New Disease: ಕೊವಿಡ್ ಹಾವಳಿಯ ಬೆನ್ನಲ್ಲೇ ಕರ್ನಾಟಕದ ಶಾಲಾ ಮಕ್ಕಳಲ್ಲಿ ಹೊಸ ರೋಗ ಪತ್ತೆ; ಆತಂಕದಲ್ಲಿ ಪೋಷಕರು
Karnataka News: ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಕೊವಿಡ್ ಹಾವಳಿ ಶುರುವಾದ ಬಳಿಕ ಶಾಲೆಗಳಲ್ಲಿ ಮಕ್ಕಳಿಗೆ ಹೊಸ ರೋಗ ಕಾಡುತ್ತಿದೆ. ಮಕ್ಕಳಿಂದ ಮಕ್ಕಳಿಗೆ ಹರಡುತ್ತಿರುವ ರೋಗದಿಂದ ಪೋಷಕರು ಕಂಗಾಲಾಗಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾವೈರಸ್ ಪ್ರಕರಣಗಳ (Coronavirus Cases) ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ನಿನ್ನೆ ಕರ್ನಾಟಕದಲ್ಲಿ 1,209 ಕೊವಿಡ್ ಕೇಸುಗಳು (Covid-19 Cases) ಪತ್ತೆಯಾಗಿವೆ. ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಕೊವಿಡ್ ಹಾವಳಿ ಶುರುವಾದ ಬಳಿಕ ಶಾಲೆಗಳಲ್ಲಿ ಮಕ್ಕಳಿಗೆ ಹೊಸ ರೋಗ ಕಾಡುತ್ತಿದೆ. ಮಕ್ಕಳಿಂದ ಮಕ್ಕಳಿಗೆ ಹರಡುತ್ತಿರುವ ರೋಗದಿಂದ ಪೋಷಕರು ಕಂಗಾಲಾಗಿದ್ದಾರೆ. ಕರ್ನಾಟಕದ ಶಾಲೆಗಳಲ್ಲಿ ಕೈ, ಕಾಲು ಮತ್ತು ಬಾಯಿ ರೋಗದ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಕೈ ಹಾಗೂ ಬಾಯಿ ಸುತ್ತಮುತ್ತ ಮಕ್ಕಳಿಗೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದೆ. ಗುಳ್ಳೆಗಳು ಹಾಗೂ ಗಾಯಗಳಿಂದ ಮಕ್ಕಳಿಗೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತಿದೆ. ಕೊವಿಡ್ ಹಾವಳಿ ಕಡಿಮೆಯಾಯ್ತು ಅಂತ ನಿರಾಳವಾಗಿದ್ದ ಪೋಷಕರು ಹೊಸ ವೈರಲ್ ರೋಗದ ಕಾಟದಿಂದ ಕಂಗೆಟ್ಟಿದ್ದಾರೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಿಕ್ಕ ಮಕ್ಕಳಲ್ಲಿಯೇ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಈ ಹೊಸ ರೋಗ ಮಕ್ಕಳಿಂದ ಮಕ್ಕಳಿಗೆ ಹರಡುತ್ತಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮುಂಗಾರು ಮಳೆಯ ಆರ್ಭಟ ಮತ್ತು ಬೆಂಗಳೂರಿನಲ್ಲಿ ಹಠಾತ್ ಹವಾಮಾನ ಬದಲಾವಣೆಯಿಂದ ಸೋಂಕುಗಳ ಉಲ್ಬಣವಾಗುತ್ತಿದೆ. ಕೈ, ಕಾಲು ಮತ್ತು ಬಾಯಿ ರೋಗದ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕ ಮಕ್ಕಳಲ್ಲಿ ಹೆಚ್ಚುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗ ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಶಾಲೆಗಳು ಮಕ್ಕಳು ಹಾಗೂ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ರೋಗ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದರೆ ಸೂಕ್ತ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.
ಇದನ್ನೂ ಓದಿ: COVID-19 Updates: ಭಾರತದಲ್ಲಿ ಹೊಸ ಕೊವಿಡ್ ರೂಪಾಂತರಿ ಬಿಎ 2.75 ಪತ್ತೆ; WHO ಮಾಹಿತಿ
ಗುರುವಾರ 1,072 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಸೋಂಕಿಗೆ ಒಳಗಾಗಿದ್ದವರಲ್ಲಿ 39,36,160 ಮಂದಿ ಗುಣವಾಗಿದ್ದಾರೆ. ಪ್ರಸ್ತುತ ಕರ್ನಾಟದಲ್ಲಿ ಕೊರೊನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,739ಕ್ಕೆ ಏರಿಕೆಯಾಗಿದೆ. ಕೊವಿಡ್ ಸೋಂಕಿನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಇದುವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 40,084ಕ್ಕೆ ಏರಿಕೆಯಾಗಿದೆ. ಬೆಂಗಳೂರೊಂದರಲ್ಲೇ 1,068 ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿಯಲ್ಲಿ 13, ಬಳ್ಳಾರಿಯಲ್ಲಿ 14, ಮೈಸೂರಿನಲ್ಲಿ 25, ಧಾರವಾಡದಲ್ಲಿ 18 ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಉಳಿದ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಕೊವಿಡ್ ಪ್ರಕರಣಗಳು ದೃಢಪಟ್ಟಿವೆ.
Published On - 8:59 am, Fri, 15 July 22