AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ಸಾವಿರ ರೂ.ಗೆ ಮುಡಾ ಸೈಟ್ ಖರೀದಿ​ ಆರೋಪಕ್ಕೆ ಬಿಲ್ಡರ್ ಮಂಜುನಾಥ್ ಸ್ಫಷ್ಟನೆ

MUDA Scam Case: ಮುಡಾ ಸೈಟ್ ಅಕ್ರಮ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಕೇವಲ 3,000, 6,000 ರೂ.ಗೆ ಮಾರಾಟ ಮಾಡಲಾಗಿತ್ತು ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಆದ್ರೆ, ಇದೀಗ ಇದಕ್ಕೆ ಬಿಲ್ಡರ್ ಮಂಜುನಾಥ್ ಎನ್ನುವರು ಸ್ಪಷ್ಟೀಕರಣ ನೀಡಿದ್ದಾರೆ.

3 ಸಾವಿರ ರೂ.ಗೆ ಮುಡಾ ಸೈಟ್ ಖರೀದಿ​ ಆರೋಪಕ್ಕೆ ಬಿಲ್ಡರ್ ಮಂಜುನಾಥ್ ಸ್ಫಷ್ಟನೆ
ಮುಡಾ
ದಿಲೀಪ್​, ಚೌಡಹಳ್ಳಿ
| Edited By: |

Updated on: Dec 08, 2024 | 11:37 AM

Share

ಮೈಸೂರು, (ಡಿಸೆಂಬರ್ 08): ಮುಡಾ ಸೈಟ್ (MUDA Site) ಅಕ್ರಮ ಹಗರಣದಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಬಿಲ್ಡರ್ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಮುಡಾ ಸೈಟ್‌ಗಾಗಿ ನಾನು ಕಟ್ಟಿರುವ 3,000 ರೂಪಾಯಿ ಸಾಂಕೇತಿಕ ಮೊತ್ತ. ಪರಿಹಾರ ರೂಪದಲ್ಲಿ ಪ್ರಾಧಿಕಾರದಿಂದ ನಿವೇಶನ ಪಡೆಯುವಾಗ ಸಾಂಕೇತಿಕವಾಗಿ ಅಷ್ಟೇ ಹಣ ನೀಡುವ ನಿಯಮ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಮೇಲಿನ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿರುವ ಮಂಜುನಾಥ್, ಪ್ರಾಧಿಕಾರಕ್ಕೆ ನಾನು ಕಟ್ಟಿರುವುದು 3,000 ರೂ. ಸಾಂಕೇತಿಕವಾದ ಮೊತ್ತ. ಪರಿಹಾರ ರೂಪದಲ್ಲಿ ಪ್ರಾಧಿಕಾರದಿಂದ ನಿವೇಶನ ಪಡೆಯುವಾಗ ಸಾಂಕೇತಿಕವಾಗಿ ಅಷ್ಟೇ ಹಣ ನೀಡುವ ನಿಯಮ ಇದೆ. ನಾನು ಜಿಪಿಐ ಮಾಡಿಕೊಂಡಿದ್ದ ಜಮೀನಿನಲ್ಲಿ ಬಡಾವಣೆ ಮಾಡಿದ್ದೆ. ಅದರಲ್ಲಿ ಒಳಚರಂಡಿಗೆ ಬಹಳಷ್ಟು ಜಮೀನನ್ನು ಮುಡಾ ಬಳಸಿಕೊಂಡಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯಾಲಯದ ಆದೇಶದಂತೆ ಪರಿಹಾರವಾಗಿ ಸೈಟ್ ಪಡೆದಿದ್ದೇನೆ. ಕೆಲವರು ಪ್ರಚಾರಕ್ಕಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಮುಡಾದ ಮತ್ತೊಂದು ಹಗರಣ ಬಯಲು: ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂ. ನಷ್ಟ

ದಟ್ಟಗಳ್ಳಿಯಲ್ಲಿ ನಾವು ಭೂಮಿ ಕಳೆದುಕೊಂಡಿದ್ದೆವು. ಅದಕ್ಕೆ ವಿಜಯನಗರದ ನಾಲ್ಕನೆ ಹಂತದಲ್ಲಿ ಸೈಟ್ ಕೊಡಲಾಗಿದೆ. ಬಡಾವಣೆ ಮಾಡುವಾಗ ನಮಗೆ ಶೇ.58 ರಷ್ಟು ಸೈಟ್‌ಗಳು ಸಿಗಬೇಕಿತ್ತು. ಆದರೆ ಸಿಕ್ಕಿದ್ದು, ಶೇ.38 ರಷ್ಟು ಮಾತ್ರ. ಹೀಗಾಗಿ, ಆ ಭೂಮಿಗೆ ಪ್ರಾಧಿಕಾರ 23 ಸೈಟ್ ಪರಿಹಾರವಾಗಿ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಐದು ದಿನದಲ್ಲಿ 23 ಸೈಟ್ ಪಡೆದ ವಿಚಾರದ ಬಗ್ಗೆ ಕಾರ್ತಿಕ್ ಬಡಾವಣೆಯ ಮಂಜುನಾಥ್ ಸ್ಪಷ್ಟೀಕರಣ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ