ರಾಗಿ, ನವಣೆ, ಜೋಳ, ಸಜ್ಜೆ ಹೀಗೆ ಸಾಲು ಸಾಲು ಹೆಸರೇಳಿ ಕರ್ನಾಟಕ ಸಿರಿ ಧಾನ್ಯಗಳ ಗಮ್ಮತ್ತನ್ನ ಗುಣಗಾನ ಮಾಡಿದ ಮೋದಿ

ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ, ಅಭಿವೃದ್ಧಿ ಅಜೆಂಡಾ ಜೊತೆ ಕರ್ನಾಟಕವನ್ನು ಕೊಂಡಾಡಿದರು. ಮೋದಿ ಭಾಷಣದಲ್ಲಿ ಕರ್ನಾಟಕದ ಸಿರಿಧಾನ್ಯಗಳ ಗಮ್ಮತ್ತನ್ನು ಗುಣಗಾನ ಮಾಡಿರುವುದು ವಿಶೇಷ.

ರಾಗಿ, ನವಣೆ, ಜೋಳ, ಸಜ್ಜೆ ಹೀಗೆ ಸಾಲು ಸಾಲು ಹೆಸರೇಳಿ ಕರ್ನಾಟಕ ಸಿರಿ ಧಾನ್ಯಗಳ ಗಮ್ಮತ್ತನ್ನ ಗುಣಗಾನ ಮಾಡಿದ ಮೋದಿ
ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 06, 2023 | 8:15 PM

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ Tumakuru) ಆತ್ಮನಿರ್ಭರ ಭಾರತ್​ನ ಕನಸಿನ ಕೂಸು ಲೋಕಾರ್ಪಣೆ ಆಯ್ತು. ಬಿದರೆಹಳ್ಳ ಕಾವಲ್‌ನಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಸ್ಥಾಪಿಸಿರುವ ಹೆಲಿಕಾಪ್ಟರ್‌ ಉತ್ಪಾದನಾ ಘಟಕವನ್ನ ಇಂದು (ಫೆಬ್ರವರಿ 06)  ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದರು. ಬಳಿಕ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಆರಂಭದಲ್ಲಿ ಸಿದ್ಧಗಂಗಾ ಮಠ ಹಾಗೂ ಶಿವಕುಮಾರ ಶ್ರೀ ಹಾಗೂ ಗುಬ್ಬಿ ಚೆನ್ನಬಸವೇಶ್ವರರನ್ನು ನೆನೆದರು. ಹಾಗೇ ಭಾಷಣ ಮುಂದುವರಿಸಿದ ಮೋದಿ ಭಾರತದ ರಕ್ಷಣಾ ಇಲಾಖೆ ಬಗ್ಗೆ, ಬಜೆಟ್​ ಸೇರಿದಂತೆ ಇನ್ನಿತರ ಬಗ್ಗೆ  ಮಾತನಾಡುವ ವೇಳೆ ಹಾಗಾಗ ಕರ್ನಾಟಕವನ್ನು ಪ್ರಸ್ತಾಪ ಮಾಡುತ್ತಲ್ಲೇ ಇದ್ದರು. ಇದರ ಮಧ್ಯೆ ಸಿರಿಧಾನ್ಯಗಳ (Karnataka millets) ಬಗ್ಗೆ ಪ್ರಸ್ತಾಪಿಸಿ, ರಾಗಿ ಮುದ್ದೆ, ರೊಟ್ಟಿ ಸ್ವಾದ ಅರಿತವನೇ ಬಲ್ಲ ಅಂತ ರಾಗಿಯ ಗಮ್ಮತ್ತನ್ನ ಗುಣಗಾನ ಮಾಡಿ ಭಾಷಣ ಕೇಳುಗರ ಬಾಯಲ್ಲಿ ಬಾಯಲ್ಲಿ ನೀರೂರಿಸಿದರು.

ಇದನ್ನೂ ಓದಿ: PM Modi in Karnataka Live: ಕರ್ನಾಟಕದ ರಾಗಿ ರೊಟ್ಟಿ, ರಾಗಿಮುದ್ದೆ ಸ್ವಾದದ ಬಗ್ಗೆ ಪ್ರಸ್ತಾಪಿಸಿರುವ ಮೋದಿ ಭಾಷಣದ ಮುಖ್ಯಾಂಶಗಳು

ಹೌದಯ… ಶ್ರೀ ಅನ್ನ ರಾಗಿ, ಶ್ರೀ ಅನ್ನ ನವಣೆ, ಶ್ರೀ ಅನ್ನ ಸಾಮೆ, ಶ್ರೀ ಅನ್ನ ಹರ್ಕಾ, ಶ್ರೀ ಅನ್ನ ಕೋರ್ಲೆ, ಶ್ರೀ ಅನ್ನ ಉದುಲು, ಶ್ರೀ ಅನ್ನ ಬರಗೂ, ಶ್ರೀ ಅನ್ನ ಸಜ್ಜೆ, ಶ್ರೀ ಅನ್ನ ಬಿಳಿಜೋಳ ಹೀಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸಿರಿ ಧಾನ್ಯಗಳ ಹೆಸರನ್ನು ಸಾಲು ಸಾಲಾಗಿ ಹೇಳಿ ಮೋಡಿ ಮಾಡಿದರು. ಇತ್ತ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರ ಶಿಳ್ಳೆ, ಕೇಕೆಗಳಿಂದ ಹರ್ಷೋದ್ಘಾರ ಜೋರಾಗಿತು.

ಸಿರಿಧಾನ್ಯದ ಹೆಸರು ಹೇಳಿದ ಬೆನ್ನಲ್ಲೇ ಪ್ರಧಾನಿ ಮೋದಿ, ಕರ್ನಾಟಕದ ರಾಗಿ ಮುದ್ದಿ ಹಾಗೂ ರಾಗಿ ರೊಟ್ಟಿಯ ಸ್ವಾದವನ್ನು ಯಾರು ಮರೆಯಲು ಸಾಧ್ಯ? ಈ ಬಾರಿಯ ಬಜೆಟ್‌ನಲ್ಲಿ ಶ್ರೀ ಅನ್ನದ ಉತ್ಪಾದನೆಗೆ ಗರಿಷ್ಠ ಬಲ ನೀಡಲಾಗಿದೆ. ಇದರ ಲಾಭ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಿಗಲಿದೆ. ಸಣ್ಣ ಸಣ್ಣ ರೈತರಿಗೂ ಇದರಿಂದ ಅತೀ ಹೆಚ್ಚಿನ ಲಾಭವಾಗಲಿದೆ ಎಂದರು.

ಕರ್ನಾಟಕ ಯುವಕರು ಟ್ಯಾಲೆಂಟ್‌, ಯುವ ಅನ್ವೇಷಣೆಯ ನೆಲ. ದ್ರೋಣ್ ನಿಂದ ತೇಜಸ್ ನಿರ್ಮಾಣದ ವರೆಗೂ ರಾಜ್ಯದ ಪ್ರತಿಭೆಯನ್ನು ಜಗತ್ತು ನೋಡುತ್ತಿದೆ ಎಂದು ಹೇಳುವ ಮೂಲಕ ಕರುನಾಡಿನ ಯುವ ಪೀಳೆಗೆಯನ್ನು ಕೊಂಡಾಡಿದ ಮೋದಿ, ಕರ್ನಾಟಕದ ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಬಡಗಿ ಕೆಲಸದ ಈ ಎಲ್ಲಾ ಪರಿವಾರಕ್ಕೂ ಕೌಶಲ್ಯ ಅಭಿವೃದ್ಧಿ ಅಡಿ ಸಹಾಯ ಸಿಕ್ಕಿದೆ ಎಂದು ಹೀಗೆ ಕರ್ನಾಟಕ ಕೆಲ ಸಮುದಾಯಗಳನ್ನು ಹೆಸರಿಸಿರುವುದು ವಿಶೇಷವಾಗಿತ್ತು.

ಅಭಿವೃದ್ಧಿ ಮಂತ್ರ.. ಮೋದಿ ಮತತಂತ್ರ.!

ಇವತ್ತು ಎರಡು ಜಿಲ್ಲೆಗಳಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಮಹಾ ಲೆಕ್ಕಾಚಾರಗಳನ್ನ ಇಟ್ಕೊಂಡೇ ಎಂಟ್ರಿ ಕೊಟ್ಟಿದ್ದಾರೆ.. ಒಂದು ಕಡೆ ಸರ್ಕಾರಿ ಕಾರ್ಯಕ್ರಮಗಳಿಗೂ ಕೊಡುಗೆ ಕೊಟ್ಟಂತೆ ಆಗಬೇಕು.. ಇನ್ನೊಂದು ಕಡೆ ಮತಬೇಟೆಯೂ ಆಗಬೇಕು ಅಂತ ತಮ್ಮ ಬತ್ತಳಿಕೆಯಲ್ಲಿನ ಅಸ್ತ್ರಗಳನ್ನ ಸೈಲೆಂಟಾಗಿ ಬಿಡ್ತಿದ್ದಾರೆ.. ಈ ಮೂಲಕ ಕರುನಾಡಿನ ಕುರುಕ್ಷೇತ್ರದಲ್ಲಿ ಕೇಸರಿ ಅಬ್ಬರಕ್ಕೆ ಬೂಸ್ಟ್​ ನೀಡೋಕೆ ಮುಂದಾಗಿದ್ದಾರೆ

ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಬಿಜೆಪಿ ಬಲಕ್ಕೆ ತಂತ್ರ ಹೆಣೆಯಲಾಗಿದೆ. ಯಾಕಂದ್ರೆ ಈ 11 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರೋದು ಕೇವಲ 5 ಕ್ಷೇತ್ರದಲ್ಲಿ ಮಾತ್ರ. ಈ ಬಾರಿ ಏನಾದ್ರ ಮಾಡಿ ಕನಿಷ್ಟ 8 ರಿಂದ 9 ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಅಂತ ವ್ಯೂಹ ರಚನೆ ಮಾಡಿದ್ದಾರೆ. ಇದರ ಜೊತೆಗೆ ಹಳೇ ಮೈಸೂರಿನ ಭಾಗದ 72 ಕ್ಷೇತ್ರದಲ್ಲೂ ಕಮಲ ಗೆಲುವಿಗೆ ಶಂಖನಾದ ಮೊಳಗಿಸಲಾಗಿದೆ. 72 ಕ್ಷೇತ್ರಗಳ ಪೈಕಿ ಹಾಲಿ 18 ಕ್ಷೇತ್ರದಲ್ಲಿ ಕೇಸರಿ ಪಡೆ ಮಾತ್ರ ಇದ್ದು, ಉಳಿದ 29 ಕ್ಷೇತ್ರಗಳಲ್ಲಿ ಒಮ್ಮೆಯೂ ಬಿಜೆಪಿ ಗೆಲುವು ಸಾಧಿಸಿಲ್ಲಇದೇ ಕಾರಣಕ್ಕೆ ಇಂದು ಬೆಂಗಳೂರು, ತುಮಕೂರಿಗೆ ಮೋದಿ ಎಂಟ್ರಿ ಕೊಟ್ಟಿದ್ದು, ಎರಡೆರಡು ದಾಳ ಉರುಳಿಸೋಕೆ ಮುಂದಾಗಿದ್ದಾರೆ. ತುಮಕೂರಿಗೆ ಮೋದಿ ಬಂದಿರೋದು ಹಳೇ ಮೈಸೂರು ಮತ್ತು ಮಧ್ಯ ಕರ್ನಾಟಕ ಭಾಗದ ಮೇಲೆ ಎಫೆಕ್ಟ್ ಆಗಲಿದೆ ಎನ್ನುವ ಲೆಕ್ಕಾಚಾರ ಇಟ್ಟುಕೊಂಡು ಮೋದಿ ರಾಜ್ಯಕ್ಕೆ ಬಂದಿದ್ದಾರೆ.

ಒಟ್ಟಾರೆ ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ, ಅಭಿವೃದ್ಧಿ ಅಜೆಂಡಾ ಜೊತೆ ತಮ್ಮ ಬತ್ತಳಿಕೆಯಲ್ಲಿದ್ದ ಅಸ್ತ್ರಗಳನ್ನ ಸೈಲೆಂಟಾಗಿ ಮತಬುಟ್ಟಿಗೆ ಬಿಟ್ಟಿರುವುದಂತೂ ಸತ್ಯ.

Published On - 8:00 pm, Mon, 6 February 23

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ