ಮೈಸೂರು, ಸೆಪ್ಟೆಂಬರ್ 25: ಅರಮನೆ ನಗರಿಯಲ್ಲಿ ದಸರಾ (Dasara) ಸಡಗರ ರಂಗೇರುತ್ತಿದೆ. ವಿಶ್ವ ವಿಖ್ಯಾತ ಜಂಬೂ ಸವಾರಿಗೆ ತಾಲೀಮು ಕೂಡ ಭರದಿಂದ ಸಾಗಿದೆ. ಈ ಮಧ್ಯೆ ಮೈಸೂರು ಅರಮನೆಯಲ್ಲಿ ರಾಜಮನೆತನದವರ ಧಾರ್ಮಿಕ ಪೂಜಾ ಕೈಂಕರ್ಯ ಕಾರ್ಯಕ್ರಮ ಹಿನ್ನೆಲೆ ಅರಮನೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ಬಗ್ಗೆ ಮೈಸೂರು ಅರಮನೆ ಆಡಳಿತ ವತಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ರಾಜವಂಶಸ್ಥರಿಂದ ಅರಮನೆಯಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೊಬರ್ 27ರವರೆಗೆ ನಡೆಯಲಿರುವ ಖಾಸಗಿ ಕಾರ್ಯಕ್ರಮ ನಡೆಯಲಿವೆ. ಸೆ.27ರಂದು ಸಿಂಹಾಸನ ಜೋಡಣೆ ಹಿನ್ನೆಲೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಅ.3ರಂದು ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಹಿನ್ನೆಲೆ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಇರುತ್ತದೆ.
ಇದನ್ನೂ ಓದಿ: ದಸರಾ ಹಬ್ಬ: ಮೈಸೂರಿಗೆ ತೆರಳುವ 34 ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ
ಅ.11 ಮತ್ತು 12ರಂದು ಆಯುಧಪೂಜೆ, ವಿಜಯದಶಮಿ ಹಿನ್ನೆಲೆ ಕೂಡ ಎರಡು ದಿನ ಪ್ರವಾಸಿಗರಿಗೆ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಅ.27ರಂದು ಸಿಂಹಾಸನ ವಿಸರ್ಜನೆ ಪ್ರಯುಕ್ತ ಬೆಳಿಗ್ಗೆ 10ರಿಂದ
ಮಧ್ಯಾಹ್ನ 1ರವರೆಗೆ ಸಹ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಗಜಪಡೆಯ ಮತ್ತೊಂದು ಹಂತದ ತಾಲೀಮಿಗೆ ಸಿದ್ಧತೆ ಮಾಡಲಾಗಿದೆ. ಸೆಪ್ಟೆಂಬರ್ 26, 29, ಅಕ್ಟೋಬರ್ 1ರಂದು ಬೆಳಗ್ಗೆ 11 ಗಂಟೆಗೆ ಮತ್ತೊಂದು ಹಂತದ ತಾಲೀಮಿಗೆ ಸಿದ್ಧತೆ ಮಾಡಲಾಗಿದ್ದು, ಜಂಬೂಸವಾರಿ ಆನೆಗಳು ಮತ್ತು ಕುದುರೆಗಳಿಗೆ ಕುಶಾಲ ತೋಪಿಗೆ ಬೆದರದಂತೆ ಪೂರ್ವಭಾವಿ ಅಭ್ಯಾಸ ಮಾಡಿಸಲಾಗುವುದು. ವಸ್ತು ಪ್ರದರ್ಶನ ಪ್ರಾಧಿಕಾರದ ಪಾರ್ಕಿಂಗ್ ಸ್ಥಳದಲ್ಲಿ ತಾಲೀಮು ನಡೆಯಲಿದೆ.
ಇದನ್ನೂ ಓದಿ: ಮೈಸೂರು ದಸರಾ ಗೋಲ್ಡ್ ಕಾರ್ಡ್ ವ್ಯವಸ್ಥೆ: ದರ ಎಷ್ಟು, ಖರೀದಿ ಹೇಗೆ? ಇದರ ಲಾಭವೇನು?
ಇನ್ನು ಮೈಸೂರು ಜಿಲ್ಲಾಡಳಿತದಿಂದ ಯುವ ದಸರಾ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅಕ್ಟೋಬರ್ 6ರಿಂದ 10ರವರೆಗೆ ಯುವ ದಸರಾ ನಡೆಯಲಿದ್ದು, ಅ.6ರಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಯುವದಸರಾ ಉದ್ಘಾಟಿಸಲಿದ್ದಾರೆ. ಈ ಬಾರಿ ಯುವ ದಸರಾದಲ್ಲಿ ಬಾಲಿವುಡ್ ಗಾಯಕರ ಮೆರುಗು ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:52 pm, Wed, 25 September 24