IND vs AUS, World Cup Final: ಭಾರತ ಗೆದ್ದರೆ ಉಚಿತ ಬಿಯರ್, ಪಂದ್ಯ ವೀಕ್ಷಣೆಗೆ ಮೈಸೂರಿನಲ್ಲಿ ಭಾರೀ ಸಿದ್ಧತೆ
ಆಸ್ಟ್ರೇಲಿಯಾವನ್ನು ಸೋಲಿಸಿ ಮೂರನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಇತ್ತ ಅಭಿಮಾನಿಗಳು ವಿಶೇಷ ರೀತಿಯಲ್ಲಿ ವಿಜಯವನ್ನು ಆಚರಿಸಲು ತಯಾರಿ ನಡೆಸುತ್ತಿದ್ದಾರೆ. ವಿಜಯನಗರದ ಮೈಸೂರು ಹುಣಸೂರು ರಸ್ತೆಯಲ್ಲಿರುವ ಪೆಗ್ಸ್ & ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಬಂಪರ್ ಆಫರ್ ನೀಡಿದೆ. ಫೈನಲ್ ಪಂದ್ಯ ಭಾರತ ಗೆದ್ದರೆ ಉಚಿತ ಬಿಯರ್ ನೀಡಲು ಮುಂದಾಗಿದೆ.
ಮೈಸೂರು, ನ.19: ವಿಶ್ವಕಪ್ ಫೈನಲ್ ಪಂದ್ಯಕ್ಕೆ (IND vs AUS, World Cup Final) ಕೆಲವೇ ಗಂಟೆಗಳು ಬಾಕಿ ಇವೆ. ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡಲಿವೆ. 2003ರ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತವಕದಲ್ಲಿದೆ. ಟೀಂ ಇಂಡಿಯಾ ಗೆಲ್ಲಲಿ ಎಂದು ದೇಶಾದ್ಯಂತ ಶುಭಾಷಯಗಳ ಸುರಿಮಳೆಯ ಹರಿದು ಬರುತ್ತಿದೆ. ಅದರಲ್ಲೂ ಮೈಸೂರಿನಲ್ಲಿ ಭಾರತ ಗೆದ್ದರೆ ಉಚಿತ ಬಿಯರ್ ಆಫರ್ (Free Beer) ನೀಡಲು ಮೈಸೂರಿನ ಪೆಗ್ಸ್ & ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಮುಂದಾಗಿದೆ. ಮತ್ತೊಂದೆಡೆ ಮೈಸೂರಿನ ಕ್ರಿಕೆಟ್ ಅಭಿಮಾನಿಗಳು ವಿಘ್ನ ನಿವಾರಕ ವಿನಾಯಕನ ಮೊರೆ ಹೋಗಿದ್ದಾರೆ.
ಫೈನಲ್ ಪಂದ್ಯ ಭಾರತ ಗೆದ್ದರೆ ಉಚಿತ ಬಿಯರ್
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇತಿಹಾಸ ಸೃಷ್ಟಿಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಆಸ್ಟ್ರೇಲಿಯಾವನ್ನು ಸೋಲಿಸಿ ಮೂರನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಇತ್ತ ಅಭಿಮಾನಿಗಳು ವಿಶೇಷ ರೀತಿಯಲ್ಲಿ ವಿಜಯವನ್ನು ಆಚರಿಸಲು ತಯಾರಿ ನಡೆಸುತ್ತಿದ್ದಾರೆ. ವಿಜಯನಗರದ ಮೈಸೂರು ಹುಣಸೂರು ರಸ್ತೆಯಲ್ಲಿರುವ ಪೆಗ್ಸ್ & ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಬಂಪರ್ ಆಫರ್ ನೀಡಿದೆ. ಫೈನಲ್ ಪಂದ್ಯ ಭಾರತ ಗೆದ್ದರೆ ಉಚಿತ ಬಿಯರ್ ನೀಡಲು ಮುಂದಾಗಿದೆ.
ಫೈನಲ್ ಗೆದ್ದರೆ ಒಂದು ಮಗ್ ಬಿಯರ್ ಫ್ರೀ ನೀಡುವುದಾಗಿ ಘೋಷಿಸಿದೆ. ಫೈನಲ್ ಪಂದ್ಯ ನೋಡಲು ಮೂರು ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 2011ರ ವಿಶ್ವಕಪ್ ಗೆದ್ದ ತಂಡದ ಸಹಿಯುಳ್ಳ ಬ್ಯಾಟ್, ಮಹೇಂದ್ರ ಸಿಂಗ್ ಧೋನಿಯ ಕೀಪಿಂಗ್ ಗ್ಲೌಸ್, ರಾಹುಲ್ ದ್ರಾವಿಡ್ ಬ್ಯಾಟಿಂಗ್ ಗ್ಲೌಸ್, ಸಚಿನ್ ತೆಂಡೂಲ್ಕರ್ ಸಹಿಯುಳ್ಳ ಅವರು ಆಡಿದ ಬ್ಯಾಟ್ ಪ್ರದರ್ಶನಕ್ಕೆ ಇಡಲಾಗಿದೆ.
ಮೂರು ಬಿಗ್ ಸ್ಕ್ರೀನ್
ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ 2023ರ ಫೈನಲ್ ಹಿನ್ನೆಲೆ ಮೈಸೂರಿನಲ್ಲಿ ಕ್ರೀಡಾ ಇಲಾಖೆಯಿಂದ ಪಂದ್ಯಾವಳಿಯ ನೇರಪ್ರಸಾರ ಆಯೋಜನೆ ಮಾಡಲಾಗಿದೆ. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬೃಹತ್ ಪರದೆ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ 2 ಗಂಟೆಯಿಂದ ನೇರ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಎಲ್ಇಡಿ ಪರದೆ ಮತ್ತು ಸೌಂಡ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: IND vs AUS, ICC World Cup Final: ರಾತ್ರಿ 1 ಗಂಟೆಗೆ ನರೇಂದ್ರ ಮೋದಿ ಸ್ಟೇಡಿಯಂ ಬಳಿ ಜಮಾಯಿಸಿದ ಫ್ಯಾನ್ಸ್: ವಿಡಿಯೋ ನೋಡಿ
ಟೀಂ ಇಂಡಿಯಾಗೆ ವಿಶೇಷವಾಗಿ ಶುಭ ಕೋರಿದ ವೈದ್ಯ
ಇನ್ನು ಭಾರತದ ಗೆಲುವಿಗಾಗಿ ಕೋಟ್ಯಾಂತರ ಅಭಿಮಾನಿಗಳು ಶುಭಾಶಯ ಹೇಳಿದ್ದಾರೆ. ಮೈಸೂರು ಮೂಲದ ವೈದ್ಯ ವೆಂಕಟೇಶ್ ಅವರು ಟೀಂ ಇಂಡಿಯಾಗೆ ವಿಶೇಷವಾಗಿ ಶುಭ ಕೋರಿದ್ದಾರೆ. ವರನಟ ಡಾ ರಾಜ್ ಅವರ ಸಿನಿಮಾ ದೃಶ್ಯ ಡಬ್ಬಿಂಗ್ ಮಾಡಿ ಶುಭ ಹಾರೈಸಿದ್ದಾರೆ. ಭಕ್ತ ಪ್ರಹ್ಲಾದ ಸಿನಿಮಾದ ದೃಶ್ಯಕ್ಕೆ ತಾವೇ ಡೈಲಾಗ್ ಬರೆದು ತಾವೇ ಧ್ವನಿ ನೀಡಿ ಡಬ್ ಮಾಡಿ ಶುಭ ಕೋರಿದ್ದಾರೆ. ಡಾಕ್ಟರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಘ್ನ ನಿವಾರಕ ವಿನಾಯಕನ ಮೊರೆ ಹೋದ ಕ್ರಿಕೆಟ್ ಅಭಿಮಾನಿಗಳು
ವಿಶ್ವಕಪ್ ಭಾರತ ಗೆಲ್ಲಲ್ಲಿ ಎಂದು ಕ್ರಿಕೆಟ್ ಅಭಿಮಾನಿಗಳು ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಗೆ 51 ಈಡುಗಾಯಿ ಒಡೆದು ಗಣಪತಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ಸಂಕಲ್ಪ ಪೂಜೆ ಅಭಿಷೇಕ ಮಾಡಿಸಿ ಭಾರತ ತಂಡದ ಪರ ಘೋಷಣೆ ಕೂಗಿದ್ದಾರೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:08 am, Sun, 19 November 23