Kantara Painting: ಮೈಸೂರಿನ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಮನೆಯ ಗೋಡೆಯಲ್ಲಿ ಮಹಿಷಾಸುರ, ಕಾಂತಾರ

Snake Shyam: ಸ್ನೇಕ್ ಶ್ಯಾಮ್ ಮನೆ ಮುಂದೆ ಸಾಗುವ ಪ್ರತಿಯೊಬ್ಬರೂ ಒಂದು ಕ್ಷಣ ನಿಂತು ಈ ಚಿತ್ರಗಳನ್ನು ನೋಡಿಯೇ ಮುಂದೆ ಸಾಗುತ್ತಾರೆ. ಅಷ್ಟು ಆಕರ್ಷಕವಾಗಿ ಇವು ಮೂಡಿಬಂದಿವೆ.

Kantara Painting: ಮೈಸೂರಿನ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಮನೆಯ ಗೋಡೆಯಲ್ಲಿ ಮಹಿಷಾಸುರ, ಕಾಂತಾರ
ಮಹಿಷಾಸುರ, ಕಾಂತಾರ ಚಿತ್ರಗಳು
Follow us
TV9 Web
| Updated By: ಮದನ್​ ಕುಮಾರ್​

Updated on: Dec 26, 2022 | 5:49 PM

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಜೊತೆಗೆ ನೆಮ್ಮದಿಯಾಗಿ ವಾಸ ಮಾಡುವ ಮನೆಗಾಗಿ. ಹಾಗಾಗಿ ತಾವು ವಾಸ ಮಾಡುವ ಮನೆ ಆಕರ್ಷಕವಾಗಿ ಕಾಣಬೇಕೆಂಬುದು ಎಲ್ಲರ ಬಯಕೆ. ಅದಕ್ಕಾಗಿ ಮನೆಯ ಮುಂಭಾಗವನ್ನು ಆಕರ್ಷಣೀಯವಾಗಿಸಲು ಸಾಕಷ್ಟು ಒತ್ತು ನೀಡಿರುತ್ತಾರೆ. ತರಾವರಿಯಾಗಿ ಸಿಂಗರಿಸಿರುತ್ತಾರೆ. ದೇಶ ವಿದೇಶಗಳನ್ನು ಸುತ್ತಾಡಿ ಮನೆಯ ಮುಂದಕ್ಕೆ ಒಪ್ಪುವ ವಸ್ತುಗಳನ್ನು ತಂದು ಹಾಕಿರುತ್ತಾರೆ. ಆದರೆ ಮೈಸೂರಿನ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ (Snake Shyam) ಮಾತ್ರ ಕೊಂಚ ಡಿಫರೆಂಟ್. ತಮ್ಮ ಮನೆಯ ಮುಂಭಾಗ ಸ್ನೇಕ್ ಶ್ಯಾಮ್ ಮಾಡಿಸಿರುವ ಪೇಂಟಿಂಗ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ‘ಕಾಂತಾರ’ (Kantara) ಸಿನಿಮಾದಲ್ಲಿ ತೋರಿಸಿದಂತೆ ದೈವದ ಚಿತ್ರ ಇಲ್ಲಿ ರಾರಾಜಿಸುತ್ತಿವೆ. ಜೊತೆಗೆ ಮಹಿಷಾಸುರನ (Mahishasura) ಚಿತ್ರ ಕೂಡ ಗಮನ ಸೆಳೆಯುತ್ತಿದೆ.

ಸ್ನೇಕ್ ಶ್ಯಾಮ್ ಅವರು ಮೈಸೂರು ಕೆಆರ್‌ಎಸ್ ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ಒಂದು ಕಡೆ ಕಾಂತಾರ ಸಿನಿಮಾದ ಪಂಜುರ್ಲಿ ದೈವ, ವರಾಹವನ್ನು ಹಾಗೂ ಮತ್ತೊಂದು ಕಡೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಯ ಚಿತ್ರವನ್ನು ಬಿಡಿಸಿದ್ದಾರೆ. ಮೈಸೂರಿನ ಕಲಾವಿದ ಯೋಗಾನಂದ್ ಬಿಡಿಸಿರುವ ಈ ಎರಡು ಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.

ಇದನ್ನೂ ಓದಿ: ಮೈಸೂರಿನ ಖ್ಯಾತ ಉರಗ ಸಂರಕ್ಷಕ ಸ್ನೇಕ್‌ ಶ್ಯಾಮ್‌ ಮೇಲೆ ನಾಗರಹಾವು ದಾಳಿ

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಸ್ನೇಕ್ ಶ್ಯಾಮ್ ಮನೆ ಮುಂದೆ ಸಾಗುವ ಪ್ರತಿಯೊಬ್ಬರು ಒಂದು ಕ್ಷಣ ನಿಂತು ಈ ಚಿತ್ರಗಳನ್ನು ನೋಡಿಯೇ ಮುಂದೆ ಸಾಗುತ್ತಾರೆ. ಅಷ್ಟು ಅದ್ಭುತವಾಗಿ ಈ ಚಿತ್ರಗಳು‌ ಮೂಡಿಬಂದಿವೆ. ಇನ್ನು ಈ ಚಿತ್ರಗಳನ್ನು ಬರೆಸಿದ ಮೇಲೆ ಸ್ನೇಕ್ ಶ್ಯಾಮ್ ಅವರ ಧ್ಯಾನ, ಸ್ನೇಹಿತರ ಜೊತೆ ಹರಟೆ, ಮಾತುಕತೆ, ನಿದ್ದೆ, ಕಾಫಿ, ಊಟ ಎಲ್ಲವೂ ಇಲ್ಲೇ ಆಗಿ ಹೋಗಿದೆ. ಈ ಎರಡು ಚಿತ್ರಗಳು ಸ್ನೇಕ್ ಶ್ಯಾಮ್ ಅವರನ್ನು ಒಂದು ರೀತಿ ಮಂತ್ರ ಮುಗ್ಧರನ್ನಾಗಿಸಿದೆ. ಕಲಾವಿದ ಯೋಗಾನಂದ್ ಕೈಚಳಕದ ಮೋಡಿಗೆ ಸ್ನೇಕ್ ಶ್ಯಾಮ್ ಬೆರಗಾಗಿದ್ದಾರೆ.

ಇದನ್ನೂ ಓದಿ: ಮೈಸೂರು: ಮಗುವಿನ ಶಾಲಾ ಶೂನಲ್ಲಿ ಇತ್ತೊಂದು ಚಿಕ್ಕ ನಾಗರಹಾವು, ಸ್ನೇಕ್ ಶ್ಯಾಮ್ ಅದನ್ನು ಹಿಡಿದೊಯ್ದರು!

ಕಾಂತಾರ ಸಿನಿಮಾ ಕುರಿತು ಸ್ನೇಕ್ ಶ್ಯಾಮ್ ಮಾತು:

‘ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಚಿತ್ರ ಕಾಂತಾರ. ಇದರಲ್ಲಿನ ಉತ್ತಮ ಸಂದೇಶಗಳು ನನ್ನನ್ನು ಪ್ರಭಾವಗೊಳಿಸಿದವು. ದೈವದ ಶಕ್ತಿ. ಮನುಷ್ಯನ ದುರಾಸೆ. ಮನುಷ್ಯನಿಗೆ ಕೋಟಿ ಕೋಟಿ ಇದ್ದರೂ ಬೇಕಾಗಿರುವುದು ನೆಮ್ಮದಿ. ಹೀಗೆ ಹತ್ತ ಹಲವು ಸಂದೇಶಗಳು ಇಷ್ಟವಾದವು. ಅದರ ನೆನಪಿಗಾಗಿ ಕಾಂತಾರ ಚಿತ್ರವನ್ನು ಬಿಡಿಸಿದೆ’ ಎಂದು ಸ್ನೇಕ್​ ಶ್ಯಾಮ್​ ಹೇಳಿದ್ದಾರೆ.

ಈ ಚಿತ್ರಗಳಿಂದ ಖುಷಿ, ನೆಮ್ಮದಿ:

‘ಅದೇನೋ ಗೊತ್ತಿಲ್ಲ, ಚಿಕ್ಕಂದಿನಿಂದಲೂ ಆ ಮಹಿಷಾಸುರನ ಮೇಲೆ ಏನೋ ವಿಚಿತ್ರ ಆಕರ್ಷಣೆ. ಆದರೆ ಏಕೆ ಏನು ಅಂತಾ ಗೊತ್ತಿಲ್ಲ. ಆತನನ್ನು ನೋಡಿದರೆ ನೋಡುತ್ತಲೆ ಇರಬೇಕೆಂಬ ಭಾವ ಮೂಡುತ್ತದೆ. ಅದಕ್ಕಾಗಿ ಮನೆಯ ಮುಂದೆ ಮಹಿಷಾಸುರನ ಚಿತ್ರ ಬಿಡಿಸಿದ್ದೇನೆ. ಆ ಎರಡು ಚಿತ್ರಗಳ ಮುಂದೆ ಕುಳಿತರೇ ಅದೇನೋ ಖುಷಿ ನೆಮ್ಮದಿ ತನ್ನಿಂದ ತಾನೇ ಬಂದು ಬಿಡುತ್ತದೆ’ ಎಂಬುದು ಸ್ನೇಕ್​ ಶ್ಯಾಮ್​ ಮಾತುಗಳು.

ಒಟ್ನಲ್ಲಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುವ ಸ್ನೇಕ್ ಶ್ಯಾಮ್ ಈ ಬಾರಿ ತಮ್ಮ ಮನೆಯ ಮುಂದೆ ಮಾಡಿಸಿರುವ ವಿಭಿನ್ನ ಪೇಂಟಿಂಗ್‌ನಿಂದ ಗಮನ ಸೆಳೆಯುತ್ತಿದ್ದಾರೆ.

ರಾಮ್, ಟಿವಿ9 – ಮೈಸೂರು

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ