AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 2 ಸಾವಿರದಲ್ಲಿ BJP ಮಾಜಿ ಎಂಎಲ್​​ಸಿಯ 30 ಕೋಟಿ ರೂ ಆಸ್ತಿ ಲಪಟಾಯಿಸಲು ಯತ್ನ

ಮೈಸೂರಿನಲ್ಲಿ ಮಾಜಿ ಎಂಎಲ್‌ಸಿಗೆ ಸೇರಿದ 30 ಕೋಟಿ ರೂ ಮೌಲ್ಯದ 22 ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಲು ಖದೀಮರು ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ನಕಲಿ ಆಧಾರ್, ಪಾನ್‌ ಬಳಸಿ ಇ-ಖಾತಾ ಪಡೆದು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಮುಂದಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ಕೇವಲ 2 ಸಾವಿರದಲ್ಲಿ BJP ಮಾಜಿ ಎಂಎಲ್​​ಸಿಯ 30 ಕೋಟಿ ರೂ ಆಸ್ತಿ ಲಪಟಾಯಿಸಲು ಯತ್ನ
ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು
ರಾಮ್​, ಮೈಸೂರು
| Edited By: |

Updated on: Dec 26, 2025 | 3:25 PM

Share

ಮೈಸೂರು, ಡಿಸೆಂಬರ್​​ 26: ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜುಗೆ (former mlc siddaraju) ಸೇರಿರುವ ಆಸ್ತಿಗೆ (land) ಕನ್ನ ಹಾಕಲು ಖದೀಮರು ಯತ್ನಿಸಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. 30 ಕೋಟಿ‌ ರೂ. ಆಸ್ತಿಯನ್ನು ಕೇವಲ 2 ಸಾವಿರ ರೂ. ಖರ್ಚು ಮಾಡಿ, ನಕಲಿ ದಾಖಲೆ ಸೃಷ್ಟಿಸಿ 30 ಕೋಟಿ ರೂ. ಮೌಲ್ಯದ 22 ನಿವೇಶನಗಳನ್ನು ಬರೆಸಿಕೊಳ್ಳಲು ಯತ್ನಿಸಿರುವಂತಹ ಆರೋಪ ಕೇಳಿಬಂದಿದೆ. ವಿಷಯ ತಿಳಿದು ಉಪ ನೋಂದಣಾಧಿಕಾರಿ ಕಚೇರಿಗೆ ಬರುತ್ತಿದ್ದಂತೆ ಭೂಗಳ್ಳರು ಪರಾರಿ ಆಗಿರುವಂತಹ ಘಟನೆ ಮೈಸೂರಿನ ಪಶ್ಚಿಮ ಉಪ ನೋಂದಣಿ ಕಚೇರಿಯಲ್ಲಿ ನಡೆದಿದೆ.

ನಡೆದದ್ದೇನು?

ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೇರ್ಗಳ್ಳಿ ಗ್ರಾಮ ಮತ್ತು ಚಾಮುಂಡಿ ಸೂರು ನಗರ ಬಡಾವಣೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜುಗೆ ವಿವಿಧ ಸರ್ವೆ ನಂಬರ್​ಗಳಲ್ಲಿ 22 ನಿವೇಶನಗಳಿವೆ.

ಇದನ್ನೂ ಓದಿ: ಮುಡಾ ಕೇಸ್​​ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ವಾದ-ಪ್ರತಿವಾದ ಹೇಗಿತ್ತು?

ಖದೀಮರು ಸಿದ್ಧರಾಜು ಅವರ ನಕಲಿ ಫೋಟೋ ಒಳಗೊಂಡ ಆಧಾರ್​ ಕಾರ್ಡ್​​​, ಪಾನ್ ಕಾರ್ಡ್, ಮನೆ ವಿಳಾಸ ಬದಲಿಸಿ ಮೋಸ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಬೋಗಾದಿ ಪಟ್ಟಣ ಪಂಚಾಯ್ತಿಯಲ್ಲಿ ಇ ಖಾತಾ ಪಡೆಯಲಾಗಿತ್ತು. ಅದೇ ಪ್ರತಿ ಸಲ್ಲಿಸಿ 22 ನಿವೇಶನಗಳನ್ನು ಜಿಪಿಎ ನೊಂದಣಿ ಮಾಡಿಸಲು ಭೂಗಳ್ಳರು ಮುಂದಾಗಿದ್ದರು.

ಡಿ.23 ರಂದು ಪಶ್ಚಿಮ ಉಪನೋಂದಣಾಧಿಕಾರಿ ಕಚೇರಿಗೆ ನಿವೇಶನ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿಯೊಬ್ಬರು ಮಾಜಿ ಎಂಎಲ್​​ಸಿ ಸಿದ್ದರಾಜು ದಾಖಲೆಗಳನ್ನ ಗಮನಿಸಿ ಅವರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಬಲಪಡಿಸಲು ಮೈಸೂರಿನಲ್ಲಿ ನಿರ್ಮಾಣವಾಗುತ್ತಿದ್ದ ಯೂನಿಟಿ ಮಾಲ್​​​ಗೆ ವಿಘ್ನ

ಇತ್ತ ಉಪನೋಂದಣಾಧಿಕಾರಿ ಕಚೇರಿಗೆ ಸಿದ್ಧರಾಜು ಬೆಂಬಲಿಗರೊಂದಿಗೆ ಆಗಮಿಸುತ್ತಿದ್ದಂತೆ ಭೂಗಳ್ಳರು ಪರಾರಿ ಆಗಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡಲು ಬಂದಿದ್ದ ಭೂಗಳ್ಳರನ್ನ ಸಿಸಿಟಿವಿ ದೃಶ್ಯಾವಳಿ ಹಾಗೂ ದಾಖಲೆಗಳ ಪ್ರತಿ ನೀಡುವಂತೆ ಸಿದ್ದರಾಜು ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ಕಂದಾಯ ಸಚಿವರಿಗೆ ದೂರು ನೀಡಿದ್ದು, ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.