ವಿಶೇಷ ಚೇತನ ಮಹಿಳೆಯ ಸಂಕಷ್ಟಕ್ಕೆ ಓಗೊಟ್ಟ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ವಿಶೇಷ ಚೇತನ ಮಹಿಳೆಯರು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಆಲಂಬೂರಿನ ಮಹಿಳೆ ಮನೆಗೆ ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

  • TV9 Web Team
  • Published On - 11:12 AM, 4 Mar 2021
ವಿಶೇಷ ಚೇತನ ಮಹಿಳೆಯ ಸಂಕಷ್ಟಕ್ಕೆ ಓಗೊಟ್ಟ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರ ಬಳಿ ವಿಶೇಷ ಚೇತನ ಮಹಿಳೆಯರು ಅಳಲು ತೋಡಿಕೊಂಡ್ರು

ಮೈಸೂರು: ವಿಶೇಷ ಚೇತನ ಮಹಿಳೆಯೊಬ್ಬರು ತಾವು ಮೂಲಸೌಕರ್ಯದಿಂದ ವಂಚಿತವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಆಲಂಬೂರಿನ ಮಹಿಳೆ ಮನೆಗೆ ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಅಧಿಕಾರಿಗಳ ಜತೆ ಭೇಟಿ ನೀಡಿದ ಶಾಸಕ ಡಾ. ಯತೀಂದ್ರ ಮೂಲಸೌಕರ್ಯ ಒದಗಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷ ಚೇತನ ಮಹಿಳೆಯರಿಗೆ ನೆರವಾದ ಯತೀಂದ್ರ ಕೆಲಸಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ನನ್ನ ಮತ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಆಲಂಬೂರು ಗ್ರಾಮದ ವಿಕಲ ಚೇತನ ಸಹೋದರಿಯರು ವಸತಿ ಸೌಲಭ್ಯವಿಲ್ಲದೆ ತೊಂದರೆಗೀಡಾಗಿರುವ ಸುದ್ದಿಯು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ನಿನ್ನೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಕೂಡಲೇ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಯಿತು. ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುವ ವಸತಿ ಸೌಲಭ್ಯದ ಯೋಜನೆಯಡಿ ಈ ವಿಕಲ ಚೇತನ ಸಹೋದರಿಯರಿಗೆ ಮೊದಲ ಆದ್ಯತೆಯ ಮೇರೆಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ಹಾಗೂ ಇನ್ನಿತರ ಸರ್ಕಾರಿ ಸವಲತ್ತುಗಳನ್ನು ಶೀಘ್ರವಾಗಿ ಕಲ್ಪಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು ಎಂದು ಡಾ.ಯತೀಂದ್ರ ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

MLA Yathindra siddaramaiah

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

MLA Yathindra siddaramaiah

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

ಇದನ್ನೂ ಓದಿ: ಇಂಥ ಕೆಲಸಕ್ಕೆ ಕರ್ನಾಟಕ ಭವನವನ್ನು ಬಳಸಿಕೊಂಡಿದ್ದು ತಪ್ಪು: ಶಾಸಕ ಯತೀಂದ್ರ ಸಿದ್ದರಾಮಯ್ಯ ಗರಂ