ಕೊರೊನಾ ಎಫೆಕ್ಟ್: ತಿಪಟೂರು ಮಾರುಕಟ್ಟೆಯಲ್ಲಿ ಕೊಳೀತಾ ಬಿದ್ದಿದೆ ಕೊಬ್ಬರಿ
ತುಮಕೂರು: ಈಗಾಗಲೇ ಅನೇಕ ದೇಶಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿ ಹರಡುತ್ತಿರುವ ಕೊರೊನಾ ವೈರಸ್ ಎಫೆಕ್ಟ್ ಕೊಬ್ಬರಿ ರಫ್ತಿಗೂ ತಟ್ಟಿದೆ. ಕೊಬರಿ ಮಾರುಕಟ್ಟೆ ಮೇಲೆ ಕೊರೊನಾ ವೈರಸ್ನ ಭಾರಿ ಪರಿಣಾಮ ಬೀರಿದ್ದು, ಕೊಬ್ಬರಿ ಬೆಲೆ ಕುಸಿದಿದೆ. ವಿಶ್ವವಿಖ್ಯಾತ ಕೊಬ್ಬರಿ ಮಾರುಕಟ್ಟೆ ಎಂದು ಹೆಸರು ಪಡೆದಿರುವ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ₹16 ಸಾವಿರದಿಂದ ₹10 ಸಾವಿರಕ್ಕೆ ಕೊಬ್ಬರಿ ಬೆಲೆ ಇಳಿದಿದೆ. ಒಂದು ವರ್ಷಕ್ಕೆ 60 ಲಕ್ಷ ಟನ್ ಕೊಬ್ಬರಿ ರಫ್ತಾಗುತ್ತಿತ್ತು. ಅದರಲ್ಲಿ ಚೀನಾಗೆ […]
ತುಮಕೂರು: ಈಗಾಗಲೇ ಅನೇಕ ದೇಶಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿ ಹರಡುತ್ತಿರುವ ಕೊರೊನಾ ವೈರಸ್ ಎಫೆಕ್ಟ್ ಕೊಬ್ಬರಿ ರಫ್ತಿಗೂ ತಟ್ಟಿದೆ. ಕೊಬರಿ ಮಾರುಕಟ್ಟೆ ಮೇಲೆ ಕೊರೊನಾ ವೈರಸ್ನ ಭಾರಿ ಪರಿಣಾಮ ಬೀರಿದ್ದು, ಕೊಬ್ಬರಿ ಬೆಲೆ ಕುಸಿದಿದೆ.
ವಿಶ್ವವಿಖ್ಯಾತ ಕೊಬ್ಬರಿ ಮಾರುಕಟ್ಟೆ ಎಂದು ಹೆಸರು ಪಡೆದಿರುವ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ₹16 ಸಾವಿರದಿಂದ ₹10 ಸಾವಿರಕ್ಕೆ ಕೊಬ್ಬರಿ ಬೆಲೆ ಇಳಿದಿದೆ. ಒಂದು ವರ್ಷಕ್ಕೆ 60 ಲಕ್ಷ ಟನ್ ಕೊಬ್ಬರಿ ರಫ್ತಾಗುತ್ತಿತ್ತು. ಅದರಲ್ಲಿ ಚೀನಾಗೆ ₹12 ಲಕ್ಷ ಟನ್ ಕೊಬ್ಬರಿ ರಫ್ತಾಗುತ್ತಿತ್ತು. ಆದರೆ ಕೊರೊನಾ ವೈರಸ್ನಿಂದಾಗಿ ಕಳೆದ ಎರಡು ತಿಂಗಳಿಂದ ಕೊಬ್ಬರಿ ರಫ್ತು ಕುಸಿತ ಕಂಡಿದೆ. ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
Published On - 1:01 pm, Wed, 4 March 20