ಕವನಳ ಮದುವೆಗೆ ಮುಸ್ಲಿಂ ಸಹೋದರರ ಸಾರಥ್ಯ; ಮಂಗಳೂರಿನ ಉಳ್ಳಾಲದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ

ಎಂ.ಕೆ. ಹಂಜ್ ಅವರಂತೂ ಜುಲೈ 10ರಂದು ನಡೆದ ಮೆಹಂದಿ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲೇ ನೆರವೇರಿಸಿದರು. ಜುಲೈ 11ರಂದು ಭಾನುವಾರ ತಲಪಾಡಿಯ ದೇವಿನಗರದ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕವನ ಮತ್ತು ರಂಜಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಎಂ.ಕೆ. ಕುಟುಂಬದ ರಿಯಾಝ್, ಮುಬಾರಿಶ್, ರಝಾಕ್, ಹನೀಫ್ ಜಿದ್ದಾ ಹಾಗೂ ಯು.ಎಚ್. ಅಬ್ದುಲ್ ರಹ್ಮಾನ್ ಮದುವೆಯಲ್ಲಿ ಪಾಲ್ಗೊಂಡು ವಧೂವರರಿಗೆ ಶುಭಹಾರೈಸಿದರು.

ಕವನಳ ಮದುವೆಗೆ ಮುಸ್ಲಿಂ ಸಹೋದರರ ಸಾರಥ್ಯ; ಮಂಗಳೂರಿನ ಉಳ್ಳಾಲದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ
Follow us
TV9 Web
| Updated By: guruganesh bhat

Updated on:Jul 13, 2021 | 4:39 PM

ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಸ್ವರ್ಗದಲ್ಲಿ ನಿಶ್ಚಯವಾಗಿರುವ ಮದುವೆಗಳಿಗೂ ಈ ಲೋಕದಲ್ಲಿ ನೂರೆಂಟು ವಿಘ್ನಗಳು ಎದುರಾಗುತ್ತಿರುತ್ತವೆ. ಅದರಲ್ಲೂ ಈ ಕೊವಿಡ್ ಸಾಂಕ್ರಾಮಿಕ ತಂದಿಟ್ಟ ಸಮಸ್ಯೆಗಳು ಮದುವೆಯಂಥ ಕೌಟುಂಬಿಕ-ಸಾಮಾಜಿಕ ಸಮಾರಂಭಗಳಿಗೂ ಸಂಕಷ್ಟ ತಂದಿಟ್ಟಿದೆ. ಹೀಗಾಗಿ ಅನೇಕ ಮದುವೆಗಳು ಮುಂದೆ ಹೋಗಿವೆ, ಕೆಲವು ಮದುವೆಗಳು ರದ್ದಾಗಿವೆ, ಹಲವಾರು ಮದುವೆಗಳು ಪಕ್ಕದ ಮನೆಯವರಿಗೂ ಗೊತ್ತಾಗದಂತೆ ಸರಳವಾಗಿ ನಡೆದುಹೋಗಿವೆ. ಅದರಲ್ಲೂ ಕೆಳ ಮಧ್ಯಮ ಮತ್ತು ಬಡ ಕುಟುಂಬದವರು ಸರಳವಾದ ಮದುವೆ ನಡೆಸಲೂ ಹೆಣಗಾಡಬೇಕಾದ ಸ್ಥಿತಿ ಈಗ ಎಲ್ಲೆಡೆ ತಲೆದೋರಿದೆ.

ಮಂಗಳೂರು ಬಳಿಯ ಉಳ್ಳಾಲದ ಕವನ ತಂದೆ ಇಲ್ಲದ ತಬ್ಬಲಿ. ತಾಯಿ ಗೀತಾ ಅವರೊಂದಿಗೆ ಉಳ್ಳಾಲ ಮಂಚಿಲದ ಪುಟ್ಟ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕವನ ಅವರ ಮಾವ ಸುರೇಶ ಬಗಂಬಿಳ ಕೂಡ ಬಡ ಕೂಲಿ ಕಾರ್ಮಿಕ. ಈ ಸುರೇಶ ಮತ್ತು ಅವರ ಅಲೆಕಳದ ಎಂ.ಕೆ. ಮನೆತನದ ರಝಾಕ್ ಹಳೆಯ ಸ್ನೇಹಿತರು. ಸೊಸೆಯ ಮದುವೆ ಜವಾಬ್ದಾರಿ ಹೊತ್ತಿದ್ದ ಸುರೇಶ ಅವರಿಗೆ ಲಾಕ್‌ಡೌನ್‌ನಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಜುಲೈ 11 ರಂದು ನಡೆಯಲಿದ್ದ ಮದುವೆಗೆ ಹಣ ಹೊಂದಿಸುವ ಚಿಂತೆಯಲ್ಲೇ ಇದ್ದ ಸುರೇಶ, ಜುಲೈ ಒಂದರಂದು ತಮ್ಮ ಗೆಳೆಯ ರಝಾಕರೊಂದಿಗೆ ತಮ್ಮ ದುಗುಡ ಹಂಚಿಕೊಂಡರು. ಇವರ ಅಳಲನ್ನು ಗಮನಿಸಿದ ರಝಾಕ್, ಕೂಡಲೇ ತಮ್ಮ ಸಹೋದರ ಸಂಬಂಧಿ ಹಾಗೂ ಐದು ಭಾಷೆಯಲ್ಲಿ ಕ್ರಿಕೆಟ್ ಕಮೆಂಟರಿ ಕೊಡುವ ಎಂ.ಕೆ. ರಿಯಾಜ್ ಅವರನ್ನು ತಾವಿದ್ದ ಸ್ಥಳಕ್ಕೇ ಕರೆಸಿದರು.

ಮುಸ್ಲಿಂ ಸಮುದಾಯದ ಅಲೇಕಳದ ಈ ಎಂ.ಕೆ. ಕುಟುಂಬದಲ್ಲಿ ಬಡವರೂ ಇದ್ದಾರೆ, ಶ್ರೀಮಂತರೂ ಇದ್ದಾರೆ. ಯಾರೂ ಮದುವೆಯಂಥ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಎಂ.ಕೆ. ಮ್ಯಾರೇಜ್ ಫಂಡ್ ಎಂಬ ನಿಧಿಯನ್ನು ಸ್ಥಾಪಿಸಿದ್ದಾರೆ.

ಇದುವರೆಗೆ ತಮ್ಮ ಕುಟುಂಬದ ಸದಸ್ಯರಿಗೆ ಮಾತ್ರ ನೆರವು ನೀಡುತ್ತಿದ್ದ ಈ ಎಂ.ಕೆ. ಮ್ಯಾರೇಜ್ ಫಂಡ್‌ನ ಪದಾಧಿಕಾರಿಗಳಾದ ಯು.ಎಚ್. ಅಬ್ದುಲ್ ರಹಮಾನ್, ಎಂ.ಕೆ. ಹಂಝ್, ರಝಾಕ್, ರಿಯಾಜ್, ಮುಬಾರಿಷ್, ಹನೀಫ್ ಜಿದ್ದಾ, ಶಾವೀದ್ ಅಲ್ಮಾಜ್ ಮುಂತಾದವರು ಸುರೇಶ ಅವರ ಮನೆಗೆ ಭೇಟಿ ನೀಡಿದರು. ಅಲ್ಲಿ ಅವರಿಗೆ ಕಂಡದ್ದು ಕಟ್ಟಿಗೆ ಉರಿಸುವ ಒಲೆ. ಚಿಂತೆಗೊಳಗಾಗಿದ್ದ ಕವನ, ತಾಯಿ ಗೀತಾ ಮತ್ತು ಮತ್ತೊಬ್ಬ ಸಂಬಂಧಿ ವಿಧವೆ. ತಮ್ಮಿಂದಾಗಿ ಸುರೇಶಣ್ಣನಿಗೆ ತೊಂದರೆ ಆಗುತ್ತಿರುವುದರಿಂದ ತಾನು ಮತ್ತು ಮಗಳು ಕವನಳಿಗೆ ಜೀವನವೇ ಸಾಕಿಗಿದೆ ಅಂತ ಅಳತೊಡಗಿದರು ಗೀತಾ. ಈ ಕುಟುಂಬದ ಶೋಚನೀಯ ಸ್ಥಿತಿಯನ್ನು ಕಂಡು ಮಮ್ಮಲ ಮರುಗಿದರು. ಕೂಡಲೇ ರೇಶನ್, ಎಲ್.ಪಿ.ಜಿ. ಸಿಲಿಂಡರ್ ವ್ಯವಸ್ಥೆ ಮಾಡಿದರು.

ಮದುಮಕ್ಕಳು

ಎಂ.ಕೆ. ಹಂಜ್ ಅವರಂತೂ ಜುಲೈ 10ರಂದು ನಡೆದ ಮೆಹಂದಿ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲೇ ನೆರವೇರಿಸಿದರು. ಜುಲೈ 11ರಂದು ಭಾನುವಾರ ತಲಪಾಡಿಯ ದೇವಿನಗರದ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕವನ ಮತ್ತು ರಂಜಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಎಂ.ಕೆ. ಕುಟುಂಬದ ರಿಯಾಝ್, ಮುಬಾರಿಶ್, ರಝಾಕ್, ಹನೀಫ್ ಜಿದ್ದಾ ಹಾಗೂ ಯು.ಎಚ್. ಅಬ್ದುಲ್ ರಹ್ಮಾನ್ ಮದುವೆಯಲ್ಲಿ ಪಾಲ್ಗೊಂಡು ವಧೂವರರಿಗೆ ಶುಭಹಾರೈಸಿದರು.

ಕೋಮು ಸೌಹಾರ್ದದ ಈ ಮದುವೆಯ ಸುದ್ದಿ ಉಳ್ಳಾಲದ ಶಾಸಕ ಯು.ಟಿ. ಖಾದರ್ ಅವರ ಕಿವಿಗೂ ಬಿತ್ತು. ಅವರೂ ಒಂದು ದೊಡ್ಡ ಮೊತ್ತವನ್ನೇ ನೀಡಿ, ಇತರ ಮುಸ್ಲಿಂ ಬಾಂಧವರೂ ಈ ಮದುವೆಗೆ ನೆರವು ನೀಡಲು ಪ್ರೇರೇಪಿಸಿದರು. ಖಾದರ್ ಅವರು ಈ ಮದುವೆಯ ಬಗ್ಗೆ ತಮ್ಮ ಹರ್ಷ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Explainer: ಏನಿದು ರಿಪೇರಿ ಮಾಡಿಕೊಳ್ಳುವ ಹಕ್ಕು ಬೇಕೆಂಬ ಹೊಸ ಚಳವಳಿ? ಏನಿದೆ ಅನಿವಾರ್ಯತೆ?

Field Report: ಆನಂದಯ್ಯನ ಕೊರೊನಾ ಔಷಧ ಪರಿಣಾಮ ಬೀರುವುದೇ? ಔಷಧ ಸೇವಿಸಿದ ಕೊಪ್ಪಳದ ಜನರು ಹೇಳುವುದೇನು?

(Muslim brother helped Hindu girl marriage in Mangalore Ullal)

Published On - 4:24 pm, Tue, 13 July 21

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್