ಮೈಸೂರು: ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತೇ ಸ್ತಬ್ಧವಾಗಿದೆ. ಮನುಷ್ಯರಂತೂ ಸೈಲೆಂಟ್ ಆಗಿರುವ ಕಾರಣ ಕಾಡಿನಿಂದ ನಾಡಿಗೆ ಚಿರತೆ ಮರಿಗಳು ಬಂದಿವೆ. ನಂಜನಗೂಡು ತಾಲೂಕಿನ ಕೂಡನಹಳ್ಳ ಗ್ರಾಮದಲ್ಲಿ ಕಬ್ಬು ಕಟಾವು ವೇಳೆ ಚಿರತೆ ಮರಿಗಳು ಪತ್ತೆಯಾಗಿವೆ. ರೈತ ಹೊನ್ನಪ್ಪ ಅವರ ಕಬ್ಬಿನ ಗದ್ದೆಯಲ್ಲಿ 10 ದಿನಗಳ ಹಿಂದೆ ಜನಿಸಿರುವ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಗಂಡು ಹಾಗೂ ಎರಡು ಹೆಣ್ಣು ಚಿರತೆ ಮರಿಗಳನ್ನು […]
ಮೈಸೂರು: ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತೇ ಸ್ತಬ್ಧವಾಗಿದೆ. ಮನುಷ್ಯರಂತೂ ಸೈಲೆಂಟ್ ಆಗಿರುವ ಕಾರಣ ಕಾಡಿನಿಂದ ನಾಡಿಗೆ ಚಿರತೆ ಮರಿಗಳು ಬಂದಿವೆ. ನಂಜನಗೂಡು ತಾಲೂಕಿನ ಕೂಡನಹಳ್ಳ ಗ್ರಾಮದಲ್ಲಿ ಕಬ್ಬು ಕಟಾವು ವೇಳೆ ಚಿರತೆ ಮರಿಗಳು ಪತ್ತೆಯಾಗಿವೆ.
ರೈತ ಹೊನ್ನಪ್ಪ ಅವರ ಕಬ್ಬಿನ ಗದ್ದೆಯಲ್ಲಿ 10 ದಿನಗಳ ಹಿಂದೆ ಜನಿಸಿರುವ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಗಂಡು ಹಾಗೂ ಎರಡು ಹೆಣ್ಣು ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.