ಆಷಾಢ ಮಾಸದಲ್ಲಿ ಈ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ವಾಹನ ನಿರ್ಬಂಧ

ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವ ಹಾಗೂ ಆಷಾಡ ಶುಕ್ರವಾರ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆಷಾಢ ಮಾಸದ ಈ ದಿನಗಳಂದು ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ. ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ. ಆಷಾಢ ಶುಕ್ರವಾರಗಳ ದಿನಾಂಕಗಳು ಮತ್ತು ಟಿಕೆಟ್ ದರಗಳ ಮಾಹಿತಿಯನ್ನೂ ನೀಡಲಾಗಿದೆ.

ಆಷಾಢ ಮಾಸದಲ್ಲಿ ಈ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ವಾಹನ ನಿರ್ಬಂಧ
ಚಾಮುಂಡಿ ಬೆಟ್ಟ
Updated By: ವಿವೇಕ ಬಿರಾದಾರ

Updated on: Jun 11, 2025 | 3:55 PM

ಮೈಸೂರು, ಜೂನ್​ 11: ತಾಯಿ ಚಾಮುಂಡೇಶ್ವರಿ (Chamundeshwari) ಜನ್ಮೋತ್ಸವ ಹಾಗೂ ಆಷಾಢ ಶುಕ್ರವಾರಗಳ ಆಚರಣೆಗೆ ಮೈಸೂರು (Mysore) ಜಿಲ್ಲಾಡಳಿತ ಈಗಾಗಲೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಪ್ರತಿವರ್ಷ ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅಸಂಖ್ಯ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭಕ್ತಾದಿಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಆಷಾಢ ಶುಕ್ರವಾರ ಹಾಗೂ ವರ್ಧಂತಿ ದಿನಗಳಂದು ಯಾವುದೇ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿರುವುದಿಲ್ಲ. ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂದು ಸಚಿವ ಡಾ.ಎಚ್.ಸಿ. ಮಹಾದೇವಪ್ಪ ತಿಳಿಸಿದರು.

ಭಕ್ತಾದಿಗಳು ವಾಹನಗಳನ್ನು ಲಲಿತಾ ಮಹಲ್​ ಹೋಟೆಲ್​ ಪಾರ್ಕಿಂಗ್​ ಸ್ಥಳದಲ್ಲಿ ನಿಲ್ಲಿಸಬೇಕು. ಜೂನ್​ 27, ಜುಲೈ 04, ಜುಲೈ 11, ಜುಲೈ 18 ರಂದು ಆಷಾಢ ಶುಕ್ರವಾರಗಳು ಹಾಗೂ ಜುಲೈ 17 ರಂದು ಚಾಮುಂಡೇಶ್ವರಿ ದೇವಿಯ ವರ್ಧಂತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಆಷಾಢ ಶುಕ್ರವಾರ ಹಾಗೂ ಆಷಾಢ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾಮಾನ್ಯ ದರ್ಶನ ಉಚಿತವಾಗಿರುತ್ತದೆ. ಪ್ರವೇಶ ದರ್ಶನಕ್ಕೆ 50 ರೂ. ಹಾಗೂ ವಿಶೇಷ ದರ್ಶನಕ್ಕೆ 300 ರೂ. ಟಿಕೆಟ್​ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ
ಮೈಸೂರು ಪಾಕ್​​​ ಹೆಸರು ಬದಲಿಸುವ ಹಕ್ಕು ಯಾರಿಗೂ ಇಲ್ಲ
ಪಾಕಿಸ್ತಾನದ ಜೊತೆಗಿನ ಗಲಾಟೆಯಿಂದ ಮೈಸೂರು ಪಾಕ್ ಹೆಸರೂ ಬದಲು!
ಮೈಸೂರಿನಂತಹ ಮಹಾನಗರದಲ್ಲೇ ವಾಹನ ಫಿಟ್ನೆಸ್​ ಸರ್ಟಿಫಿಕೇಟ್ ​ಪಡೆಯಲು ಹೆಣಗಾಟ
ದಕ್ಷಿಣ ಅಯೋಧ್ಯೆ ದೇಗುಲ‌ ನಿರ್ಮಾಣಕ್ಕೆ ವಿಘ್ನ, ದಸಂಸ ಮುಖಂಡರ ವಿರೋಧ

ಇದನ್ನೂ ಓದಿ: ಭಾರಿ ಮಳೆಯಿಂದ ಕರ್ನಾಟಕದ ಈ ಎರಡು ಕಡೆ ಅರಣ್ಯ ಸಫಾರಿ ರದ್ದು

ತಾಯಿ ಚಾಮುಂಡೇಶ್ವರಿ ಜನ್ಮೋತ್ಸವ ಹಾಗೂ ಆಷಾಢ ಶುಕ್ರವಾರಗಳ ಆಚರಣೆ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆ ಅಗತ್ಯ ಬಂದೋಬಸ್ತ್​ ಮಾಡಿಕೊಂಡಿದೆ. ಮೈಸೂರು ಟ್ರಾಫಿಕ್​ ಪೊಲೀಸರು ಸಂಚಾರ ನಿಯಂತ್ರ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ