ವಿದ್ಯಾರ್ಥಿನಿ ಸಾವು ಪ್ರಕರಣ: ಪರೀಕ್ಷಾ ಕೇಂದ್ರ ಬದಲಾದ ಆತಂಕದಲ್ಲಿ ಕುಸಿದುಬಿದ್ದ ವಿದ್ಯಾರ್ಥಿನಿ ನಿಧನ
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಪರೀಕ್ಷಾ ಕೇಂದ್ರ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಅನುಶ್ರೀ ಕುಸಿದುಬಿದ್ದಿದ್ದರು. ಬಳಿಕ, ಆಕೆಯನ್ನು ಟಿ. ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಷಾತ್ ವಿದ್ಯಾರ್ಥಿನಿ ಅನುಶ್ರೀ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮೈಸೂರು: ಪರೀಕ್ಷೆ ಬರೆಯುವಾಗ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಹೊಸ ಮಾಹಿತಿ ಲಭಿಸಿದೆ. ಪರೀಕ್ಷಾ ಕೇಂದ್ರ ಬದಲಾದ ಆತಂಕದಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಪರೀಕ್ಷೆ ಬರೆಯುವ ವೇಳೆ ವಿಷಯ ತಿಳಿದು ಆತಂಕದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಪರೀಕ್ಷಾ ಕೇಂದ್ರ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಅನುಶ್ರೀ ಕುಸಿದುಬಿದ್ದಿದ್ದರು. ಬಳಿಕ, ಆಕೆಯನ್ನು ಟಿ. ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಷಾತ್ ವಿದ್ಯಾರ್ಥಿನಿ ಅನುಶ್ರೀ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮಾದಾಪುರ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಾವನ್ನಪ್ಪಿದ್ದರು.
ಶಿವಮೊಗ್ಗ: ಫೋನ್‌ನಲ್ಲಿ ಆವಾಜ್ ಹಾಕಿದ್ದ ಪಿಎಸ್‌ಐ ಎತ್ತಂಗಡಿ
ಮರಳು ಲಾರಿ ಮಾಲೀಕನಿಗೆ ಬೆದರಿಕೆ ಹಾಕಿದ್ದ PSI, ಫೋನ್‌ನಲ್ಲೇ ಆವಾಜ್ ಹಾಕಿದ್ದ ಪಿಎಸ್‌ಐ ಎತ್ತಂಗಡಿ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಪಿಎಸ್‌ಐ ಜಯಪ್ಪ ನಾಯ್ಕ್ ಎಂಬವರನ್ನು ಎತ್ತಂಗಡಿ ಮಾಡಲಾಗಿದೆ. ನೀನು ಗೃಹ ಸಚಿವರಿಗೆ ಹೇಳ್ತೀಯಾ ಹೇಳು. ನೀನು ಹೇಗೆ ದಂಧೆ ಮಾಡ್ತೀಯೋ ನಾನು ನೋಡ್ಕೋತಿನಿ ಎಂದು ಹೇಳಿದ್ದರು. ಇದೇ ವೇಳೆ ಅವಾಚ್ಯ ಪದಗಳನ್ನು ಬಳಿಸಿದ್ದ ಆರೋಪವಿತ್ತು. ಲಾರಿ ಮಾಲೀಕನಿಗೆ ಬೆದರಿಕೆ ಆಡಿಯೋ ವೈರಲ್ ಆಗಿತ್ತು.
ಬೆಂಗಳೂರು: ಕಳವು ಮಾಡುತ್ತಿದ್ದ ರೌಡಿಶೀಟರ್ ಸೇರಿದಂತೆ ಇಬ್ಬರ ಸೆರೆ
ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಂದ ಕಳವು ಮಾಡುತ್ತಿದ್ದ ರೌಡಿಶೀಟರ್ ಸೇರಿದಂತೆ ಇಬ್ಬರ ಸೆರೆ ಹಿಡಿಯಲಾಗಿದೆ. ಪರಪ್ಪನ ಅಗ್ರಹಾರ ಠಾಣೆಯ ರೌಡಿಶೀಟರ್ ಮಂಜುನಾಥ್ ಬಂಧಿಸಲಾಗಿದೆ. ಕಳವು ಕೇಸ್ನಲ್ಲಿ ಜೈಲು ಸೇರಿ ಬಿಡುಗಡೆಯಾಗಿದ್ದ ವೆಂಕಟೇಶ್, ಬಂಧಿತರಿಂದ 5.25 ಲಕ್ಷ ಮೌಲ್ಯದ 105 ಗ್ರಾಂ ಆಭರಣ ವಶಕ್ಕೆ ಪಡೆಯಲಾಗಿದೆ.
ಚಿಕ್ಕಬಳ್ಳಾಪುರ: ಜೋಡಿ ಕೊಲೆ ಪ್ರಕರಣದ ಆರೋಪಿಗಳ ಬಂಧನ
ಶಿಡ್ಲಘಟ್ಟದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಮೂಲದ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದು ದರೋಡೆಗೆ ಸಂಚು ರೂಪಿಸುತ್ತಿದ್ದ ವೇಳೆ ಆರೋಪಿಗಳನ್ನು ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ.
ಇತರ ಸುದ್ದಿಗಳು
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನ ನಡುರಸ್ತೆಯಲ್ಲಿ ಟಿಪ್ಪರ್ ಬೆಂಕಿ ಹತ್ತಿ ಉರಿದ ಘಟನೆ ನಡೆದಿದೆ. ಗೌರಿಬಿದನೂರಿನ ನಾಗಪ್ಪ ಬ್ಲಾಕ್ ಬಳಿ ಟೈರ್ ಸಿಡಿದು ಬೆಂಕಿ ಹತ್ತಿಕೊಂಡಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಧಾರವಾಡ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ದಾವಲಸಾಬ್, ಅಹ್ಮದ್, ಅಯೂಬ್ ಖಾನ್‌ನನ್ನು ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 38,200 ನಗದು, 2 ಮೊಬೈಲ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಕತ್ತಲಲ್ಲಿ ಮಲಗಿದ್ದ ಬಾಲಕಿ ಮೇಲೆ ಟೆಂಪೊ ಹತ್ತಿಸಿದ ಚಾಲಕ, ಮಗ ಸೊಸೆಯಿಂದ ರಕ್ಷಿಸುವಂತೆ ತಾಯಿ ಮನವಿ
ಇದನ್ನೂ ಓದಿ: ಮಂಡ್ಯ: ಕೊಂಡೋತ್ಸವ ವೀಕ್ಷಣೆ ವೇಳೆ ಛಾವಣಿ ಕುಸಿತ; ಮಹಿಳೆ ಸಾವು, ಹಲವರಿಗೆ ಗಾಯ