ಹನುಮ ಮಾಲಾಧಾರಿಗಳಿಂದ ಸಿದ್ಧರಬೆಟ್ಟದಲ್ಲಿ ನಿಯಮ ಉಲ್ಲಂಘನೆ: ಸ್ಥಳೀಯರ ಆರೋಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ನಿಜಗಲ್ ಗ್ರಾಮಕ್ಕೆ ಹೊಂದಿಕೊಂಡಿರುವ ಸಿದ್ಧರಬೆಟ್ಟ, ಸಿದ್ಧರ ಪರಂಪರೆಯ ನೆಲೆಯಾಗಿದೆ. ಕಳೆದ ಒಂದು ವಾರದಿಂದ ಕಾನೂನು ಬಾಹಿರವಾಗಿ ಬೆಟ್ಟಕ್ಕೆ ಲೇಸರ್ ಲೈಟ್‌ಗಳ ಅಳವಡಿಕೆ ಮಾಡಲಾಗಿತ್ತು. ಮಾಜಿ ರೌಡಿ ಶೀಟರ್ ಜಗದೀಶ ಚೌಧರಿ ನೇತೃತ್ವದಲ್ಲಿ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಲಾಗಿದೆ ಎಂದು ಆರೋಪಗಳು ವ್ಯಕ್ತವಾಗುತ್ತಿದೆ.
ನೆಲಮಂಗಲ: ಜಿಲ್ಲೆ ಹಾಗೂ ತಾಲೂಕು ಆಡಳಿತದ ವಿರೋಧದ ನಡುವೆಯೂ, ಸಿದ್ಧರಬೆಟ್ಟಕ್ಕೆ ಹನುಮ ಮಾಲಾಧಾರಿಗಳು ಪಾದಯಾತ್ರೆ ಹೊರಟಿದ್ದಾರೆ. ಸುಮಾರು 5000 ಮಾಲಾಧಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ನಿಜಗಲ್ ಗ್ರಾಮಕ್ಕೆ ಹೊಂದಿಕೊಂಡಿರುವ ಸಿದ್ಧರಬೆಟ್ಟ, ಸಿದ್ಧರ ಪರಂಪರೆಯ ನೆಲೆಯಾಗಿದೆ. ಕಳೆದ ಒಂದು ವಾರದಿಂದ ಕಾನೂನು ಬಾಹಿರವಾಗಿ ಬೆಟ್ಟಕ್ಕೆ ಲೇಸರ್ ಲೈಟ್‌ಗಳ ಅಳವಡಿಕೆ ಮಾಡಲಾಗಿತ್ತು. ಮಾಜಿ ರೌಡಿ ಶೀಟರ್ ಜಗದೀಶ ಚೌಧರಿ ನೇತೃತ್ವದಲ್ಲಿ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಲಾಗಿದೆ ಎಂದು ಆರೋಪಗಳು ವ್ಯಕ್ತವಾಗುತ್ತಿದೆ.
ಸಿದ್ದರಬೆಟ್ಟ ಸಂಪೂರ್ಣ ಸರ್ಕಾರಿ ಆಸ್ತಿಯಾಗಿದೆ. ದೇಣಿಗೆ ಸಂಗ್ರಹಿಸುವುದಕ್ಕೆ ಸಿದ್ಧರ ಬೆಟ್ಟ ಹೆಸರಿನಲ್ಲಿ ಬ್ಯಾಂಕ್ ಖಾತೆ, ಸಮಿತಿ ರಚನೆ ಮಾಡಲಾಗಿದ್ದು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ಕಾನೂನು ಬಾಹೀರವಾಗಿ ಬೆಟ್ಟಕ್ಕೆ ಲೇಸರ್ ಲೈಟ್‌ಗಳ ಅಳವಡಿಕೆ ಮಾಡುತ್ತಿದ್ದಾರೆ. ಯಾರ ಅನುಮತಿಯೂ ಇಲ್ಲದೆ ಹನುಮಯಾತ್ರೆ ನಡೆಯುತ್ತಿದೆ. ಕೋವಿಡ್ ನಿಯಮ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆ ನಡುವೆಯೂ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Published On - 9:35 am, Sun, 27 December 20