ಇಂಜಿನಿಯರ್ ಶ್ರೀನಿವಾಸ್ ಬ್ಯಾಂಕ್ ಲಾಕರ್‌ನಲ್ಲಿ ಎಸಿಬಿ ಅಧಿಕಾರಿಗಳಿಗೆ ಬಗೆದಷ್ಟೂ ಚಿನ್ನ ಪತ್ತೆ
ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಎಸಿಬಿ ಅಧಿಕಾರಿಗಳ ಲಾಕರ್ ತಲಾಷ್ ಅಂತ್ಯವಾಗಿದ್ದು, ಪ್ರಿಂಟರ್, ಎರಡು ಬ್ಯಾಗ್‌ನೊಂದಿಗೆ 8 ಎಸಿಬಿ ಅಧಿಕಾರಿಗಳು ಬ್ಯಾಂಕ್‌ನಿಂದ ಹೊರ ಬಂದಿದ್ದಾರೆ. ಶ್ರೀನಿವಾಸ್ ಅವರ ಲಾಕರ್‌ನಲ್ಲಿ ಬಗೆದಷ್ಟೂ ಚಿನ್ನ ಪತ್ತೆಯಾಗಿದೆ.

ಮೈಸೂರು: ಎಸಿಬಿ ಅಧಿಕಾರಿಗಳು ನಿನ್ನೆ ಸುಮಾರು 15 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಅವರ ಪೈಕಿ ಕೆ.ಆರ್ ಪೇಟೆಯಲ್ಲಿ ಇಂಜಿನಿಯರ್ ಆಗಿರುವ ಕೆ. ಶ್ರೀನಿವಾಸ್ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಖಲೆ, ಹಣ ತುಂಬಲು ಅಂಗಡಿಯಿಂದ ಮತ್ತೊಂದು ದೊಡ್ಡ ಟ್ರಂಕ್ ಅನ್ನು ಎಸಿಬಿ ಸಿಬ್ಬಂದಿ ಖರೀದಿಸಿ ತಂದಿದ್ದಾರೆ. ಶಾಂತಗೌಡರ ಮನೆಯಲ್ಲಿ ಜಪ್ತಿ ಮಾಡಿದ್ದ ಹಣ, ದಾಖಲೆಯನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಿನ್ನೆ ಶ್ರೀನಿವಾಸ್ ಮನೆಯಲ್ಲಿ ಬರೋಬ್ಬರಿ 3 ಕೆಜಿ ಚಿನ್ನ ಪತ್ತೆಯಾಗಿತ್ತು. ಮೈಸೂರಿನ ಸರಸ್ವತಿಪುರಂನ ಕೆನರಾ ಬ್ಯಾಂಕ್ನ ಎಇ ಶ್ರೀನಿವಾಸ್ ಲಾಕರ್‌ನಲ್ಲಿ ಪತ್ತೆಯಾದ ಚಿನ್ನದ ಮೌಲ್ಯ ಬರೋಬ್ಬರಿ 42,10,000 ರೂ. ಹಾಗೇ, 1,900 ರೂ. ಮೌಲ್ಯದ 60 ಗ್ರಾಂ ಬೆಳ್ಳಿ ಕೂಡ ಪತ್ತೆಯಾಗಿದೆ. ಬಿಡಿಎ ಕಚೇರಿಗಳಲ್ಲಿ ಎಸಿಬಿ ದಾಳಿ ಮುಂದುವರೆದಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಎಸಿಬಿ ಅಧಿಕಾರಿಗಳ ಲಾಕರ್ ತಲಾಷ್ ಅಂತ್ಯವಾಗಿದ್ದು, ಪ್ರಿಂಟರ್, ಎರಡು ಬ್ಯಾಗ್‌ನೊಂದಿಗೆ 8 ಎಸಿಬಿ ಅಧಿಕಾರಿಗಳು ಬ್ಯಾಂಕ್‌ನಿಂದ ಹೊರ ಬಂದಿದ್ದಾರೆ. ತನಿಖೆ ನಂತರ ಮನೆಗೆ ತೆರಳಿದ ಶ್ರೀನಿವಾಸ್ ದಂಪತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಶ್ರೀನಿವಾಸ್ ಬಳಿ ಬರೋಬ್ಬರಿ 3 ಕೆಜಿ ಚಿನ್ನ ಪತ್ತೆಯಾಗಿದ್ದು, ಶ್ರೀನಿವಾಸ್ ಮನೆಯಲ್ಲಿ ನಿನ್ನೆ ಒಂದೂವರೆ ಕೆಜಿ ಚಿನ್ನ ಪತ್ತೆಯಾಗಿತ್ತು. ಲಾಕರ್‌ಗಳಲ್ಲಿಂದು ಒಂದೂವರೆ ಕೆಜಿಗೂ ಹೆಚ್ಚು ಚಿನ್ನ ಪತ್ತೆಯಾಗಿದೆ. ಬ್ಯಾಂಕ್‌ನಲ್ಲಿ ಮತ್ತಷ್ಟು ಲಾಕರ್ ಹೊಂದಿರುವ ಮಾಹಿತಿಯಿದ್ದು, ಹೀಗಾಗಿ, ಎಲ್ಲ ಲಾಕರ್ ಬಗ್ಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗೆ ಒಟ್ಟು 3 ಕೆಜಿಯಷ್ಟು ಚಿನ್ನ ಪತ್ತೆಯಾಗಿದ್ದು, ಬೆಳ್ಳಿ ವಸ್ತುಗಳನ್ನು ಇನ್ನೂ ತೂಕ ಮಾಡಿಲ್ಲ.
ಶ್ರೀನಿವಾಸ್ ಅವರ ಲಾಕರ್‌ನಲ್ಲಿ ಬಗೆದಷ್ಟೂ ಚಿನ್ನ ಪತ್ತೆಯಾಗಿದೆ. ಬ್ಯಾಂಕ್ ನ ಎರಡು ಲಾಕರ್ ನಲ್ಲಿ ಒಂದೂವರೆ ಕೆ.ಜಿ ಗೂ ಹೆಚ್ಚು ಚಿನ್ನ ಪತ್ತೆಯಾಗಿದೆ. ನಗರದ ಸರಸ್ವತಿ ಪುರಂ ಕೆನರಾ ಬ್ಯಾಂಕಿನಲ್ಲಿ ಇಟ್ಟಿರುವ ಶ್ರೀನಿವಾಸ್ ಮನೆಯಲ್ಲಿ ನಿನ್ನೆ ಒಂದೂವರೆ ಕೆ.ಜಿ ಚಿನ್ನ ಸಿಕ್ಕಿತ್ತು. ಇದೀಗ ಬ್ಯಾಂಕ್ನ ಲಾಕರ್‌ನಲ್ಲಿ ಒಂದೂವರೆ ಕೆ.ಜಿ.ಗೂ ಹೆಚ್ಚು ಚಿನ್ನ ಪತ್ತೆಯಾಗಿದೆ. ಈಗಾಗಲೇ ಎರಡು ಲಾಕರ್ ತೆಗೆಸಿರುವ ಅಧಿಕಾರಿಗಳು ಮತ್ತೆ ತನಿಖೆ ಮುಂದುವರೆಸಿದ್ದಾರೆ.
ಶ್ರೀನಿವಾಸ್ ಅವರನ್ನು ಕೂರಿಸಿಕೊಂಡು ಎಲ್ಲಾ ದಾಖಲೆಗಳ ಪರಿಶೀಲನೆ ನಡೆಸಿರುವ ಎಸಿಬಿ ಅಧಿಕಾರಿಗಳು ಮೈಸೂರಿನ ಸರಸ್ವತಿಪುರಂ ಕೆನರಾ ಬ್ಯಾಂಕ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಸತತ ನಾಲ್ಕು ಗಂಟೆಗಳಿಂದ ಬ್ಯಾಂಕ್‌ನಲ್ಲಿ ಎಸಿಬಿ ಪರಿಶೀಲನೆ ನಡೆಸಿದೆ. PWD ಇಲಾಖೆಯಲ್ಲಿ ಹವಾ ಇಟ್ಟಿದ್ದ ಕಲಬುರಗಿ ಜಿಲ್ಲೆ ಜೇವರ್ಗಿ PWD ಕಚೇರಿ ಜೆಇ ಶಾಂತಗೌಡ ಬಿರಾದರ್ ಹಿರಿಯ ಅಧಿಕಾರಿಗಳಿಗಿಂತ ಶಾಂತಗೌಡ ಮಾತೇ ನಡೆಯುತ್ತಿತ್ತು. ಕಿರಿಯ ಇಂಜಿನಿಯರ್ ಆಗಿದ್ದರೂ ಹವಾ ಇಟ್ಟಿದ್ದ ಶಾಂತಗೌಡ ಸುಲಭವಾಗಿ ತನ್ನ ಫೈಲ್ ಸಹಿ ಮಾಡಿಸಿಕೊಳ್ಳುತ್ತಿದ್ದರು.
ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರುದ್ರೇಶಪ್ಪ ಬ್ಯಾಂಕ್ ಲಾಕರ್ ಪರಿಶೀಲನೆ ಅಂತ್ಯವಾಗಿದ್ದು, ಎಸ್‌ಬಿಐ ಬ್ಯಾಂಕ್‌ನಲ್ಲಿ ಪರಿಶೀಲನೆ ಮುಕ್ತಾಯವಾಗಿದೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಬ್ಯಾಂಕ್ ಲಾಕರ್‌ನಲ್ಲಿ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಹೀಗಾಗಿ ರುದ್ರೇಶಪ್ಪನನ್ನು ವಾಪಸ್ ಕರೆದೊಯ್ದ ಎಸಿಬಿ ಇಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಯಿದೆ. ಕೃಷಿ ಅಧಿಕಾರಿ ರುದ್ರೇಶಪ್ಪನವರ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ಬ್ಯಾಂಕ್‌ನಲ್ಲಿ ಲಾಕರ್ ಓಪನ್ ಪ್ರಕ್ರಿಯೆ ಅಂತ್ಯವಾಗಿದೆ. ಬ್ಯಾಂಕ್ ಲಾಕರ್‌ನಲ್ಲಿ ಯಾವುದೇ ಮಹತ್ವದ ದಾಖಲೆ ಸಿಗದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಎಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಸಂಜೆ ಕೋರ್ಟ್‌ಗೆ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.
ಇದನ್ನೂ ಓದಿ: ಎಸಿಬಿ ಭರ್ಜರಿ ದಾಳಿ: ಭ್ರಷ್ಟರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಫಿಕ್ಸ್, ಜೈಲು ಶಿಕ್ಷೆ ಆಗಬಹುದಾ? ಒಂದು ಪಕ್ಷಿನೋಟ