ಮೈಸೂರಲ್ಲಿ ವಾಹನ ಡಿಕ್ಕಿಯಿಂದ ಗಾಯಗೊಂಡಿದ್ದ ಚಿರತೆ ಚಿಕಿತ್ಸೆ ಫಲಿಸದೆ ಸಾವು

ಮೈಸೂರು ಹೊರವಲಯದ ರಿಂಗ್‌ರಸ್ತೆಯ ಉತ್ತನಹಳ್ಳಿ ಪೊಲೀಸ್ ಬಡಾವಣೆ ಬಳಿ ನಿನ್ನೆ (ಜ.6) ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದಿದೆ.

ಮೈಸೂರಲ್ಲಿ ವಾಹನ ಡಿಕ್ಕಿಯಿಂದ ಗಾಯಗೊಂಡಿದ್ದ ಚಿರತೆ ಚಿಕಿತ್ಸೆ ಫಲಿಸದೆ ಸಾವು
ಅಪಘಾತದಲ್ಲಿ ಗಾಯಗೊಂಡಿರುವ ಚಿರತೆ
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 07, 2023 | 11:08 PM

ಮೈಸೂರು: ಮೈಸೂರು ಹೊರವಲಯದ ರಿಂಗ್‌ರಸ್ತೆಯ ಉತ್ತನಹಳ್ಳಿ ಪೊಲೀಸ್ ಬಡಾವಣೆ ಬಳಿ ನಿನ್ನೆ (ಜ.6) ಅಪರಿಚಿತ ವಾಹನವೊಂದು ಚಿರತೆಗೆ (Lepord) ಡಿಕ್ಕಿ ಹೊಡೆದಿತ್ತು. ಚಿರತೆಯ ಸೊಂಟಕ್ಕೆ ಗಂಭೀರ ಗಾಯವಾಗಿತ್ತು. ಮೇಲೆ ಎದ್ದೇಳಲು ಆಗದೆ ಚಿರತೆ ನರಳಾಡುತ್ತಿತ್ತುದ್ದು, ಹತ್ತಿರ ಹೋದವರ ಮೇಲೆ‌ ಅಟ್ಯಾಕ್ ಮಾಡಲು ಯತ್ನಸುತ್ತಿತ್ತು. ನಂತರ ಸ್ಥಳಿಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಅಧಿಕಾರಿಗಳು ಚಿರತೆಯನ್ನು ಚಿಕಿತ್ಸೆ ತೆಗೆದುಕೊಂಡು ಹೋಗಿದ್ದರು. ಆದರೆ ಗಂಭೀರ ಗಾಯ ಗಾಯಗೊಂಡಿದ್ದ ಚಿರತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು (ಜ.7) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಗಾಯಗೊಂಡ ಚಿರತೆಯ ವಿಡಿಯೋ ವೈರಲ್ ಆಗಿದೆ.

ಮಹಿಳೆ ಮೇಲೆ ಚಿರತೆ ದಾಳಿ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ಮಂಡ್ಯ: ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಗೆ ಹೋದ ಬಸಮ್ಮಣ್ಣಿ ಎಂಬ ಗೃಹಿಣಿ ಮೇಲೆ ಏಕಾ ಏಕಿ ಚಿರತೆ ದಾಳಿ ಮಾಡಿದೆ. ಮಹಿಳೆಯು ಗಾಬರಿಯಿಂದ ಕಿರುಚಾಡುತ್ತಾ ಚಿರತೆಗೆ ಒದ್ದಿದ್ದು, ಚಿರತೆ ಗುಂಡಿಯೊಳಗೆ ಬಿದ್ದಿದೆ. ಮಹಿಳೆಯ ಕೂಗು ಕೇಳುತ್ತಿದ್ದಂತೆ ಅಕ್ಕ ಪಕ್ಕದ ಜನರು ಬಂದಿದ್ದಾರೆ. ತಕ್ಷಣವೇ ಚಿರತೆ ಅಲ್ಲಿಂದ ಓಡಿ ಹೋಗಿದೆ. ಮಹಿಳೆಯು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಬಂದಿದ್ದು ಚಿರತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಕಾಡುತ್ತಿದೆ ಚಿರತೆ, ನಿನ್ನೆ ಮೊನ್ನೆ ಶ್ವಾನದ ಮೇಲೆ ದಾಳಿಯಾಗುತ್ತಿದ್ದು ಈಗ ಮನುಷ್ಯರ ಮೇಲೆ ದಾಳಿ ಮಾಡಲು ಆರಂಭಿಸಿದೆ. ಪದೇ ಪದೇ ಹೆಚ್ಚುತ್ತಿರುವ ಚಿರತೆ ದಾಳಿಗೆ ಗ್ರಾಮಸ್ಥರು ಭಯದಿಂದ ಹೊರ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕತ್ತಲಾಗುತ್ತಿದ್ದಂತೆ ಮನೆಯಿಂದ ಆಚೆ ಬರಲಾರದೆ ಗ್ರಾಮಸ್ಥರ ಪೀಕಲಾಟ ಹೇಳತೀರದು. ಕೂಡಲೇ ಚಿರತೆಯನ್ನ ಸೆರೆ ಹಿಡಿಯುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:ಮಂಡ್ಯ; ಒಂದೇ ತಿಂಗಳಲ್ಲಿ ಬೋನಿಗೆ ಬಿದ್ದ 3 ಚಿರತೆಗಳು; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ನಿನ್ನೆಯಷ್ಟೇ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲಿನಲ್ಲಿರುವ ಶಿವರಾಮ್ ಎಂಬುವವರ ತೋಟದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿತ್ತು. ಕಳೆದ 30 ದಿನಗಳಲ್ಲಿ ಬೋನಿಗೆ ಬಿದ್ದ ಮೂರನೇ ಚಿರತೆ ಇದಾಗಿದ್ದು, ಡಿಸೆಂಬರ್ 12 ಹಾಗೂ ಡಿಸೆಂಬರ್ 27 ರಂದು ಎರಡು ಚಿರತೆಗಳನ್ನ ಸೆರೆ ಹಿಡಿಯಲಾಗಿತ್ತು. ಇನ್ನೇನು ಚಿರತೆಯಿಂದ ಬಚಾವ್​ ಆದ್ವಿ ಅನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಮತ್ತೆ ಚಿರತೆ ಅಟ್ಟಹಾಸ ಶುರುವಾಗಿದೆ. ಆದಷ್ಟು ಬೇಗ ಚಿರತೆಯನ್ನ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ತಮ್ಮ ಅಳಲನ್ನ ಅರಣ್ಯಾಧಿಕಾರಿಗಳ ಮುಂದೆ ತೋಡಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ