ಬೀದರ್ನಲ್ಲಿ ಹೈಟೆಕ್ ಮಾದರಿಯ ನವಜಾತ ಶಿಶು ಘಟಕ ಆರಂಭ: ಹಸುಗೂಸುಗಳ ಸಾವಿನ ಸಂಖ್ಯೆಯಲ್ಲಿ ಭಾರಿ ಇಳಿಕೆ
ಬೀದರ್: ಜಿಲ್ಲೆಯಲ್ಲಿ ಪ್ರತಿವರ್ಷ ಹತ್ತಾರು ಹಸುಗೂಸುಗಳು ಸಾವನ್ನಪ್ಪುತಿದ್ದವು. ಅವಧಿ ಪೂರ್ವ ಜನನ, ಅಪೌಷ್ಟಿಕತೆ, ಕಡಿಮೆ ತೂಕ, ಕಾಮಾಲೆ, ಗುಣಮಟ್ಟದ ಚಿಕಿತ್ಸೆ ದೊರೆಯದೆ ಹಸುಗೂಸು ಸಾವಿನ ಸಂಖ್ಯೆ ಏರುತ್ತಿತ್ತು. ಖಾಸಗಿಯಲ್ಲಿ ಶಿಶುಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸಬೇಕಾದರೆ ಲಕ್ಷ ರೂಪಾಯಿ ಸುರಿಯಬೇಕಾಗಿತ್ತು. ಇದನ್ನೇಲ್ಲ ಗಮನಿಸಿದ ವೈದ್ಯರು ಹೈಟೆಕ್ ಮಾದರಿಯ ನವಜಾತ ಶಿಶು ಘಟಕ ಆರಂಭಿಸಿದ್ದು, ಶಿಶುಗಳ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಅಲ್ಲದೇ ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಫಲವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾದರೂ ನವಜಾತ […]
ಬೀದರ್: ಜಿಲ್ಲೆಯಲ್ಲಿ ಪ್ರತಿವರ್ಷ ಹತ್ತಾರು ಹಸುಗೂಸುಗಳು ಸಾವನ್ನಪ್ಪುತಿದ್ದವು. ಅವಧಿ ಪೂರ್ವ ಜನನ, ಅಪೌಷ್ಟಿಕತೆ, ಕಡಿಮೆ ತೂಕ, ಕಾಮಾಲೆ, ಗುಣಮಟ್ಟದ ಚಿಕಿತ್ಸೆ ದೊರೆಯದೆ ಹಸುಗೂಸು ಸಾವಿನ ಸಂಖ್ಯೆ ಏರುತ್ತಿತ್ತು. ಖಾಸಗಿಯಲ್ಲಿ ಶಿಶುಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸಬೇಕಾದರೆ ಲಕ್ಷ ರೂಪಾಯಿ ಸುರಿಯಬೇಕಾಗಿತ್ತು. ಇದನ್ನೇಲ್ಲ ಗಮನಿಸಿದ ವೈದ್ಯರು ಹೈಟೆಕ್ ಮಾದರಿಯ ನವಜಾತ ಶಿಶು ಘಟಕ ಆರಂಭಿಸಿದ್ದು, ಶಿಶುಗಳ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಅಲ್ಲದೇ ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆಧುನಿಕ ತಂತ್ರಜ್ಞಾನದ ಫಲವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾದರೂ ನವಜಾತ ಶಿಶುಗಳ ಮರಣ ಪೂರ್ತಿ ನಿಂತಿಲ್ಲ. ಆದರೆ ಜಿಲ್ಲೆಯಲ್ಲಿ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಮುಖವಾಗಿದ್ದು ಸಂತೋಷದ ಸಂಗತಿ. ಅನೇಕ ಕಾರಣಗಳಿಂದಾಗಿ ರಾಜ್ಯದ ವಿವಿಧೆಡೆ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಿದ್ದರೂ ಗಡಿ ಜಿಲ್ಲೆ ಬೀದರ್ನಲ್ಲಿ ಕಳೆದೆರಡು ವರ್ಷದಿಂದ ಶಿಶುಗಳ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಅದಕ್ಕೆ ಪ್ರಮುಖವಾದ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ಹೈಟೆಕ್ ಮಾದರಿಯಲ್ಲಿ ನವಜಾತ ಶಿಶು ಘಟಕ ಆರಂಭ ಮತ್ತು ಇಲ್ಲಿ ಸುಧಾರಿತ ವೈದ್ಯಕೀಯ ಚಿಕಿತ್ಸೆಗಳಿಂದ.
ಭಾರಿ ಪ್ರಮಾಣದಲ್ಲಿ ಇಳಿಕೆ ದಿನದ 24 ಗಂಟೆಯೂ ಶಿಶುಗಳಿಗೆ ಚಿಕಿತ್ಸೆ ಕೊಡುತ್ತಿದ್ದು, ನವಜಾತ ಶಿಶುಗಳ ಸಾವಿನ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜಿಲ್ಲೆಯ ಯಾವ ಖಾಸಗಿ ಆಸ್ಪತ್ರೆಯಲ್ಲಿ ಇಲ್ಲದ ಅತ್ಯಾಧುನಿಕ 30 ಬೆಡ್ ಸೌಲಭ್ಯಯುಳ್ಳ ಎನ್ ಐಸಿಯು ಘಟಕ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಾಗಿದ್ದು, 6 ವೆಂಟಿಲೇಟರ್ಗಳು, 42 ನರ್ಸಿಂಗ್ ಸ್ಟಾಫ್ ಇದೆ. 6 ಜನರ ನುರಿತ ವೈದ್ಯರು ಇಲ್ಲಿ ಹಗಲು ರಾತ್ರಿ ಎನ್ನದೆ ಶಿಶುಗಳ ಆರೋಗ್ಯ ನೋಡಿಕೊಳ್ಳುತ್ತಿದ್ದು, ಇದು ಜಿಲ್ಲೆಯಲ್ಲಿಯೇ ಮಾದರಿ ನವಜಾತ ಶಿಶು ಘಟಕವಾಗಿ ಹೊರಹೊಮ್ಮಿದೆ.
ಇಲ್ಲಿ ಸಿಗುವ ಎನ್ ಐಸಿಯು ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿದರೆ ಪ್ರತಿ ದಿನ 10 ರಿಂದ 15 ಸಾವಿರ ರೂಪಾಯಿ ವರೆಗೆ ಹಣ ಬೇಕಾಗುತ್ತದೆ. ಆದರೆ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ಈ ಸೌಲಭ್ಯವನ್ನ ಬಡವರು ಹೆಚ್ಚು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕೆಂದು ಇಲ್ಲಿನ ವೈದ್ಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅವಧಿಗೆ ಪೂರ್ವ ಜನನ, ಅಪೌಷ್ಟಿಕತೆ, ಕಡಿಮೆ ತೂಕ, ಕಾಮಾಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಎನ್ ಐಸಿಯುನಲ್ಲಿ ಚಿಕಿತ್ಸೆ ಕೊಡಿಸುವುದು ಅನಿವಾರ್ಯ. ಇಂತಹ ಚಿಕಿತ್ಸೆಯನ್ನ ಒಂದು ನವಜಾತ ಶಿಶುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಬೇಕಾದರೆ ಪ್ರತಿ ಬೇಡ್ ಚಾರ್ಜ್ 10 ಸಾವಿರ ರೂಪಾಯಿ ಇರುತ್ತದೆ. ಪ್ರತಿ ದಿನ ಏಳು ಸಾವಿರ ರೂಪಾಯಿ ಮೌಲ್ಯದ ಇಂಜೆಕ್ಷನ್ ಕೂಡಾ ಕೊಡಬೇಕಾಗುತ್ತದೆ. ಒಂದು ವಾರಗಳ ಕಾಲ ಒಂದು ಮಗು ಎನ್ ಐಸಿಯುನಲ್ಲಿ ಚಿಕಿತ್ಸೆ ಪಡೆದರೆ ಎರಡರಿಂದ ಮೂರು ಲಕ್ಷ ರೂಪಾಯಿ ಕಟ್ಟಿಟ್ಟ ಬುತ್ತಿ. ಆದರೆ ಇದೇ ಚಿಕಿತ್ಸೆಯನ್ನ ಜಿಲ್ಲಾಸ್ಪತ್ರೆಯಲ್ಲಿ ಪಡೆದರೆ ಒಂದೂ ನಯಾಪೈಸೆ ಕೂಡಾ ಖರ್ಚಾಗುವುದಿಲ್ಲ. ಹೀಗಾಗಿ ಬಡವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯಲ್ಲಿ ಹೈಟೆಕ್ ಮಾದರಿಯ ಎನ್ ಐಸಿಯು ಘಟಕ ಆರಂಭವಾಗಿದೆ.
ಎರಡು ವರ್ಷದ ಲೆಕ್ಕಹಾಕಿದಾಗ ಜಿಲ್ಲೆಯಲ್ಲಿ ಅವಧಿಗೆ ಪೂರ್ವ ಜನನ, ಅಪೌಷ್ಟಿಕತೆ, ಕಡಿಮೆ ತೂಕ, ಕಾಮಾಲೆಯಿಂದ ಸುಮಾರು 1,172 ಮಕ್ಕಳು ಜನಿಸಿದರೆ ಅದರಲ್ಲಿ 166 ಮಕ್ಕಳು ಮಾತ್ರ ಸಾವೀಗೀಡಾಗಿದ್ದಾರೆ. 2020 ರಲ್ಲಿ 1,263 ಮಕ್ಕಳು ಜನನವಾಗಿದ್ದರೆ ಈ ಪೈಕಿ 126 ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೂ 2021 ಫೆಬ್ರವರಿ ವರೆಗೆ 94 ಶಿಶುಗಳು ಜನನವಾಗಿದ್ದರೆ ಅದರಲ್ಲಿ 8 ಮಕ್ಕಳು ಮೃತಪಟ್ಟಿದ್ದಾರೆ. ಈ ಎಲ್ಲಾ ಅಂಕಿ ಅಂಶವನ್ನ ಗಮನಿಸಿದರೆ ಈ ಹಿಂದೆ ಒಂದು ಸಾವಿರ ಶಿಶುಗಳು ಜನಿಸಿದರೆ ಶೇಕಡಾ 60 ರಷ್ಟು ಶಿಶುಗಳು ಸಾವನ್ನಪ್ಪುತ್ತಿದ್ದವು. ಈಗ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ರಾಜ್ಯದಲ್ಲಿ ನವಜಾತ ಶಿಶುಗಳ ಆರೈಕೆಗಾಗಿ ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದೆ. ಆದರೆ ಆ ಯೋಜನೆಗಳು ಹೆಸರಿಗೆ ಮಾತ್ರ ಇದ್ದು ಅದರ ಪ್ರಯೋಜನಗಳು ಮಾತ್ರ ಬಡ ಮಕ್ಕಳಿಗೆ ಸಿಗುತ್ತಿರಲಿಲ್ಲ. ಬೀದರ್ ಜಿಲ್ಲಾಸ್ಪತ್ರೆಯ ವೈದ್ಯರ ಕಾಳಜಿಯಿಂದ ಬಡವರು ಖಾಸಗಿ ಆಸ್ಪತ್ರೆಗೆ ಮಕ್ಕಳನ್ನ ಸೇರಿಸಿ ಲಕ್ಷ ಲಕ್ಷ ರೂಪಾಯಿ ಹಣ ಸುರಿಯುವುದನ್ನು ತಪ್ಪಿಸಿ ಸರ್ಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆಯವರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ನವಜಾತ ಶಿಶು ಆರೈಕೆ ಕೇಂದ್ರ ಕೆಲಸ ಮಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳೆಂದರೇ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ ಎಂಬ ಕೂಗಿನ ನಡುವೆಯೂ ಜಿಲ್ಲಾಸ್ಪತ್ರೆ ಶಿಶುಗಳಿಗೆ ಉತ್ತಮ ಚಿಕಿತ್ಸೆಯನ್ನ ನೀಡುತ್ತಿದೆ.
ಇದನ್ನೂ ಓದಿ
ಕರಿಚಿರತೆ ಅಷ್ಟೊಂದು ವೇಗವಾಗಿ ಮರವೇರಿದ್ದೇಕೆ..? ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮೈಸೂರಿನ ಪಾರ್ಕ್ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ
Published On - 1:37 pm, Tue, 9 March 21