Shootout: ನಂಜನಗೂಡಿನಲ್ಲಿ ಶೂಟೌಟ್, ಕಾಡು ಮೊಲ ಬೇಟೆಗಾಗಿ ರಾತ್ರಿ ವೇಳೆ ಹಾರಿಸಿದ ಗುಂಡಿಗೆ ಕಾರ್ಮಿಕ ಬಲಿ

Hunting: ಎರಡು ವರ್ಷಗಳ ಹಿಂದೆ ನಂಜನಗೂಡಿಗೆ ಬಂದಿದ್ದ ಪ್ರಸನ್ನನ್, ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದ ಗುರುಸ್ವಾಮಿ ಎಂಬುವರ ಜಮೀನಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ರಾತ್ರಿ 8.30ರಲ್ಲಿ ಕಾಡುಮೊಲ ಬೇಟೆಯಾಡಲು ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದ ನಿಶಾದ್ ಗುರಿ ತಪ್ಪಿ ಪ್ರಸನ್ನನ್ ಕಾಲಿಗೆ ಗುಂಡು ಹೊಡೆದಿದ್ದಾನೆ.

Shootout: ನಂಜನಗೂಡಿನಲ್ಲಿ ಶೂಟೌಟ್, ಕಾಡು ಮೊಲ ಬೇಟೆಗಾಗಿ ರಾತ್ರಿ ವೇಳೆ ಹಾರಿಸಿದ ಗುಂಡಿಗೆ ಕಾರ್ಮಿಕ ಬಲಿ
ನಂಜನಗೂಡಿನಲ್ಲಿ ಶೂಟೌಟ್: ಕಾಡು ಮೊಲ ಬೇಟೆಗಾಗಿ ರಾತ್ರಿ ವೇಳೆ ಹಾರಿಸಿದ ಗುಂಡಿಗೆ ಕಾರ್ಮಿಕ ಬಲಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 17, 2021 | 4:17 PM

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಶೂಟೌಟ್ ನಡೆದಿದೆ. ಕಾಡು ಮೊಲ ಬೇಟೆಗಾಗಿ ಹಾರಿದ ಗುಂಡಿಗೆ ಕಾರ್ಮಿಕ ಬಲಿಯಾಗಿದ್ದಾನೆ. ಕಾರ್ಯ ಗ್ರಾಮದ ಬಳಿ ದುರ್ಘಟನೆ ನಡೆದಿದ್ದು, ಕೇರಳ ಮೂಲದ ಕಾರ್ಮಿಕ ಪ್ರಸನ್ನನ್ ಮೃತಪಟ್ಟವ. ಕಾಡು ಮೊಲದ ಬೇಟೆಗಾಗಿ ಗುಂಡು ಹಾರಿಸಿ ಕಾರ್ಮಿಕನ ಬಲಿ ಪಡೆದ ಆರೋಪಿ ನಿಶಾದ್ ಎಂದು ಗುರುತಿಸಲಾಗಿದೆ. ಆರೋಪಿ ನಿಶಾದ್ ಸಹ ಕೇರಳ ಮೂಲದವನೇ.

ಎರಡು ವರ್ಷಗಳ ಹಿಂದೆ ನಂಜನಗೂಡಿಗೆ ಬಂದಿದ್ದ ಪ್ರಸನ್ನನ್, ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದ ಗುರುಸ್ವಾಮಿ ಎಂಬುವರ ಜಮೀನಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ರಾತ್ರಿ 8.30ರಲ್ಲಿ ಕಾಡುಮೊಲ ಬೇಟೆಯಾಡಲು ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದ ನಿಶಾದ್ ಗುರಿ ತಪ್ಪಿ ಪ್ರಸನ್ನನ್ ಕಾಲಿಗೆ ಗುಂಡು ಹೊಡೆದಿದ್ದಾನೆ. ಕೂಡಲೇ ಪ್ರಸನ್ನನ್‌‌ನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸನ್ನನ್ ಅಸುನೀಗಿದ್ದಾನೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಿಶಾದ್​ನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.

hunting misfire allegedly hunter misfire labourer died in nanjangud 2

ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಿಶಾದ್​ನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಕಾಡುಹಂದಿಯ ಬೇಟೆಗೆ ಹಾಕಿದ್ದ ವಿದ್ಯುತ್​ ತಂತಿ ತುಳಿದು  ಗಾಯಗೊಂಡ ರೈತ

ಕೋಲಾರ: ಬೇಟೆಗೆ ಹಾಕಿದ್ದ ವಿದ್ಯುತ್​ ತಂತಿ ತುಳಿದು ರೈತನೊಬ್ಬ ಗಾಯಗೊಂಡಿದ್ದಾನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪೆದ್ದಪಲ್ಲಿ ಗ್ರಾಮದ ಬಳಿ ರೈತ ಶ್ರೀನಿವಾಸ್ (50)​ ಗಂಭೀರವಾಗಿ ಗಾಯಗೊಂಡಿದ್ದಾನೆ.  ಕಿಡಿಗೇಡಿಗಳು ಕಾಡುಹಂದಿಯ ಬೇಟೆಗೆ ವಿದ್ಯುತ್ ತಂತಿ ಹಾಕಿದ್ದರು ಎನ್ನಲಾಗಿದೆ. ಈ ಹಿಂದೆಯೂ, ವಿದ್ಯುತ್ ತಂತಿ ತಗುಲಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ. ಇನ್ನು ರೈತ ಶ್ರೀನಿವಾಸ ಮೇಕೆಗಳಿಗೆ ಮೇವು ತರುವಾಗ ವಿದ್ಯುತ್​ ತಂತಿ ತುಳಿದು ಘಟನೆ ನಡೆದಿದೆ. ಗೌನಿಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ  ಪ್ರಕರಣ ನಡೆದಿದೆ.

ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿಯೂ ಇಂತಹುದೇ ಘಟನೆ ನಡೆದಿತ್ತು..

ಸೋಮವಾರ ರಾತ್ರಿ  (ಜೂನ್ 14) ನಾಲ್ವರು ಸ್ನೇಹಿತರು ಬೇಟೆಗೆಂದು ಹೋಗಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಬಳಿ ಗುಂಡು ತಗುಲಿ ಶಂಕರ್ ಎಂಬುವವರು ಸಾವನ್ನಪ್ಪಿದ್ದರು.

ಸೋಮವಾರ ರಾತ್ರಿ ನಾಲ್ವರು ಸ್ನೇಹಿತರಾದ ಕೋದಂಡಪ್ಪ, ಶ್ರೀನಿವಾಸ, ಚೌಡಪ್ಪ ಮತ್ತು ಶಂಕರ್ ಬೇಟೆಗೆಂದು ತೆರಳಿದ್ದಾಗ ಈ ಘಟನೆ ನಡೆದಿತ್ತು. ಲೈಸೆನ್ಸ್ ಹೊಂದಿದ್ದ ಕೋದಂಡಪ್ಪ ಗನ್​ನಿಂದ ಮಿಸ್ ಫೈರ್​​ ಆದಾಗ ಗುಂಡು ನೇರವಾಗಿ ಶಂಕರ್ ಹಣೆಗೆ ಬಿದ್ದಿತ್ತು. ಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

(hunting misfire allegedly hunter misfire labourer died in nanjangud)

ಅಲ್ಮೇರಾದಲ್ಲಿದ್ದ ಲೋಡೆಡ್ ರಿವಾಲ್ವರ್ ಹೊರತೆಗೆದು ಆಡುತ್ತಿದ್ದ ಬಾಲಕನ ತೊಡೆಗೆ ಗುಂಡು ತಗುಲಿ ಗಾಯ

Published On - 3:52 pm, Thu, 17 June 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ