ದಸರಾ ಹಬ್ಬ: ಮೈಸೂರಿಗೆ ತೆರಳುವ 34 ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

ವಿಶ್ವವಿಖ್ಯಾತ ಮೈಸೂರು ದಸರಾ 2024ಕ್ಕೆ ತಯಾರಿ ಜೋರಾಗಿ ನಡೆದಿದೆ. ದಸರಾವನ್ನು ವೀಕ್ಷಿಸಲು ರಾಜ್ಯ, ಅಂತರರಾಜ್ಯ, ವಿದೇಶದಿಂದಲೂ ಜನರು ಆಗಮಿಸುತ್ತಾರೆ. ಇದರಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಳವಾಗಲಿದೆ. ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯವು ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಿದೆ.

ದಸರಾ ಹಬ್ಬ: ಮೈಸೂರಿಗೆ ತೆರಳುವ 34 ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ
ದಸರಾ, ರೈಲು
Follow us
Kiran Surya
| Updated By: ವಿವೇಕ ಬಿರಾದಾರ

Updated on:Sep 24, 2024 | 11:43 AM

ಬೆಂಗಳೂರು, ಸೆಪ್ಟೆಂಬರ್​​ 24: ದಸರಾ (Dasara 2024) ಸಂಬಂಧ ಮೈಸೂರಿಗೆ (Mysore) ಪ್ರಯಾಣಿಸುವರ ಸಂಖ್ಯೆ ಅಧಿಕವಾಗುವುದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಲಿದೆ. ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯವು (South Western Railway) 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಿದೆ.

ಹೆಚ್ಚು ಬೋಗಿಗಳನ್ನ ಜೋಡಿಸುವ ರೈಲುಗಳ ವಿವರ

 ಒಂದು ಸ್ಲೀಪರ್ ಕ್ಲಾಸ್

  1. ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್​​ಪ್ರೆಸ್​
  2. ಅಕ್ಟೋಬರ್ 1 ರಿಂದ 12ರವರೆಗೆ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಎಕ್ಸಪ್ರೆಸ್​​
  3. ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 06233/06234 ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್​ಪ್ರೆಸ್​
  4. ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್​ಪ್ರೆಸ್​
  5. ಅಕ್ಟೋಬರ್ 3 ರಿಂದ 14ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಎಕ್ಸಪ್ರೆಸ್​
  6. ಅಕ್ಟೋಬರ್ 1 ರಿಂದ 12 ರವರೆಗೆ ರೈಲು ಸಂಖ್ಯೆ 16591 ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸಪ್ರೆಸ್.
  7. ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 16592 ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸಪ್ರೆಸ್
  8. ಅಕ್ಟೋಬರ್ 2 ರಿಂದ 13 ರವರೆಗೆ ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸಪ್ರೆಸ್​
  9. ಅಕ್ಟೋಬರ್ 3 ರಿಂದ 14 ರವರೆಗೆ ರೈಲು ಸಂಖ್ಯೆ 16536 ​ಪಂಢರಪುರ ಗೋಲಗುಂಬಜ್ ಎಕ್ಸಪ್ರೆಸ್

ಎರಡು ಸ್ಲೀಪರ್ ಕ್ಲಾಸ್

  1. ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್​ಪ್ರೆಸ್​
  2. ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ಎಕ್ಸ್​ಪ್ರೆಸ್​

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಬಾಗಲಕೋಟೆ-ವಿಜಯಪುರ ನಡುವೆ ರೈಲು ಸಂಚಾರ 4 ದಿನ ರದ್ದು

ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿ

  1. ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 06543/06544 ಮೈಸೂರು-ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸ್ಪೆಷಲ್
  2. ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಎಕ್ಸಪ್ರೆಸ್
  3. ಅಕ್ಟೋಬರ್​ 3 ರಿಂದ 12ರವರೆಗೆ ಮೈಸೂರು-ತಾಳಗುಪ್ಪ ಕುವೆಂಪು ಎಕ್ಸಪ್ರೆಸ್​
  4. ಅಕ್ಟೋಬರ್​ 3 ರಿಂದ 12ರವರೆಗೆ ರೈಲು ಸಂಖ್ಯೆ 06273/06274 ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್
  5. ಅಕ್ಟೋಬರ್​​ 3 ರಿಂದ 12ರವರೆಗೆ ರೈಲು ಸಂಖ್ಯೆ 06581/06582 ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್.
  6. ಅಕ್ಟೋಬರ್​​ 3 ರಿಂದ 12ರವರೆಗೆ ರೈಲು ಸಂಖ್ಯೆ 06213 ಅರಸೀಕೆರೆ-ಮೈಸೂರು ಪ್ಯಾಸೆಂಜರ್
  7. ಅಕ್ಟೋಬರ್​ 5 ರಿಂದ 14ರವರೆಗೆ ರೈಲು ಸಂಖ್ಯೆ 06214 ಮೈಸೂರು-ಅರಸೀಕೆರೆ ಪ್ಯಾಸೆಂಜರ್
  8. ಅಕ್ಟೋಬರ್​ 3 ರಿಂದ 12ರವರೆಗೆ ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಎಕ್ಸಪ್ರೆಸ್​
  9. ಅಕ್ಟೋಬರ್​​ 5 ರಿಂದ 14ರವರೆಗೆ ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಎಕ್ಸಪ್ರೆಸ್​
  10. ಅಕ್ಟೋಬರ್​ 3 ರಿಂದ 12ರವರೆಗೆ ರೈಲು ಸಂಖ್ಯೆ 07365 ಶಿವಮೊಗ್ಗ ಟೌನ್-ಚಿಕ್ಕಮಗಳೂರು ಪ್ಯಾಸೆಂಜರ್
  11. ಅಕ್ಟೋಬರ್​ 5 ರಿಂದ 14ರವರೆಗೆ ರೈಲು ಸಂಖ್ಯೆ 07366 ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್
  12. ಅಕ್ಟೋಬರ್​​ 4 ರಿಂದ 13ರವರೆಗೆ ರೈಲು ಸಂಖ್ಯೆ 16239/16240 ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್​ಪ್ರೆಸ್​
  13. ಅಕ್ಟೋಬರ್​ 1 ರಿಂದ 12ರವರೆಗೆ ರೈಲು ಸಂಖ್ಯೆ 06267 ಅರಸೀಕೆರೆ-ಮೈಸೂರು ಪ್ಯಾಸೆಂಜರ್
  14. ಅಕ್ಟೋಬರ್​ 4 ರಿಂದ 15ರವರೆಗೆ ರೈಲು ಸಂಖ್ಯೆ 06268 ಮೈಸೂರು-ಅರಸೀಕೆರೆ ಪ್ಯಾಸೆಂಜರ್
  15. ಅಕ್ಟೋಬರ್​ 1 ರಿಂದ 12ರವರೆಗೆ ರೈಲು ಸಂಖ್ಯೆ 06269 ಮೈಸೂರು-ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್
  16. ಅಕ್ಟೋಬರ್​​ 3 ರಿಂದ 14ರವರೆಗೆ ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು-ಮೈಸೂರು
  17. ಅಕ್ಟೋಬರ್​ 2 ರಿಂದ 13ರವರೆಗೆ ರೈಲು ಸಂಖ್ಯೆ 16529 ಎಸ್ಎಂವಿಟಿ ಬೆಂಗಳೂರು-ಕರೈಕಲ್ ಎಕ್ಸ್​ಪ್ರೆಸ್
  18. ಅಕ್ಟೋಬರ್​ 3 ರಿಂದ 14ರವರೆಗೆ ಕರೈಕಲ್-ಎಸ್ಎಂವಿಟಿ ಬೆಂಗಳೂರು ಎಕ್ಸ್​ಪ್ರೆಸ್​ಗೆ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:34 am, Tue, 24 September 24

‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು