಅನ್ನ ದಾಸೋಹ, ಜ್ಞಾನ ದಾಸೋಹವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

heir mutt

ಖಜೂರಿಯ ಕೋರಣೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿರುವ ನೀಲಲೋಚನಾ ತಾಯಿ

ನನ್ನ ಮೇಲೆ ಹೆಚ್ಚಿನ ವಿಶ್ವಾಸದಿಂದ ಮುರುಘೇಂದ್ರ ಕೋರುಣೇಶ್ವರ ಸ್ವಾಮೀಜಿ, ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆ. ನಾನು ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಸ್ವಾಮೀಜಿಗಳು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದುಕೊಂಡು ಹೋಗುವ ಮೂಲಕ, ಜ್ಞಾನ ದಾಸೋಹ, ಅನ್ನ ದಾಸೋಹವನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಸಮಾಜಕ್ಕಾಗಿ ಸಮಾಜ ಸೇವೆ ಮಾಡುವ ಮಹದಾಸೆಯನ್ನು ಹೊಂದಿದ್ದು, ಸದ್ಯದ ಪೀಠಾಧಿಪತಿಯಾಗಿರುವ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇನೆ ಎಂದು ನೀಲಲೋಚನಾ ತಾಯಿ ಹೇಳಿದ್ದಾರೆ.

ಅನೇಕರು ಬಸವತತ್ವವನ್ನು ಹೇಳುತ್ತಾರೆ. ಆದರೆ ನುಡಿದಂತೆ ನಡೆಯುವುದಿಲ್ಲ. ತಮ್ಮ ಮಠ ವಿರಕ್ತ ಪರಂಪರೆಯ ಮಠ. ಬಸವತತ್ವವನ್ನು ಪಾಲಿಸುವ ಮಠ. ಹೀಗಾಗಿ ಮಹಿಳೆಯೊಬ್ಬರಿಗೆ ಮಠದ ಉತ್ತರಾಧಿಕಾರಿ ಮಾಡಿ, ಮುಂದೆ ಅವರನ್ನೇ ಮಠದ ಪೀಠಾಧಿಪತಿಯಾಗಿ ಮಾಡಲು ನಿರ್ಧಾರ ಕೈಗೊಂಡಿದ್ದೇವೆ. ಇತ್ತೀಚೆಗೆ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾಳೆ. ಹೀಗಾಗಿ ಮಠದ ಆಡಳಿತವನ್ನು ಕೂಡ ನಿಭಾಯಿಸುವ ಶಕ್ತಿ ಮಹಿಳೆಗೆ ಇದೆ. ನೀಲಲೋಚನಾ ತಾಯಿ, ಮಠವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಪೀಠಾಧಿಪತಿ ಮುರುಘೇಂದ್ರ ಕೋರುಣೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

(ವರದಿ: ಸಂಜಯ್ ಚಿಕ್ಕಮಠ- 9980510149)

ಇದನ್ನೂ ಓದಿ: ಶಿವರಾತ್ರಿಯಂದೇ ಮುಸ್ಲಿಂ ವ್ಯಕ್ತಿಗೆ ಲಿಂಗದೀಕ್ಷೆ ನೀಡಿದ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

(Murughendra Koraneshwar Swamiji announced woman as heir to Kalaburagi Koraneshwar Mutt)

Published On - 11:41 am, Sat, 3 April 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?