ಅನ್ನ ಕೊಟ್ಟ ದೇವರು ನೀನು ಚೆನ್ನಾಗಿರಪ್ಪ: ಸಿದ್ದರಾಮಯ್ಯ ಕಂಡು ದೂರದಿಂದಲೇ ಕೈ ಮುಗಿದ ಮಹಿಳೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಉತ್ತನಹಳ್ಳಿ ದೇವಸ್ಥಾನ ಭೇಟಿ ನೀಡಿದ್ದು, ದೇವಿಯ ದರ್ಶನ ಪಡೆದುಕೊಂಡರು. ಬಳಿಕ ಸಿದ್ದರಾಮಯ್ಯ ದೇವಸ್ಥಾನದಿಂದ ಹೊರಡುವ ವೇಳೆ ಮಹಿಳೆಯೊಬ್ಬರು ಸಿಎಂಗೆ ಕೈಮಯಗಿದು ಅನ್ನ ಕೊಟ್ಟ ದೇವರು ನೀನು ಚೆನ್ನಾಗಿರಪ್ಪ ಎಂದು ಆಶೀರ್ವಾದ ಮಾಡಿದ್ದಾಳೆ.
ಮೈಸೂರು, (ಸೆಪ್ಟೆಂಬರ್ 26): ವಿಧಾನಸಭೆ ಚುನಾವಣೆ (Karnataka Assembly Elections 2023) ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಒಂದೊಂದೇ ಈಡೇರಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಐದು ಗ್ಯಾರಂಟಿಗಳಲ್ಲಿ ಇದೀಗ ನಾಲ್ಕು ಈಡೇರಿಸಿದ್ದು, ಇನ್ನೊಂದು ಯುವ ನಿಧಿ ಯೋಜನೆ ಜಾರಿಗೊಳಿಸುವುದು ಬಾಕಿ ಇದೆ. ಇನ್ನು ಈ ಗ್ಯಾರಂಟಿಗಳ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಮೈಸೂರಿನಲ್ಲಿ ಮಹಿಳೆಯೋರ್ವರು, ಸಿಎಂ ಸಿದ್ದರಾಮಯ್ಯ(Siddaramaiah) ನೀಡಿದ ಅನ್ನಭಾಗ್ಯ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು..ಸಿದ್ದರಾಮಯ್ಯನವರು ಇಂದು(ಸೆಪ್ಟೆಂಬರ್ 26) ಮೈಸೂರಿನ ಉತ್ತನಹಳ್ಳಿ ಶ್ರೀ ಜ್ವಾಲಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಈ ವೇಳೆ ಮಹಿಳೆಯೊಬ್ಬರು ಸಿದ್ದರಾಮಯ್ಯನವರನ್ನು ನೋಡಿ ದೂರದಿಂದಲೇ ಅನ್ನ ಕೊಟ್ಟ ದೇವರು ನೀನು ಚೆನ್ನಾಗಿರಪ್ಪ ಎಂದು ಆಶೀರ್ವಾದ ಮಾಡಿದ್ದಾಳೆ. ಸಿದ್ದರಾಮಯ್ಯ ದೇವಿಯ ದರ್ಶನ ಪಡೆದು ಕಾರು ಹತ್ತುವ ವೇಳೆ ಮಹಿಳೆ, ಅನ್ನ ಕೊಟ್ಟ ದೇವರು ನೀನು ಚೆನ್ನಾಗಿರಪ್ಪ, ನಿನ್ನನ್ನು ನೋಡಿ ಸಂತೋಷ ಆಯ್ತು ಎಂದು ದೂರದಿಂದಲೇ ಸಿದ್ದರಾಂಯ್ಯಗೆ ಕೈ ಮುಗಿದಿದ್ದಾಳೆ. ಇನ್ನು ಸಿದ್ದರಾಮಯ್ಯ ಮಹಿಳೆಯ ಮಾತು ಕೇಳಿ ಮುಗುಳು ನಗೆ ಬೀರಿ, ಕಾರು ಹತ್ತಿ ತೆರಳಿದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದು ಮಾಡುತ್ತಿರುವ ನಿಂಗವ್ವ ಸಿದ್ದರಾಮಯ್ಯ ಬಗ್ಗೆ ಹೇಳಿದ್ದಿಷ್ಟು
ಸಿದ್ದರಾಮಯ್ಯ ಈ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಯಾರು ಹಸಿವಿನಿಂದ ಮಲಗಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ಉಚಿತವಾಗಿ 7.ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆ ಬಡವರ ಪಾಲಿಗೆ ಅನುಕಲವಾಗಿದ್ದು, ಎಲ್ಲರೂ ನೆನಪಿನಲ್ಲಿಡುವಂತಾಗಿತ್ತು. ಬಳಿಕ ಇದೀಗ ಎರಡನೇ ಬಾರಿಗೆ ಸಿಎಂ ಆದ ಬಳಿಕ 7 ಕೆ.ಜಿ ಅಕ್ಕಿಯನ್ನು 10ಕೆ.ಜಿಗೆ ಹೆಚ್ಚಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವದ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಬೆನ್ನಲ್ಲೇ ಧಾರವಾಡದಲ್ಲಿ ಅಜ್ಜಿಯೊಬ್ಬರು ಬಸ್ ಮೆಟ್ಟಿಲಿಗೆ ತಲೆ ಇಟ್ಟು ಒಳ ನಡೆದ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬಸ್ ಮೆಟ್ಟಿಲುಗಳಿಗೆ ಅಜ್ಜಿ ನಮಸ್ಕರಿಸಿ ಬಸ್ ಹತ್ತುವ ಫೋಟೋವನ್ನು ಹಲವಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದರು.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ