ಮೈಸೂರಿಗೆ ತೆರಳುವ ಪ್ರವಾಸಿಗರಿಗೆ ನಿರಾಸೆ: ಚಿನ್ನದ ಅಂಬಾರಿ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ

ಮೈಸೂರು ಅರಮನೆಯ ಪ್ರಸಿದ್ಧ ಚಿನ್ನದ ಅಂಬಾರಿಯ ವೀಕ್ಷಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 750 ಕೆಜಿ ತೂಕದ ಈ ಅಂಬಾರಿಯ ಕೆಳಭಾಗ ಮತ್ತು ಹಿಂಭಾಗದ ಮರದ ಕೆಲಸ ಸೇರಿದಂತೆ ಹಲವು ರಿಪೇರಿ ಕಾರ್ಯಗಳು ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರವಾಸಿಗರಿಗೆ ಇದು ನಿರಾಶೆಯನ್ನುಂಟು ಮಾಡಿದ್ದರೂ, ಅಂಬಾರಿಯ ಸಂರಕ್ಷಣೆಗಾಗಿ ಈ ಕ್ರಮ ಅವಶ್ಯಕವಾಗಿದೆ.

ಮೈಸೂರಿಗೆ ತೆರಳುವ ಪ್ರವಾಸಿಗರಿಗೆ ನಿರಾಸೆ: ಚಿನ್ನದ ಅಂಬಾರಿ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ
ಅಂಬಾರಿ
Edited By: ವಿವೇಕ ಬಿರಾದಾರ

Updated on: Dec 06, 2024 | 11:01 AM

ಮೈಸೂರು, ಡಿಸೆಂಬರ್​ 06: ಅರಮನೆ (Palace) ಮತ್ತು ಅಂಬಾರಿಯನ್ನು (Ambari) ವೀಕ್ಷಿಸಲು ನಿತ್ಯ ಸಾವಿರಾರು ಜನರು ಮೈಸೂರಿಗೆ (Mysore) ತೆರಳುತ್ತಾರೆ. ಅರಮನೆಯೊಳಗೆ ಅಂಬಾರಿಯನ್ನು ಕಂಡು ಅನೇಕರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆದರೆ, ಕೆಲ ದಿನಗಳ ಕಾಲ 750 ಕೆಜಿ ತೂಕದ ಅಂಬಾರಿ ವೀಕ್ಷಣೆಗೆ ಅವಕಾಶವಿರುವುದಿಲ್ಲ ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮೈಸೂರು ಅರಮನೆಯಲ್ಲಿ ಮೊದಲು ಗಮನ ಸೆಳೆಯುವುದು ಚಿನ್ನದ ಅಂಬಾರಿ. ಆದರೆ, ಅಂಬಾರಿ ವೀಕ್ಷಣೆಗೆ ನಿರ್ಬಂಧ ಹೇರಿದ್ದು ಪ್ರವಾಸಿಗರಲ್ಲಿ ನಿರಾಸೆ ಉಂಟು ಮಾಡಿದೆ. ಅಂಬಾರಿ ಕೆಳಗೆ ಹಾಗೂ ಹಿಂಭಾಗ ಮರದ ಕೆಲಸ‌, ಸೇರಿದಂತೆ ವಿವಿಧ ರಿಪೇರಿ ಕೆಲಸ ಇರವುದರಿಂದ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ವೀಕ್ಷಣೆಗೆ ಅವಕಾಶವಿಲ್ಲ.

ಇದನ್ನೂ ಓದಿ: Mysuru Dasara Mahotsav-2024: ಅಂಬಾರಿಯೊಳಗೆ ಚಾಮುಂಡಿಯನ್ನು ಹೊತ್ತ ಅಭಿಮನ್ಯುನ ನಡಿಗೆ ವರ್ಣಿಸಲದಳ!

ಮೈಸೂರು ದಸರಾ ಉತ್ಸವದಲ್ಲಿ ಪ್ರಮುಖ ಆಕರ್ಷಣೆ ಬಿಂದು ರತ್ನ ಖಚಿತ 750 ಕೆಜಿ ತೂಕದ ಚಿನ್ನದ ಅಂಬಾರಿ. ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕರ ಸೇರಿದ ರತ್ನ ಖಚಿತ ಚಿನ್ನದ ಅಂಬಾರಿ ಮೊದಲಿಗೆ ಆನೆಗುಂದಿಯಲ್ಲಿರುತ್ತದೆ. ಆನೆಗುಂದಿಯಲ್ಲಿನ ಅಂಬಾರಿ ಮೈಸೂರಿಗೆ ಬಂದಿದ್ದೇ ರೋಚಕವಾಗಿದೆ.

ಬುಕ್ಕನು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿ ಸ್ಥಾಪನೆ ಮಾಡುತ್ತಾನೆ. ಅಲ್ಲಿಗೆ ಅಂಬಾರಿ ಸ್ಥಳಾಂತರವಾಗುತ್ತದೆ. ವಿಜಯನಗರ ಸಾಮ್ರಾಜ್ಯ ನಾಶವಾದಾಗ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂದ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಬಳಿಕ ಕೆಲವು ವರ್ಷದ ನಂತರ ಶ್ರೀರಂಗಪಟ್ಟಣ. ನಂತರ ಮೈಸೂರಿಗೆ ಬರುತ್ತದೆ. ಹೀಗೆ ಅಂಬಾರಿ ಹಲವು ರೋಚಕತೆಯಿಂದ ಮೂಲಕ ಮೈಸೂರಿನಲ್ಲಿ ನೆಲೆಯೂರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:39 am, Fri, 6 December 24

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us