ಹುಣಸೂರಿನಲ್ಲಿ ಪೊಲೀಸರು-ಕಾರ್ಯಕರ್ತರ ಜಟಾಪಟಿ, ಎಸ್​ಪಿ ಭೇಟಿ

|

Updated on: Dec 05, 2019 | 1:44 PM

ಮೈಸೂರು: ಕರಿಗೌಡನ ಬೀದಿ ಮತಗಟ್ಟೆಯಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಜಟಾಪಟಿ ಮುಂದುವರಿದಿದೆ. ಮತಗಟ್ಟೆ ಬಳಿ ನಿಂತಿದ್ದ ಕಾರ್ಯಕರ್ತರನ್ನು ಪೊಲೀಸರು ಕಳುಹಿಸುತ್ತಿದ್ದರು. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಕಾರ್ಯಕರ್ತ ಮುಂದಾಗಿದ್ದಾನೆ. ಈ ವೇಳೆ ಸಬ್​ ಇನ್ಸ್​ಪೆಕ್ಟರ್​ ಕಾರ್ಯಕರ್ತನ ಮೊಬೈಲ್‌ ಕಿತ್ತುಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು, ಎಸ್​ಐಗೆ ಘೇರಾವ್ ಹಾಕಿದ್ದಾರೆ. ಕೊನೆಗೆ ಸ್ಥಳದಲ್ಲಿದ್ದ ಎಲ್ಲ ಕಾರ್ಯಕರ್ತರನ್ನು ಪೊಲೀಸರು ಚುದುರಿಸಿದ್ದಾರೆ. ಆದ್ರೂ ಸ್ಥಳದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ಜಟಾಪಟಿ ಮುಂದುವರಿದಿದೆ. ಸ್ಥಳಕ್ಕೆ ಎಸ್‌ಪಿ ರಿಷ್ಯಂತ್ ಭೇಟಿ: ಘಟನಾ ಸ್ಥಳಕ್ಕೆ ಮೈಸೂರು ಎಸ್‌ಪಿ […]

ಹುಣಸೂರಿನಲ್ಲಿ ಪೊಲೀಸರು-ಕಾರ್ಯಕರ್ತರ ಜಟಾಪಟಿ, ಎಸ್​ಪಿ ಭೇಟಿ
Follow us on

ಮೈಸೂರು: ಕರಿಗೌಡನ ಬೀದಿ ಮತಗಟ್ಟೆಯಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಜಟಾಪಟಿ ಮುಂದುವರಿದಿದೆ. ಮತಗಟ್ಟೆ ಬಳಿ ನಿಂತಿದ್ದ ಕಾರ್ಯಕರ್ತರನ್ನು ಪೊಲೀಸರು ಕಳುಹಿಸುತ್ತಿದ್ದರು. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಕಾರ್ಯಕರ್ತ ಮುಂದಾಗಿದ್ದಾನೆ. ಈ ವೇಳೆ ಸಬ್​ ಇನ್ಸ್​ಪೆಕ್ಟರ್​ ಕಾರ್ಯಕರ್ತನ ಮೊಬೈಲ್‌ ಕಿತ್ತುಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು, ಎಸ್​ಐಗೆ ಘೇರಾವ್ ಹಾಕಿದ್ದಾರೆ. ಕೊನೆಗೆ ಸ್ಥಳದಲ್ಲಿದ್ದ ಎಲ್ಲ ಕಾರ್ಯಕರ್ತರನ್ನು ಪೊಲೀಸರು ಚುದುರಿಸಿದ್ದಾರೆ. ಆದ್ರೂ ಸ್ಥಳದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ಜಟಾಪಟಿ ಮುಂದುವರಿದಿದೆ.

ಸ್ಥಳಕ್ಕೆ ಎಸ್‌ಪಿ ರಿಷ್ಯಂತ್ ಭೇಟಿ:
ಘಟನಾ ಸ್ಥಳಕ್ಕೆ ಮೈಸೂರು ಎಸ್‌ಪಿ ರಿಷ್ಯಂತ್ ಭೇಟಿ ನೀಡಿದ್ದಾರೆ. ಮತಕೇಂದ್ರದ ಬಳಿ ಯಾರೂ ನಿಲ್ಲಬಾರದು. ಎಲ್ಲರನ್ನು ಇಲ್ಲಿಂದ ಕ್ಲಿಯರ್ ಮಾಡ್ಸಿ. ಇಲ್ಲಿ ಒಂದು ಡಿಆರ್ ವಾಹನ ಮಾತ್ರ ಇರಲಿ, ಮತ್ಯಾರಿಗೂ ಅವಕಾಶ ನೀಡಬೇಡಿ ಎಂದು ಎಸ್‌ಐಗೆ ಎಸ್‌ಪಿ ರಿಷ್ಯಂತ್ ಸೂಚಿಸಿದ್ದಾರೆ.

Published On - 1:31 pm, Thu, 5 December 19