ಡಿಸಿ, ಎಸ್‌ಪಿ ಜಾಗರಣೆ ನಡುವೆಯೂ ದೇವಿಗೆ ಕೋಣ ಬಲಿ ಕೊಟ್ಟ ಗ್ರಾಮಸ್ಥರು!
ದಾವಣಗೆರೆ: ಪ್ರಾಣಿ ಬಲಿ ನಿಷೇಧದ ನಡುವೆಯೂ ದುಗ್ಗಮ್ಮ ಜಾತ್ರೆಯಲ್ಲಿ ಕೋಣ ಬಲಿ ನೀಡಿರುವ ಘಟನೆ ತಡರಾತ್ರಿ ನಡೆದಿದೆ. ದುಗ್ಗಮ್ಮ ಜಾತ್ರೆಯಲ್ಲಿ ಕೋಣ ಬಲಿ ನೀಡುವುದೇ ವಿಶೇಷ. ಹಾಗಾಗಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕೋಣವನ್ನು ಬಲಿ ನೀಡಿ, ಭಕ್ತರು ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದಾರೆ. ಇದಕ್ಕೂ ಮುನ್ನ ದೇವಿಗೆ ಕೋಣ ಬಲಿ ಕೊಡಲು ಭಕ್ತರು ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಕೋಣ ಬಲಿ ನೀಡಿದರೆ ಕ್ರಮ ಜರುಗಿಸುವುದಾಗಿ ಜಿಲ್ಲಾಡಳಿತ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದರು. […]
ದಾವಣಗೆರೆ: ಪ್ರಾಣಿ ಬಲಿ ನಿಷೇಧದ ನಡುವೆಯೂ ದುಗ್ಗಮ್ಮ ಜಾತ್ರೆಯಲ್ಲಿ ಕೋಣ ಬಲಿ ನೀಡಿರುವ ಘಟನೆ ತಡರಾತ್ರಿ ನಡೆದಿದೆ. ದುಗ್ಗಮ್ಮ ಜಾತ್ರೆಯಲ್ಲಿ ಕೋಣ ಬಲಿ ನೀಡುವುದೇ ವಿಶೇಷ. ಹಾಗಾಗಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕೋಣವನ್ನು ಬಲಿ ನೀಡಿ, ಭಕ್ತರು ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದಾರೆ.
ಇದಕ್ಕೂ ಮುನ್ನ ದೇವಿಗೆ ಕೋಣ ಬಲಿ ಕೊಡಲು ಭಕ್ತರು ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಕೋಣ ಬಲಿ ನೀಡಿದರೆ ಕ್ರಮ ಜರುಗಿಸುವುದಾಗಿ ಜಿಲ್ಲಾಡಳಿತ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಸಮ್ಮುಖದಲ್ಲಿ ಸಿರಿಂಜ್ ಮೂಲಕ ದೇವಿಗೆ ಕೋಣದ ರಕ್ತ ಅರ್ಪಣೆ ಮಾಡಿದ್ದರು.
ಮತ್ತೆ ಗ್ರಾಮಸ್ಥರು ದೇವಿಗೆ ಕೋಣ ಬಲಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ದೇವಾಲಯದ 100 ಮೀಟರ್ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕೋಣ ಬಲಿ ತಡೆಯಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನಮಂತರಾಯ ದೇವಸ್ಥಾನದ ಬಳಿ ಇಡೀ ರಾತ್ರಿ ಜಾಗರಣೆ ಇದ್ದರು. ಆದ್ರೂ ಸಹ ಅಧಿಕಾರಿಗಳ ಕಣ್ತಪ್ಪಿಸಿ ಭಕ್ತರು ದೇವಿಗೆ ಕೋಣವನ್ನು ಬಲಿ ನೀಡಿದ್ದಾರೆ.
Published On - 12:02 pm, Wed, 4 March 20