ನೆಲಮಂಗಲ ಟೋಲ್ ದರ ಏರಿಕೆ: ಇಂದು ಮಧ್ಯರಾತ್ರಿಯಿಂದಲೇ ವಾಹನ ಸವಾರರಿಗೆ ಬೆಲೆ ಏರಿಕೆಯ ಬರೆ

ಕರ್ನಾಟಕದಲ್ಲೂ ದಿನದಂದ ದಿನಕ್ಕೆ ಒಂದಲ್ಲ ಒಂದು ಬೆಲೆ ಏರಿಕೆಯಿಂದ ಜನಸಾಮಾನ್ಯರು ಪರಿತಪ್ಪಿಸುವಂತಾಗಿದೆ. ಇದೇ ರೀತಿಯಲ್ಲಿ ವಾಹನ ಸವಾರರಿಗೆ ಮೇಲಿಂದ ಮೇಲೆ ಬರೆಯಾಗಿದ್ದು ರಾಷ್ಟ್ರೀಯ ಹೆದ್ದಾರಿ ವಾಹನ ಸವಾರರಿಗೆ ದರ ಏರಿಕೆ ಶಾಕ್ ಎದುರಾಗಿದೆ. ನೆಲಮಂಗಲ ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಬೆಲೆ ಏರಿಕೆ ಮಾಡಲಾಗಿದ್ದು, ಸೆ.1ರಿಂದ ಹೊಸ ದರ ಜಾರಿಗೆ ಬರಲಿದೆ. ಹಾಗಾದ್ರೆ ಟೋಲ್ ಯಾವ ವಾಹನಕ್ಕೆ ಎಷ್ಟು ಹೆಚ್ಚಿಸಲಾಗಿದೆ ಎನ್ನುವ ವಿವರ ಇಲ್ಲಿದೆ.

ನೆಲಮಂಗಲ ಟೋಲ್ ದರ ಏರಿಕೆ: ಇಂದು ಮಧ್ಯರಾತ್ರಿಯಿಂದಲೇ ವಾಹನ ಸವಾರರಿಗೆ ಬೆಲೆ ಏರಿಕೆಯ ಬರೆ
Nelamangala Toll
Edited By:

Updated on: Aug 31, 2026 | 8:43 PM

ಬೆಂಗಳೂರು, (ಆಗಸ್ಟ್ 31):  ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಸಂಚರಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದರ ಏರಿಕೆಯ ಶಾಕ್ ನೀಡಿದೆ. ನೆಲಮಂಗಲ–ಹಾಸನ(Nelamangala-Hassana Toll) ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ-ದೇವಿಹಳ್ಳಿ ವ್ಯಾಪ್ತಿಯ ಟೋಲ್ ಪ್ಲಾಜಾಗಳಲ್ಲಿ ಇಂದು ಮಧ್ಯರಾತ್ರಿ (ಸೆಪ್ಟೆಂಬರ್ 1) 12 ಗಂಟೆಯಿಂದ ಅನ್ವಯವಾಗುವಂತೆ ಟೋಲ್ ಶುಲ್ಕವನ್ನು 5 ರೂ. ನಿಂದ 10 ರೂ.  ಹೆಚ್ಚಿಸಲಾಗಿದೆ.

ಹೌದ…. ದಿನದಿಂದ ದಿನಕ್ಕೆ ಜನಸಾಮಾನ್ಯರು ಹೀಗೆ ನಾನಾ ಸಮಸ್ಯೆಗಳ ಜೊತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಟೋಲ್ ಗಳಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಇದೇ ರೀತಿಯಲ್ಲಿ ಇಂದು ಮಧ್ಯರಾತ್ರಿ ಸೆಪ್ಟೆಂಬರ್‌ 1 ರಿಂದ ದರ ಏರಿಕೆ ಮಾಡಿ ಶಾಕ್ ನೀಡಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಪ್ರತಿ ವಾಹನಗಳಿಗೆ 5 ರಿಂದ 10 ರೂಪಾಯಿ ದರ ಏರಿಕೆ ಮಾಡಿ ಶಾಕ್ ನೀಡಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್‌ ಟೋಲ್ ಗಳಲ್ಲಿ ಏರಿಕೆಯಾಗಿದೆ.

ಇದನ್ನೂ ನೋಡಿ: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್: ಉಚಿತ ವಿದ್ಯುತ್ ಯೋಜನೆ ಬಗ್ಗೆ ಮಹತ್ವದ ಅಪ್‌ಡೇಟ್

ಯಾವ ವಾಹನಕ್ಕೆ ಎಷ್ಟು ಟೋಲ್ ಹೆಚ್ಚಳ?

ಇನ್ನೂ ನೆಲಮಂಗಲ ಮೂಲಕ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ ನಲ್ಲಿ ಬರೆಯಿಂದ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಕಾರು,ಜೀಪು, ವ್ಯಾನ್ ಹಾಗೂ ಎಲ್.ಎಮ್.ವಿ ವಾಹನಗಳಿಗೆ ಮೊದಲಿದ್ದ ದರ ಫಾಸ್ಟ್ಯಾಗ್ ಇದ್ದರೆ ಏಕಮುಖ 60 ದಿನದ ಸಂಚಾರ 85 ರಿಂದ 90 ರೂ.ಗೆ ಏರಿಕೆ ಅಂದರೆ ಐದು ರೂಪಾಯಿ ಜಾಸ್ತಿಯಾಗಿದ್ದು, ಲಘು ವಾಣಿಜ್ಯ ಹಾಗೂ ಸರಕು ವಾಹನಗಳು ಈಗಿನ ದರ ಏಕಮುಖ 100 ರೂ ನಿಂದ 105 ಹಾಗೂ ದಿನದ ಸಂಚಾರ 155 ಹಾಗೂ ಬಸ್ ಮತ್ತು ಟ್ರಕ್ ಏಕಮುಖ 205 ದಿನದ ಸಂಚಾರ 310 ರೂ ಏರಿಕೆ ಜೊತೆಗೆ ಮಲ್ಟಿ ಆಕ್ಸಲ್ ಹಾಗು ಬೃಹತ್ ವಾಹನ ಏಕಮುಖ 330 ರೂ ದಿನದ ಸಂಚಾರ 495 ರೂಪಾಯಿಗೆ ಹೆಚ್ಚಿಸಲಾಗಿದೆ.

ಒಟ್ಟಾರೆ ರೈತರಿಗೆ ಮಳೆಯಿಲ್ಲದೆ ಬರಗಾಲ ಆವರಿಸಿ ಕಂಗಾಲಾಗಿದ್ರೆ ಇತ್ತ ಜನಸಾಮಾನ್ಯರು ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ವಾಹನಗಳಿ ಖರೀದಿಯಿಂದ ಎಲ್ಲಾ ರೀತಿಯ ತೆರಿಗೆ ಕಟ್ಟಿದ್ರು ಟೋಲ್ ಗಳಲ್ಲಿ ಇಂತಹ ದರ ಏರಿಕೆ ಯಾಕೆ ಎಂದು ಪ್ರಶ್ನೆ ಮಾಡಿ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us