Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ವಿಮಾನಯಾನ ಬಹುತೇಕ ಸ್ತಬ್ಧ! ಬಳಲುತ್ತಿದೆ ಕೈಗಾರಿಕೆ, ಪ್ರವಾಸೋದ್ಯಮ

ವಿಮಾನಗಳ ಹಾರಾಟ ಕಡಿಮೆಯಾಗಲು ಸಾಕಷ್ಟು ಕಾರಣಗಳಿದೆ. ಅದ್ರಲ್ಲಿ ವಿಮಾನಗಳ ಸಂಖ್ಯೆ ಕೂಡ ಕಡಿಮೆ ಇದೆ. ಇದಷ್ಟೆ ಅಲ್ಲದೆ ಹಲವು ತಾಂತ್ರಿಕ ಕಾರಣಗಳೂ ಇದೆ ಎಂದೆ ಹೇಳಲಾಗುತ್ತಿದೆ. ಆದ್ರೆ ಅಸಲಿಗೆ ಉಡಾನ್ ಯೋಜನೆಯಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ಕಡಿತವಾಗಿದ್ರಿಂದ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.

ಮೈಸೂರು ವಿಮಾನಯಾನ ಬಹುತೇಕ ಸ್ತಬ್ಧ! ಬಳಲುತ್ತಿದೆ ಕೈಗಾರಿಕೆ, ಪ್ರವಾಸೋದ್ಯಮ
ಮೈಸೂರು ವಿಮಾನಯಾನ ಬಹುತೇಕ ಸ್ತಬ್ಧ! ಬಳಲುತ್ತಿದೆ ಕೈಗಾರಿಕೆ, ಪ್ರವಾಸೋದ್ಯಮ
Follow us
ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on: Jan 26, 2024 | 10:07 AM

ಮೈಸೂರಿನಲ್ಲಿ ವಿಮಾನ ಸೇವೆ ಆರಂಭವಾಗಿ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈ ಕಾರಣದಿಂದಲೇ ಕೈಗಾರಿಕೆ ಅಭಿವೃದ್ಧಿಗೆ ವಿಮಾನಯಾನ ಸೇವೆ ಅನುಕೂಲವಾಗುತ್ತೆ ಅನ್ನೋ ಕಾರಣಕ್ಕೆ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯ ಕೂಡ ಆರಂಭವಾಗಿದೆ. ಆದ್ರೀಗಾ ಮೈಸೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ ಬಹುತೇಕ ಕಡಿಮೆಯಾಗಿದೆ. ಒಂದೆರಡು ವಿಮಾನ ಸೇವೆಯಷ್ಟೆ ಇದೆ.

ಇತ್ತೀಚಿಗೆ ಮೈಸೂರು ಕೂಡ ಬೆಂಗಳೂರಿನಷ್ಟೆ ವೇಗವಾಗಿ ಬೆಳೆಯಲು ಆರಂಭಿಸಿದೆ. ಸಾಕಷ್ಟು ಫ್ಯಾಕ್ಟರಿಗಳು ತಲೆ ಎತ್ತಲು ಆರಂಭಿಸಿದೆ. ಆದ್ರೆ ಇಂತಹ ಮೈಸೂರು ನಗರಕ್ಕಿದ್ದ ವಿಮಾನಯಾನ ಸೇವೆ ದಿಢೀರನೆ ರದ್ದಾಗಿದೆ. ಹೌದು, ಮೈಸೂರಿನ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣ ಇದ್ದರೂ ಅದು ಪ್ರಯೋಜನಕ್ಕೆ ಇರಲಿಲ್ಲ. ಇತ್ತೀಚಿಗೆ ವಿಮಾನ ಹಾರಾಟ ಸಾಕಷ್ಟು ಹೆಚ್ಚಾಗಿತ್ತು. ಇದು ಒಂದು ರೀತಿ ಕೈಗಾರಿಕೆ ಹಾಗೂ ಮೈಸೂರು ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕೂಲವಾಗಿತ್ತು.

ಆದ್ರೆ ರನ್ ವೇ ಚಿಕ್ಕದು ಎಂಬ ಕಾರಣಕ್ಕೆ ದೊಡ್ಡ ವಿಮಾನಗಳ ಹಾರಾಟ ಕಷ್ಟವಾಗಿತ್ತು. ರನ್ ವೇ ದೊಡ್ಡದಾದ್ರೆ ವಿಮಾನ ಹಾರಾಟ ಸಂಖ್ಯೆ ಹೆಚ್ಚಾಗುತ್ತೆ, ಇದು ಕೈಗಾರಿಕೆ, ಪ್ರವಾಸೋದ್ಯಮ ದೃಷ್ಟಿಯಿಂದ ಮೈಸೂರಿಗೆ ಅನುಕೂಲವಾಗುತ್ತೆ ಎಂದೆ ಲೆಕ್ಕಾಚಾರ ಹಾಕಲಾಗಿತ್ತು. ಆದ್ರೀಗಾ ವಿಮಾನ ಹಾರಾಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೆ ಇದೆ. ಮೊದಲಿಗೆ ಮೈಸೂರು ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಹೈದರ್, ಗೋವಾ ಮತ್ತು ಚೆನೈಗೆ ವಿಮಾನಯಾನ ಸೇವೆ ಇತ್ತು. ಇದೀಗಾ ಚೆನ್ನೈ ಹಾಗೂ ಹೈದರಾಬಾದ್ ಮಾತ್ರ ವಿಮಾನ ಸೇವೆಗಳು ಲಭ್ಯವಿದೆ.

ಇಷ್ಟೊಂದು ವಿಮಾನಗಳ ಹಾರಾಟ ಕಡಿಮೆಯಾಗಲು ಸಾಕಷ್ಟು ಕಾರಣಗಳಿದೆ. ಅದ್ರಲ್ಲಿ ವಿಮಾನಗಳ ಸಂಖ್ಯೆ ಕೂಡ ಕಡಿಮೆ ಇದೆ. ಇದಷ್ಟೆ ಅಲ್ಲದೆ ಹಲವು ತಾಂತ್ರಿಕ ಕಾರಣಗಳೂ ಇದೆ ಎಂದೆ ಹೇಳಲಾಗುತ್ತಿದೆ. ಆದ್ರೆ ಅಸಲಿಗೆ ಉಡಾನ್ ಯೋಜನೆಯಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ಕಡಿತವಾಗಿದ್ರಿಂದ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಆದ್ರೆ ಮೈಸೂರು ಸಂಸದರು ಮಾತ್ರ ಕೆಲ ವಿಮಾನಗಳ ರಿಪೇರಿ ಕೆಲಸ ನಡೆಯುತ್ತಿದೆ. ಮುಂದಿನ ದಿನದಲ್ಲಿ ವಿಮಾನ ಸಂಖ್ಯೆ ಹೆಚ್ಚಿಸುತ್ತೇವೆ ಎನ್ನುತ್ತಿದ್ದಾರೆ.

ಒಟ್ಟಾರೆ, ಮೈಸೂರಿನಲ್ಲಿ ಈಗಷ್ಟೇ ವಿಮಾನಯಾನ ಸೇವೆಗೆ ಬೇಡಿಕೆ ಹೆಚ್ಚಾಗುತ್ತಿತ್ತು.‌ ಆದ್ರೆ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೆ ವಿಮಾನ ಹಾರಾಟ ಸ್ಥಗಿತವಾಗಿರೋದು ಬೇಸರದ ವಿಚಾರ.‌ ಆದಷ್ಟು ಬೇಗ ಹಿಂದಿನಂತೆ ವಿಮಾನಯಾನ ಸೇವೆ ಸಿಗಲಿ ಎಂಬುದೆ ಎಲ್ಲರ ಆಶಯ.

ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್