ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ; ಜಾತಿ ಪ್ರಮಾಣ ಪತ್ರ ಪ್ರದರ್ಶಿಸಿ ಬಿಜೆಪಿಗೆ ಟಾಂಟ್ ಕೊಟ್ಟ ಲಕ್ಷ್ಮಣ್

ಮೈಸೂರಿನಲ್ಲಿ ಒಕ್ಕಲಿಗ ಜಾತಿ ಕಾರ್ಡ್​ ವಿಚಾರ ತಾರಕಕ್ಕೇರಿದೆ. ಸದ್ಯ ಬಿಜೆಪಿ ಮಾಡುತ್ತಿರುವ ಜಾತಿವಾರು ಆರೋಪಗಳಿಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎಂ. ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. ನಾನು ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ. ಬಿಜೆಪಿ ಚೀಪ್ ಪಾಲಿಟಿಕ್ಸ್ ಕೈ ಬಿಡಬೇಕು. ನಾನು ಒಕ್ಕಲಿಗನಲ್ಲ ಅಂತಾ ಬಿಜೆಪಿಯವರು ಗೊಂದಲ ಮೂಡಿಸ್ತಿದ್ದಾರೆ ಎಂದು ಗುಡುಗಿದ್ದಾರೆ.

ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ; ಜಾತಿ ಪ್ರಮಾಣ ಪತ್ರ ಪ್ರದರ್ಶಿಸಿ ಬಿಜೆಪಿಗೆ ಟಾಂಟ್ ಕೊಟ್ಟ ಲಕ್ಷ್ಮಣ್
ಎಂ.ಲಕ್ಷ್ಮಣ್
Follow us
ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Mar 28, 2024 | 1:04 PM

ಮೈಸೂರು, ಮಾರ್ಚ್​.28: 1951ರಿಂದ 17 ಚುನಾವಣೆ ಕಂಡಿರುವ ಮೈಸೂರು ಕ್ಷೇತ್ರದಲ್ಲಿ (Mysuru Lok Sabha Election) 12 ಬಾರಿ ಕಾಂಗ್ರೆಸ್ ಗೆದ್ದು ಬೀಗಿದೆ. ಬಿಜೆಪಿ 4 ಬಾರಿ ಗೆದ್ದಿದೆ. ಇಲ್ಲಿ ಗೆಲುವು ಸಾಧಿಸಲು ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕ. ಸದ್ಯ ಮೈಸೂರಿನಲ್ಲಿ ಒಕ್ಕಲಿಗ ಜಾತಿ ಕಾರ್ಡ್​ ವಿಚಾರ ತಾರಕಕ್ಕೇರಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ (M Lakshman) ಜಾತಿ ಪ್ರಮಾಣ ಪತ್ರ ಪ್ರದರ್ಶಿಸಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ನಾನು ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ. ಬಿಜೆಪಿ ಚೀಪ್ ಪಾಲಿಟಿಕ್ಸ್ ಕೈ ಬಿಡಬೇಕು. ನಾನು ಒಕ್ಕಲಿಗನಲ್ಲ ಅಂತಾ ಬಿಜೆಪಿಯವರು ಗೊಂದಲ ಮೂಡಿಸ್ತಿದ್ದಾರೆ. ನಾನು ಒಕ್ಕಲಿಗ ಅಂತಾ ಸುಳ್ಳು ಹೇಳುವ ಅಗತ್ಯವಿಲ್ಲ. ಪ್ರತಾಪಸಿಂಹ ಮೊದಲ ಬಾರಿ ಬಂದಾಗ ಗೌಡ ಅಂತಾ ಬದಲಿಸಿಕೊಂಡ್ರು. ಅದೇ ರೀತಿ ನಾನು ಲಕ್ಷ್ಮಣ್ ಗೌಡ ಅಂತಾ ಬದಲಾಯಿಸಿಕೊಳ್ಳಬೇಕಾ? ಹಣೆಯ ಮೇಲೆ ಒಕ್ಕಲಿಗ ಅಂತಾ ಬರೆದುಕೊಂಡು ಓಡಾಡಲು ಆಗುತ್ತಾ? ಸಂಸದ ಪ್ರತಾಪ್​ಸಿಂಹಗೆ ಒಕ್ಕಲಿಗರು 10 ವರ್ಷ ಅವಕಾಶ ಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಎಂದು ಕೇಳುವುದು ತಪ್ಪಾ ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ನನ್ನ ಸೋಲಿನ ಬಗ್ಗೆ ಹೇಳಲು ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರು: ಕುಮಾರಸ್ವಾಮಿ ಪ್ರಶ್ನೆ

ವಂಶವೃಕ್ಷ ಬಿಚ್ಚಿಟ್ಟ ಲಕ್ಷ್ಮಣ್

ಜಾತಿ ಸಾಬೀತು ಮಾಡಲು ಮಾಧ್ಯಮದ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ವಂಶವೃಕ್ಷವನ್ನೇ ಬಿಚ್ಚಿಟ್ಟಿದ್ದಾರೆ. ನಾನು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿಯಲ್ಲಿ. ಮೈಸೂರಿಗೆ ಬಂದು ನೆಲೆನಿಂತು 35 ವರ್ಷ ಆಯ್ತು. ನನ್ನ ತಂದೆ ಮುದ್ದಲಿಂಗೇಗೌಡ, ತಾಯಿ ಸಾಕಮ್ಮ. ನಾನು ಮೈಸೂರು ಕನ್ನೇಗೌಡನ ಕೊಪ್ಪಲಿನಲ್ಲಿದ್ದೆ. ಮಾವ ನಿವೃತ್ತ ಎನ್‌ಸಿಸಿ ಆಫೀಸರ್ ಕೆ ಸಿ.ಮರೀಗೌಡ, ಅತ್ತೆ ಲಕ್ಷ್ಮಿ. ಪತ್ನಿ ರೂಪಶ್ರೀಗೌಡ, ಮಗಳು ವರ್ಷಿತಾಗೌಡ, ಮಗ ಆದಿತ್ಯ ಲಕ್ಷ್ಮಣ್. ನಾನು ಹುಟ್ಟುತ್ತ ಒಕ್ಕಲಿಗ ಹೌದು ಆಗಂತ ಲಕ್ಷ್ಮಣ್ ಗೌಡ ಅಂತ ಹೆಸರು ಇಟ್ಟುಕೊಂಡಿಲ್ಲ. ಎಲ್ಲಾ ಜಾತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವನು ನಾನು ಎಂದು ಲಕ್ಷ್ಮಣ್ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ