ಮೈಸೂರು, ಸೆಪ್ಟೆಂಬರ್ 19: ನಾಡಹಬ್ಬ ದಸರಾಗೆ (Dasara) ದಿನಗಣನೆ ಆರಂಭವಾಗಿದೆ. ದಸರಾ ಸಮೀಪಿಸುತ್ತಿದ್ದಂತೆ ಅರಮನೆಯಲ್ಲಿ ದಸರಾ ಸಿದ್ದತೆಗಳು ಭರದಿಂದ ಸಾಗಿದೆ. ಈ ನಡುವೆ ಅರಮನೆಗೆ ಅಳವಡಿಸಿರುವ 20 ಸಾವಿರ ಬಲ್ಬ್ ಬದಲಾಯಿಸುತ್ತಿದ್ದರೆ, ಮತ್ತೊಂದೆಡೆ ಅರಮನೆ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಯಲಾಗುತ್ತಿದೆ.
ವಿದ್ಯುತ್ ದೀಪಗಳಿಂದ ಕಂಗೊಳಿಸುವ ಮೈಸೂರು ಅರಮನೆ ನೋಡುವುದಕ್ಕೆ ಎರಡು ಕಣ್ಣುಗಳೇ ಸಾಲದು. ಅಷ್ಟೊಂದು ಅದ್ಭುತವಾಗಿ ದೀಪಾಲಂಕಾರದಲ್ಲಿ ಅರಮನೆ ಕಂಗೊಳಿಸುತ್ತೆ. ಇದೀಗ ದಸರಾ ಸಮೀಪಿಸುತ್ತಿದ್ದಂತೆ ಅರಮನೆಯಲ್ಲಿ ಅಳವಡಿಸಿರುವ ದೀಪಗಳಲ್ಲಿ ಕೆಟ್ಟುಹೋಗಿರುವ ವಿದ್ಯುತ್ ದೀಪಗಳನ್ನು ಬದಲಾಯಿಸುವ ಕಾರ್ಯ ಭರದಿಂದ ಸಾಗಿದೆ.
ಇಡೀ ಅರಮನೆಯನ್ನ ಒಂದು ಲಕ್ಷ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿದೆ. ಪ್ರತಿ ವರ್ಷ ದಸರಾ ಸಂಧರ್ಭದಲ್ಲಿ ಇಲ್ಲಿಗೆ ಅಳವಡಿಸಿರುವ ದೀಪಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತೆ. ಅದೇ ರೀತಿ ಈ ಬಾರಿಯುವ ವಿದ್ಯುತ್ ದೀಪಗಳನ್ನು ಸರಿಪಡಿಸುವ ಕಾರ್ಯವನ್ನ ಮಾಡಲಾಗುತ್ತಿದೆ. ಈ ವರ್ಷ ಸುಮಾರು 15-20 ಸಾವಿರದಷ್ಟು ವಿದ್ಯುತ್ ದೀಪಗಳು ಕೆಟ್ಟು ಹೋಗಿದೆ.
ಇದನ್ನೂ ಓದಿ: ಮೈಸೂರು ದಸರಾ ಪ್ರಾಯೋಜಕತ್ವದ ಪಟ್ಟಿ ಬಿಡುಗಡೆ: ಜಂಬೂಸವಾರಿ ಪ್ರಾಯೋಜಕತ್ವಕ್ಕೆ 2 ಕೋಟಿ ರೂ ನಿಗದಿ
ಎಲ್ಲೆಲ್ಲಿ ದೀಪಗಳು ಕೆಟ್ಟು ಹೋಗಿದೆ ಆ ಸ್ಥಳಗಳಲ್ಲಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಇವುಗಳು ಇನ್ ಕ್ಯಾಂಡಿಸೆಂಟ್ ಬಲ್ಬ್ಗಳಾಲಗಿದ್ದು ಇದರ ಉತ್ಪಾದನೆ ನಿಂತುಹೋಗಿದ್ದು, ಮಾರುಕಟ್ಟೆಯಲ್ಲಿ ಈ ಬಲ್ಬ್ಗಳು ಲಭ್ಯವಿಲ್ಲ. ಚಿನ್ನದಂತ ಮೆರುಗು ನೀಡುವಂತ ಊ ಬಲ್ಬ್ಗಳನ್ನು ಟೆಂಡರ್ ಕರೆದು ವಿಶೇಷವಾಗಿ ಅರಮನೆಗಾಗಿಯೇ ದೆಹಲಿ ಅಥವಾ ಚೆನೈನಲ್ಲಿ ತಯಾರಿಸಿ ತರಿಸಲಾಗುತ್ತಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಇನ್ನು ಇದೇ ರೀತಿ ಅರಮನೆಗೆ ಸುಣ್ಣ ಬಣ್ಣ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. ಸದ್ಯ ಹಬ್ಬದ ಸಂಧರ್ಭದಲ್ಲಿ ಮನೆಗಳಿಗೆ ಹೇಗೆ ಸುಣ್ಣ ಬಣ್ಣ ಬಳಿಯುತ್ತೇವೆ. ಅದೇ ಮಾದರಿಯಲ್ಲಿ ಇಡೀ ಅರಮನೆಯ ಪ್ರಾಂಗಣದಲ್ಲಿ ಬಣ್ಣ ಬಳಿಯಲಾಗುತ್ತಿದೆ. ಅದೇ ರೀತಿ ಅರಮನೆ ಆವರಣವನ್ನ ವಿವಿಧ ಹೂಗಳಿಂದ ಅಲಂಕರಿಸಲಾಗುತ್ತೆ. ಸುಮಾರು 15ಕ್ಕೂ ಹೆಚ್ಚು ಜಾತಿಯ 10 ಸಾವಿರಕ್ಕೂ ಹೆಚ್ಚು ಹೂಕುಂಡಗಳಿಂದ ಅಲಂಕರಿಸಲಾಗುತ್ತಿದೆ ಎಂದಿದ್ದಾರೆ.
ಒಟ್ಟಾರೆ ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ಇದಕ್ಕಾಗಿ ಅರಮನೆ ಆಡಳಿತ ಮಂಡಳಿ ಭರದಿಂದ ಸಿದ್ದತೆ ಮಾಡಿಕೊಳ್ಳುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:33 pm, Thu, 19 September 24