AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ವಿಮಾನಯಾನ ಬಹುತೇಕ ಸ್ತಬ್ಧ; ಸದ್ಯ ಈ ಎರಡು ನಗರಗಳಿಗೆ ಮಾತ್ರ ಸೇವೆ

ಮೈಸೂರಿನಲ್ಲಿ ವಿಮಾನ ಸೇವೆ ಆರಂಭವಾಗಿ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈ ಕಾರಣದಿಂದಲೇ ಕೈಗಾರಿಕೆ ಅಭಿವೃದ್ಧಿಗೆ ವಿಮಾನಯಾನ ಸೇವೆ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯಕೂಡ ಆರಂಭವಾಗಿದೆ. ಆದರೀಗ ಮೈಸೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ ಬಹುತೇಕ ಕಡಿಮೆಯಾಗಿದೆ. ಒಂದೆರಡು ವಿಮಾನ ಸೇವೆಯಷ್ಟೆ ಇದೆ.

ಮೈಸೂರು ವಿಮಾನಯಾನ ಬಹುತೇಕ ಸ್ತಬ್ಧ; ಸದ್ಯ ಈ ಎರಡು ನಗರಗಳಿಗೆ ಮಾತ್ರ ಸೇವೆ
ಮೈಸೂರು ವಿಮಾನಯಾನ ಬಹುತೇಕ ಸ್ತಬ್ಧ
ದಿಲೀಪ್​, ಚೌಡಹಳ್ಳಿ
| Edited By: |

Updated on: Sep 18, 2024 | 8:36 PM

Share

ಮೈಸೂರು, ಸೆ.18: ಇತ್ತೀಚೆಗೆ ಮೈಸೂರು(Mysore) ಕೂಡ ಬೆಂಗಳೂರಿನಷ್ಟೆ ವೇಗವಾಗಿ ಬೆಳೆಯಲು ಆರಂಭಿಸಿದೆ. ಸಾಕಷ್ಟು ಫ್ಯಾಕ್ಟರಿಗಳು ತಲೆ ಎತ್ತಲು ಆರಂಭಿಸಿದೆ. ಆದ್ರೆ, ಇಂತಹ ಮೈಸೂರು ನಗರಕ್ಕಿದ್ದ ವಿಮಾನಯಾನ ಸೇವೆ ಒಂದೊಂದಾಗಿ ರದ್ದಾಗುತ್ತಿದೆ. ಹೌದು, ಮೈಸೂರಿನ ಮಂಡಕಳ್ಳಿಯಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ಇದ್ದರೂ, ಅದು ಪ್ರಯೋಜನಕ್ಕೆ ಇರಲಿಲ್ಲ. ಇತ್ತೀಚೆಗೆ ವಿಮಾನ ಹಾರಾಟ ಸಾಕಷ್ಟು ಹೆಚ್ಚಾಗಿತ್ತು. ಇದು ಒಂದು ರೀತಿ ಕೈಗಾರಿಕೆ ಹಾಗೂ ಮೈಸೂರು ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕೂಲವಾಗಿತ್ತು. ಆದ್ರೆ, ರನ್ ವೇ ಚಿಕ್ಕದು ಎಂಬ ಕಾರಣಕ್ಕೆ ದೊಡ್ಡ ವಿಮಾನಗಳ ಹಾರಾಟಗಳು ಕಷ್ಟವಾಗಿತ್ತು.

ರನ್ ವೇ ದೊಡ್ಡದಾದ್ರೆ ವಿಮಾನ ಹಾರಾಟ ಸಂಖ್ಯೆ ಹೆಚ್ಚಾಗುತ್ತೆ, ಇದು ಕೈಗಾರಿಕೆ ಪ್ರವಾಸೋದ್ಯಮ ದೃಷ್ಟಿಯಿಂದ ಮೈಸೂರಿಗೆ ಅನುಕೂಲವಾಗುತ್ತದೆ ಎಂದೆ ಲೆಕ್ಕಾಚಾರ ಹಾಕಲಾಗಿತ್ತು.ಇದಕ್ಕಾಗಿ ರನ್ ವೇ ವಿಸ್ತರಣೆ ಮಾಡುವ ಕಾರ್ಯ ಕೂಡ ಆರಂಭವಾಗಿದೆ. ಆದರೀಗ ವಿಮಾನ ಹಾರಾಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೆ ಇದೆ. ಮೊದಲಿಗೆ ಮೈಸೂರು ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಹೈದರಾಬಾದ್, ಗೋವಾ ಮತ್ತು ಚೆನೈಗೆ ವಿಮಾನಯಾನ ಸೇವೆ ಇತ್ತು. ಇದೀಗ ಚೆನೈ ಹಾಗೂ ಹೈದರಾಬಾದ್ ಮಾತ್ರ ವಿಮಾನ ಸೇವೆಗಳು ಲಭ್ಯವಿದೆ.

ಇದನ್ನೂ ಓದಿ:ಮೈಸೂರು ಏರ್​ಪೋರ್ಟ್​ನಲ್ಲಿ ಲೇಸರ್ ಲೈಟ್ ಹಾವಳಿ: ಪೈಲೆಟ್‌ ಕಣ್ಣಿಗೆ ಲೇಸರ್ ಬಿಡುತ್ತಿರುವ ಕಿಡಿಗೇಡಿಗಳು

ಇಷ್ಟೊಂದು ವಿಮಾನಗಳ ಹಾರಾಟ ಕಡಿಮೆಯಾಗಲು ಸಾಕಷ್ಟು ಕಾರಣಗಳಿದೆ. ಅದರಲ್ಲಿ ವಿಮಾನಗಳ ಸಂಖ್ಯೆ ಕೂಡ ಕಡಿಮೆ ಇದೆ. ಇದಷ್ಟೆ ಅಲ್ಲದೆ ಹಲವು ತಾಂತ್ರಿಕ ಕಾರಣಗಳು ಇದೆ ಎಂದೆ ಹೇಳಲಾಗುತ್ತಿದೆ. ಆದ್ರೆ, ಅಸಲಿಗೆ ಉಡಾನ್ ಯೋಜನೆಯಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ಕಡಿತವಾಗಿರುವುದು ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಮೈಸೂರು ಹೇಳಿ ಕೇಳಿ ಪ್ರವಾಸಿಗರಿಗೆ ಸ್ವರ್ಗ ಎಂದು ಕರೆಸಿಕೊಳ್ಳುವ ಊರು, ಮತ್ತೊಂದೆಡೆ ಇತ್ತಿಚೆಗೆ ಫ್ಯಾಕ್ಟರಿಗಳು ಕೂಡ ಹೆಚ್ಚಾಗುತ್ತಲೆ‌ ಇದೆ. ಆದ್ರೆ, ವಿಮಾನ ಯಾನ ಸೇವೆ ಕಡಿಮೆಯಾಗುತ್ತಿರುವುದರಿಂದ ಪ್ರವಾಸೋದ್ಯಮ ಮತ್ತು ಕೈಗಾರಿಕೆಗೆ ತೊಂದರೆಯಾಗುತ್ತಿದೆ.‌

ವಿಮಾನ ಯಾನ ಸೇವೆ ಕಡಿಮೆಯಾಗಲು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕೂಡ ಕಾರಣ,‌ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆಗಳು ಕೂಡ ಹಲವರಿಂದ ಕೇಳಿ ಬರುತ್ತಿದೆ. ಒಟ್ಟಾರೆ, ಮೈಸೂರಿನಲ್ಲಿ ಈಗಷ್ಟೇ ವಿಮಾನಯಾನ ಸೇವೆಗೆ ಬೇಡಿಕೆ ಹೆಚ್ಚಾಗುತ್ತಿತ್ತು.‌ ಆದ್ರೆ, ಬೇಡಿಕೆ ಹೆಚ್ಚಾಗುತ್ತಿರುವ ಸಂಧರ್ಭದಲ್ಲೆ ವಿಮಾನ ಹಾರಾಟ ಸ್ಥಗಿತವಾಗಿರೋದು ಬೇಸರದ ವಿಚಾರ.‌ ಆದಷ್ಟು ಬೇಗ ಹಿಂದಿನಂತೆ ವಿಮಾನಯಾನ ಸೇವೆ ಸಿಗಲಿ ಎಂಬುದೆ ನಮ್ಮ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ