ಬೆಂಗಳೂರು: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕೆಲವು ರಾಜ್ಯಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಹಾಗಾಗಿ ಸೇವಾಸಿಂಧು ಅಡಿ ಟಿಕೆಟ್ ಬುಕ್ ಮಾಡುವವರಿಗೆ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
ಕೊರೊನಾ ಸೋಂಕು ಹೆಚ್ಚಿರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ಬರೋರು 1 ವಾರ ಕಡ್ಡಾಯ ಕ್ವಾರಂಟೈನ್ನಲ್ಲಿರಲೇಬೇಕು. ಆರೋಗ್ಯ ಇಲಾಖೆ ಸೂಚಿಸಿರುವ ಹೋಟೆಲ್ ಅಥವಾ ಸಮುದಾಯ ಭವನಗಳಲ್ಲಿ ಕ್ವಾರಂಟೈನ್ ಆಗಲೇಬೇಕು. 5-7ನೇ ದಿನದ ಮಧ್ಯೆ ಗಂಟಲು ದ್ರವ ಸಂಗ್ರಹಿಸಿ ಟೆಸ್ಟ್ ಮಾಡಲಾಗುವುದು.
ಉಳಿದ ರಾಜ್ಯಗಳಿಂದ ಬಂದವರಿಗೆ ಕೇವಲ ಹೋಂ ಕ್ವಾರಂಟೈನ್ ಮಾತ್ರ ಎಂದು ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.