ದುಬಾರೆ ಆನೆ​ ಕ್ಯಾಂಪ್​ ವೀಕ್ಷಣೆಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

  • TV9 Web Team
  • Published On - 16:53 PM, 4 Mar 2020
ದುಬಾರೆ ಆನೆ​ ಕ್ಯಾಂಪ್​ ವೀಕ್ಷಣೆಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

ಕೊಡಗು: ಆನೆ ಕ್ಯಾಂಪ್‌ ವೀಕ್ಷಿಸಲು ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ದುಬಾರೆಯಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಲಯನ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್(14) ಹಾಗೂ 10ನೇ ತರಗತಿಯ ವಿದ್ಯಾರ್ಥಿ ಲೆನಿನ್(15) ಮೃತಪಟ್ಟವರು.

ದುಬಾರೆ ಆನೆ ಕ್ಯಾಂಪ್‌ ವೀಕ್ಷಿಸಲು ಶಾಲೆಯಿಂದ ವಿದ್ಯಾರ್ಥಿಗಳು ಪಿಕ್ನಿಕ್​ಗೆ ತೆರಳಿದ್ದರು. ಆನ್ ಕ್ಯಾಂಪ್ ವೀಕ್ಷಿಸಿ ಮರುಳುತ್ತಿದ್ದಾಗ ನದಿ ದಾಟುತ್ತಿದ್ದ ವೇಳೆ ಆಳವಾದ ಜಾಗಕ್ಕೆ ತೆರಳಿ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.