AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore: ಹೃದಯಾಘಾತದಿಂದ ಸಶಸ್ತ್ರ ಮೀಸಲು ಪಡೆ ಪೊಲೀಸ್ ಸಿಬ್ಬಂದಿ ಸಾವು

ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಶ್ಯಾಮ್ (38) ಮೃತ ಪೊಲೀಸ್ ಸಿಬ್ಬಂದಿ.

Mysore: ಹೃದಯಾಘಾತದಿಂದ ಸಶಸ್ತ್ರ ಮೀಸಲು ಪಡೆ ಪೊಲೀಸ್ ಸಿಬ್ಬಂದಿ ಸಾವು
ಕಾನ್ಸ್‌ಟೇಬಲ್‌ ಶ್ಯಾಮ್‌
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 27, 2022 | 8:11 PM

Share

ಮೈಸೂರು: ಹೃದಯಾಘಾತದಿಂದ (heart attack) ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ನಗರ ಸಶಸ್ತ್ರ ಮೀಸಲು ಪಡೆ (CAR)ಯ ಶ್ಯಾಮ್ (38) ಮೃತ ಪೊಲೀಸ್ ಸಿಬ್ಬಂದಿ. ಮೂಲತಃ ಶ್ಯಾಮ್ ಮೈಸೂರು ನಿವಾಸಿಯಾಗಿದ್ದರು. ಹೃದಯಾಘಾತದಿಂದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಇನ್ಸ್​ಪೆಕ್ಟರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ K.R​.ಪುರ ಠಾಣೆ ಇನ್ಸ್​ಪೆಕ್ಟರ್​ ನಂದೀಶ್​ ಮೃತ ಇನ್ಸ್​ಪೆಕ್ಟರ್. ಹೃದಯಾಘಾತದಿಂದ ಕೆ.ಆರ್​.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಂದೀಶ್‌ ಮೈಸೂರಿನ ಹುಣಸೂರು ಮೂಲದವರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019 ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕಳೆದ ವಾರವಷ್ಟೇ ಇನ್ಸ್​ಪೆಕ್ಟರ್​ ನಂದೀಶ್ ಸಸ್ಪೆಂಡ್​ ಆಗಿದ್ದರು. ಏರಿಯಾದಲ್ಲಿ ಅವಧಿ ಮೀರಿ ಪಬ್​ ನಡೆಸಲು ಅವಕಾಶ ನೀಡಿದ್ದಕ್ಕೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶಿಸಿದ್ದರು.

ಹಾಡು ಹಗಲೇ ಮನೆ ಕಳ್ಳತನ

ವಿಜಯಪುರ: ಹಾಡು ಹಗಲೇ ಮನೆ ಕಳ್ಳತನ ಮಾಡಿದ್ದು, 30 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ, 80 ಸಾವಿರ ನಗದು ಕಳ್ಳತನ ಮಾಡಿರುವಂತಹ ಘಟನೆ ಜಿಲ್ಲೆಯ ನಗರದ ಹವೇಲಿ ಗಲ್ಲಿಯಲ್ಲಿ ನಡೆದಿದೆ. ಸಾಧಿಕ್ ಶೇಖ್ ಎಂಬುವರ ಮನೆ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಕೃತ್ಯವೆಸಗಲಾಗಿದೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಟ್ರ್ಯಾಕ್ಟರ್ಗೆ ಕ್ರೂಸರ್ ಡಿಕ್ಕಿ: ದಂಪತಿ ಸಾವು, 9 ಜನರಿಗೆ ಗಾಯ

ವಿಜಯಪುರ: ಟ್ರ್ಯಾಕ್ಟರ್ಗೆ ಕ್ರೂಸರ್ ಡಿಕ್ಕಿಯಾಗಿ ದಂಪತಿ ಮೃತಪಟ್ಟ(Couple Died) ಘಟನೆ ಇಂಡಿ ತಾಲೂಕಿನ ಧೂಳಖೇಡ ಬಳಿ ರಾ.ಹೆದ್ದಾರಿ 50ರಲ್ಲಿ ನಡೆದಿದೆ. ಪತಿ ಭಯ್ಯಾಜಿ ಶಿಂಧೆ(50), ಪತ್ನಿ ಸುಮಿತ್ರಾ ಶಿಂಧೆ(45) ಮೃತ ದುರ್ದೈವಿಗಳು. ಮೃತ ದಂಪತಿ ಬೆಳಗಾವಿ ಜಿಲ್ಲೆ ಅಥಣಿ ಮೂಲದ ನಿವಾಸಿಗಳು. ಕಬ್ಬು ಸಾಗಾಟ ಮಾಡುತ್ತಿದ್ದ ಟ್ಯಾಕ್ಟರ್ ಗೆ ಮಹಾರಾಷ್ಟ್ರದ ಅಕ್ಕಲಕೋಟಗೆ ತೆರಳುತ್ತಿದ್ದ ಕ್ರೂಸರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಘಟನೆ ಸಂಭವಿಸಿದೆ. ಕ್ರೂಸರ್ ವಾಹನದಲ್ಲಿದ್ದ ಒಂಬತ್ತು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಥಣಿ ಮೂಲದ ಇವರೆಲ್ಲಾ ಕ್ರೂಸರ್ ನಲ್ಲಿ ಮಹಾರಾಷ್ಟ್ರದ ಅಕ್ಕಲಕೋಟ ಬಳಿಯ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರು. ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಜ್ಞಾನಭಾರತಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಲ್ಲಿಕಾರ್ಜುನ (20) ಬಂಧಿತ ಆರೋಪಿ . ಬಂಧಿತನ ವಿರುದ್ಧ ಜ್ಞಾನಭಾರತಿ, ಸಂಜಯನಗರ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತನಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.