AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ್ಯುಕೂಪದಿಂದ ಭಾರತೀಯರಿಗೆ ನೈಸರ್ಗಿಕ ರಕ್ಷಣೆ, ಕೊರೊನಾದಿಂದ ಕಾಪಾಡ್ತಿದೆ ಉರಿ ಬಿಸಿಲು

ಬೆಂಗಳೂರು: ಕೊರೊನಾ ಎಂಬ ರಾಕ್ಷಸ ಇಡೀ ಪ್ರಪಂಚವನ್ನ ಗಢಗಢ ನಡುಗಿಸಿಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ನಿದ್ದೆಯಲ್ಲೂ ಈ ಹೆಸರು ಕೇಳಿದ್ರೆ ಜನ ಬೆವರಿ ಹೋಗುತ್ತಿದ್ದಾರೆ. ನೆಗಡಿ, ಕೆಮ್ಮು ಬಂದ್ರೆ ಬೆಚ್ಚಿ ಬೀಳುತ್ತಿದ್ದಾರೆ. ಮಾಂಸಾಹಾರ ಮುಟ್ಟುವುದಕ್ಕೂ ಹೆದರುತ್ತಿದ್ದಾರೆ. ಚೀನಾ ಸೇರಿದಂತೆ ವಿವಿಧ ದೇಶದಲ್ಲಿ ಮರಣ ಮೃದಂಗ ಭಾರಿಸಿದ ಹೆಮ್ಮಾರಿ ಕೊರೊನಾ ಎಲ್ಲರಲ್ಲೂ ನಡುಕ ಹುಟ್ಟಿಸಿದೆ. ಆದ್ರೆ ಚೀನಾದ ಪಕ್ಕದಲ್ಲೇ ಇರೋ ಭಾರತಕ್ಕೆ ಮಾತ್ರ ಕೊರೊನಾ ಎಫೆಕ್ಟ್ ಅಷ್ಟರ ಮಟ್ಟಿಗೆ ಆಗಿಲ್ಲ. ಕರುಣೆ ಇಲ್ಲದ ಕೊರೊನಾದಿಂದ ನಮ್ಮನ್ನ ರಕ್ಷಣೆ ಮಾಡ್ತಾ […]

ಮೃತ್ಯುಕೂಪದಿಂದ ಭಾರತೀಯರಿಗೆ ನೈಸರ್ಗಿಕ ರಕ್ಷಣೆ, ಕೊರೊನಾದಿಂದ ಕಾಪಾಡ್ತಿದೆ ಉರಿ ಬಿಸಿಲು
Follow us
ಸಾಧು ಶ್ರೀನಾಥ್​
|

Updated on:Mar 04, 2020 | 11:42 AM

ಬೆಂಗಳೂರು: ಕೊರೊನಾ ಎಂಬ ರಾಕ್ಷಸ ಇಡೀ ಪ್ರಪಂಚವನ್ನ ಗಢಗಢ ನಡುಗಿಸಿಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ನಿದ್ದೆಯಲ್ಲೂ ಈ ಹೆಸರು ಕೇಳಿದ್ರೆ ಜನ ಬೆವರಿ ಹೋಗುತ್ತಿದ್ದಾರೆ. ನೆಗಡಿ, ಕೆಮ್ಮು ಬಂದ್ರೆ ಬೆಚ್ಚಿ ಬೀಳುತ್ತಿದ್ದಾರೆ. ಮಾಂಸಾಹಾರ ಮುಟ್ಟುವುದಕ್ಕೂ ಹೆದರುತ್ತಿದ್ದಾರೆ.

ಚೀನಾ ಸೇರಿದಂತೆ ವಿವಿಧ ದೇಶದಲ್ಲಿ ಮರಣ ಮೃದಂಗ ಭಾರಿಸಿದ ಹೆಮ್ಮಾರಿ ಕೊರೊನಾ ಎಲ್ಲರಲ್ಲೂ ನಡುಕ ಹುಟ್ಟಿಸಿದೆ. ಆದ್ರೆ ಚೀನಾದ ಪಕ್ಕದಲ್ಲೇ ಇರೋ ಭಾರತಕ್ಕೆ ಮಾತ್ರ ಕೊರೊನಾ ಎಫೆಕ್ಟ್ ಅಷ್ಟರ ಮಟ್ಟಿಗೆ ಆಗಿಲ್ಲ. ಕರುಣೆ ಇಲ್ಲದ ಕೊರೊನಾದಿಂದ ನಮ್ಮನ್ನ ರಕ್ಷಣೆ ಮಾಡ್ತಾ ಇರೋದು ಯಾರು ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ರಾಕ್ಷಸ ವೈರಸ್‌ನಿಂದ ಭಾರತೀಯರಿಗೆ ನೈಸರ್ಗಿಕ ರಕ್ಷಣೆ! ಯೆಸ್‌, ಕೊರೊನಾ ಎಂಬ ಡೆಡ್ಲಿ ವೈರಸ್‌ಗೆ ಚೀನಾ ಸೇರಿದಂತೆ ವಿವಿಧ ದೇಶಗಳು ಬೆಕ್ಕಸ ಬೆರಗಾಗಿ ಹೋಗಿವೆ. ಆದ್ರೆ ಭಾರತದಲ್ಲಿ ಇದರ ಎಫೆಕ್ಟ್ಟ್ ಅಷ್ಟಾಗಿ ಆಗಿಲ್ಲ. ಕೊರೊನಾ ಮಾತ್ರವಲ್ಲ ಈ ಹಿಂದೆ ಮರಣ ಮೃದಂಗ ಬಾರಿಸಿದ ಸಾರ್ಸ್, ಎಬೋಲಾ, ಹಳದಿ ಜ್ವರ, ಮಾರ್ಸ್ ಸೇರಿದಂತೆ ಸಾಕಷ್ಟು ಮಾರಣಾಂತಿಕ ರೋಗಗಳು ಸಾಕಷ್ಟು ದೇಶಗಳನ್ನು ನಡುಗಿಸಿವೆ.

ಆದರೆ, ಇವ್ಯಾವುದೇ ರೋಗಗಳು ಭಾರತದಲ್ಲಿ ಅಟ್ಟಹಾಸ ಮೆರೆದಿಲ್ಲ. ಭಾರತಕ್ಕೆ ಈ ಮಾರಣಾಂತಿಕ ರೋಗಗಳಿಂದ ನೈಸರ್ಗಿಕ ರಕ್ಷಣೆಯೊಂದು ಸಿಕ್ಕಿತ್ತು. ಆ ನೈಸರ್ಗಿಕ ರಕ್ಷಣೆಯೇ ಭಾರತದ ಹವಾಮಾನ. ಈ ಹವಾಮಾನವೇ ಈಗಲೂ ಭಾರತಕ್ಕೆ ಮಾರಕ ಕೊರೊನಾ ರೋಗದಿಂದ ರಕ್ಷಣೆ ನೀಡುತ್ತಿದೆ ಅಂದ್ರೆ ನೀವು ನಂಬಲೇ ಬೇಕು.

ಭಾರತೀಯರನ್ನು ಕಾಪಾಡುತ್ತಿದೆ ಧಗಧಗಿಸುವ ಬಿಸಿಲು! ನಿಜ, ಭಾರತದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೇ ಹೆಚ್ಚಿನ ಉಷ್ಣಾಂಶ ಇರುತ್ತೆ. ಹೆಚ್ಚಿನ ಉಷ್ಣಾಂಶದ ಬಿಸಿಲು ಇದ್ದಾಗ ವೈರಸ್‌ಗಳು ಹರಡಲು ಹಾಗೂ ಜೀವಿಸಲು ಸಾಧ್ಯವಾಗಲ್ಲ. ಯಾಕಂದ್ರೆ ಹೆಚ್ಚಿನ ಉಷ್ಣಾಂಶದ ಬಿಸಿಲಿಗೆ ವೈರಸ್‌ಗಳು ಸತ್ತು ಹೋಗ್ತವೆ. ಆದ್ರೆ, ಚೀನಾದಲ್ಲಿ ಕಡಿಮೆ ಉಷ್ಣಾಂಶ, ಶೀತದ ವಾತಾವರಣ ಇದೆ.

ಇಂಥಾ ಕಡಿಮೆ ಉಷ್ಣಾಂಶ, ಶೀತದ ವಾತಾವರಣ ಇದ್ದಾಗ ವೈರಸ್‌ಗಳು ಜೀವಿಸಲು ಅನುಕೂಲಕಾರಿ. ಇಂಥಾ ಹವಾಮಾನದಲ್ಲಿ ವೈರಸ್‌ ಜೀವಿಸಿ, ಬೇರೆ ಬೇರೆಯವರಿಗೂ ಹರಡುತ್ತವೆ. ಚೀನಾದಂತೆ ಜಪಾನ್, ದಕ್ಷಿಣ ಕೋರಿಯಾ ದೇಶಗಳಲ್ಲೂ ಕೂಲ್ ವಾತಾವರಣ ಇದೆ. ಹೀಗಾಗಿ ಈ ದೇಶಗಳಲ್ಲಿ ವೈರಸ್‌ ಸುಲಭವಾಗಿ ಹರಡುತ್ತಿದೆ. ಆದರೆ, ಭಾರತದಲ್ಲಿ ಈ ರೀತಿ ಸುಲಭವಾಗಿ ವೈರಸ್‌ ಹರಡಲು ಸಾಧ್ಯವಿಲ್ಲ. ಭಾರತದ ಹವಾಗುಣವೇ ಭಾರತಕ್ಕೆ ವೈರಸ್‌ಗಳಿಂದ ನೈಸರ್ಗಿಕ ರಕ್ಷಣೆ ನೀಡುತ್ತಿದೆ ಎಂದು ಭಾರತೀಯ ಮೆಡಿಕಲ್ ಅಸೋಸಿಯೇಷನ್ ಹೇಳಿದೆ.

ವೈರಸ್ ಹರಡಲು ನಾವು ಇರುವ ವಾತಾವರಣ ಕೂಡ ಮುಖ್ಯವಾಗಿರುತ್ತೆ. ಚೀನಾ ಸೇರಿದಂತೆ ಇತರೆ ದೇಶದಲ್ಲಿ ಮಹಾಮಾರಿ ಕೊರೊನಾ ಹರಡಲು ಅಲ್ಲಿರುವ ವಾತಾವರಣ ಕೂಡ ಕಾರಣವಾಗಿದೆ. ನಮ್ಮಲ್ಲಿ ಇರುವ ವಾತಾವರಣ ವೈರಸ್‌ ವೇಗಕ್ಕೆ ಕಡಿವಾಣ ಹಾಕಿದೆ. ಏನೇ ಆದ್ರೂ ಕೊರೊನಾ ಎಂಬ ರಾಕ್ಷಸನಿಂದ ಎಚ್ಚರಿಕೆಯಿಂದ ಇರಬೇಕು. ಸಾಕಷ್ಟು ಜಾಗೃತಿ ವಹಿಸಬೇಕು. ಈ ವಿಚಾರದಲ್ಲಿ ಸ್ವಲ್ವ ಯಾಮಾರಿದ್ರೂ ಮಸಣ ಸೇರಬೇಕಾಗುತ್ತೆ. ಸೋ.. ಬಿ ಕೇರ್ ಫುಲ್‌.

Published On - 7:52 am, Wed, 4 March 20

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್