AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಡಾ ನಗರದಲ್ಲಿ ಕೊರೊನಾಗೆ ಮಕ್ಕಳೇ ಟಾರ್ಗೆಟ್, ಪೋಷಕರಿಗೆ ಆತಂಕ!

ಧಾರವಾಡ: ಕೊರೊನಾ ರುದ್ರನರ್ತನಕ್ಕೆ ಇಡೀ ರಾಜ್ಯವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ನಿತ್ಯ ಸೆಂಚುರಿ ದಾಟ್ತಿರೋದು ಎಲ್ಲರ ಆತಂಕ ಹೆಚ್ಚಿಸಿದೆ. ಅದ್ರಲ್ಲೂ ಧಾರವಾಡದಲ್ಲಿ ಮಕ್ಕಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ತಿರೋದು ಪೋಷಕರನ್ನ ದಂಗು ಬಡಿಸಿದೆ. ಬೆನ್ನತ್ತಿರೋ ಬೇತಾಳದಂತಿದೆ.. ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ಒಬ್ಬರಿಂದ ಒಬ್ಬರಿಗೆ ವೈರಸ್ ಹರಡುತ್ತಲೇ ಇದೆ. ಸಿಕ್ಕ ಸಿಕ್ಕವರ ದೇಹ ಹೊಕ್ಕಿದೆ. ಹೊರಗೆ ಹೋದವ್ರನ್ನೂ ಬಿಡ್ತಿಲ್ಲ, ಮನೆಯಿಲ್ಲದ್ದವರನ್ನೂ ಬಿಡ್ತಿಲ್ಲ.. ಹಸು ಕಂದಮ್ಮಗಳಿಂದ ಹಿಡಿದು ವೃದ್ಧರತನಕ ಎಲ್ರೂ ಕೊರೊನಾ ಮಹಾಮಾರಿಯ ಸುಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ. ಇದ್ರ […]

ಪೇಡಾ ನಗರದಲ್ಲಿ ಕೊರೊನಾಗೆ ಮಕ್ಕಳೇ ಟಾರ್ಗೆಟ್, ಪೋಷಕರಿಗೆ ಆತಂಕ!
ಸಾಧು ಶ್ರೀನಾಥ್​
| Edited By: |

Updated on: May 23, 2020 | 9:54 AM

Share

ಧಾರವಾಡ: ಕೊರೊನಾ ರುದ್ರನರ್ತನಕ್ಕೆ ಇಡೀ ರಾಜ್ಯವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ನಿತ್ಯ ಸೆಂಚುರಿ ದಾಟ್ತಿರೋದು ಎಲ್ಲರ ಆತಂಕ ಹೆಚ್ಚಿಸಿದೆ. ಅದ್ರಲ್ಲೂ ಧಾರವಾಡದಲ್ಲಿ ಮಕ್ಕಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ತಿರೋದು ಪೋಷಕರನ್ನ ದಂಗು ಬಡಿಸಿದೆ.

ಬೆನ್ನತ್ತಿರೋ ಬೇತಾಳದಂತಿದೆ.. ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ಒಬ್ಬರಿಂದ ಒಬ್ಬರಿಗೆ ವೈರಸ್ ಹರಡುತ್ತಲೇ ಇದೆ. ಸಿಕ್ಕ ಸಿಕ್ಕವರ ದೇಹ ಹೊಕ್ಕಿದೆ. ಹೊರಗೆ ಹೋದವ್ರನ್ನೂ ಬಿಡ್ತಿಲ್ಲ, ಮನೆಯಿಲ್ಲದ್ದವರನ್ನೂ ಬಿಡ್ತಿಲ್ಲ.. ಹಸು ಕಂದಮ್ಮಗಳಿಂದ ಹಿಡಿದು ವೃದ್ಧರತನಕ ಎಲ್ರೂ ಕೊರೊನಾ ಮಹಾಮಾರಿಯ ಸುಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ. ಇದ್ರ ನಡ್ವೆ ಕ್ರೂರಿ ಕೊರೊನಾ ಮತ್ತೊಂದು ಶಾಕ್ ಕೊಟ್ಟಿದೆ.

ಧಾರವಾಡದ ಜನರಲ್ಲಿ ಹೆಚ್ಚಾಯ್ತು ಟೆನ್ಷನ್..! ಅಂದ್ಹಾಗೇ, ಧಾರವಾಡಕ್ಕೆ ತಬ್ಲೀಘಿಗಳು ಅಂಟಿಸಿರೋ ನಂಜು ಇದೀಗ ಗಲ್ಲಿ ಗಲ್ಲಿಗೂ ಕಾಲಿಟ್ಟಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 33 ಮಂದಿಗೆ ಮಾರಿ ವಕ್ಕರಿಸಿಕೊಂಡಿದೆ. ಈ ಪೈಕಿ ಮೂವರು ಮಕ್ಕಳೇ ಆಗಿದ್ದಾರೆ. 6 & 9 ವರ್ಷದ ಬಾಲಕಿಯರು ಹಾಗೂ 16 ವರ್ಷದ ಬಾಲಕನಿಗೆ ಸೋಂಕು ಬಂದಿದೆ. ಹೀಗಾಗಿ ಮೇ 17ರಂದು ಸೋಂಕಿತ ಮಕ್ಕಳ ಲೆಕ್ಕಾಚಾರ ಶುರುವಾಯ್ತು. ಮೊದ್ಲು 16 ವರ್ಷದ ಬಾಲಕನಿಗೆ ಸೋಂಕು ಹೇಗೆ ಬಂತು ಅನ್ನೋದನ್ನ ನೋಡೋದಾದ್ರೆ.

ಅಪ್ಪನಿಂದಲೇ ಮಗನಿಗೆ ಕುತ್ತು..! ಇನ್ನು ಬಾಲಕನ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈತ ಹುಬ್ಬಳ್ಳಿಯ ಕೇಶ್ವಾಪುರ ಬಡಾವಣೆಯ ನಿವಾಸಿಯಾಗಿದ್ದಾನೆ. 589ನೇ ರೋಗಿಯಾಗಿರೋ ಈತನಿಗೆ ಆತನ ಗೆಳೆಯನಿಂದ ಸೋಂಕು ಬಂದಿತ್ತು. ತದನಂತ್ರ 589ನೇ ಸೋಂಕಿತ ತನ್ನ 16 ವರ್ಷದ ಮಗನಿಗೂ ಸೋಂಕು ಹರಡಿದ್ದಾನೆ.

ಇನ್ನು ಮೇ 21ರಂದು ಬಂದ ವರದಿಯಲ್ಲಿ ಒಟ್ಟು ಐವರಿಗೆ ಸೋಂಕು ದೃಢಪಟ್ಟಿತ್ತು. ಈ ಪೈಕಿ 6 ವರ್ಷ ಹಾಗೂ 9 ವರ್ಷದ ಇಬ್ಬರು ಬಾಲಕಿಯರೇ ಇದ್ರು. 1505ನೇ ಸೋಂಕಿತೆಯಾಗಿರೋ ಬಾಲಕಿ ತನ್ನ ತಾಯಿಯೊಂದಿಗೆ ತೆಲಂಗಾಣಕ್ಕೆ ಹೋಗಿ ಬಂದಿದ್ಲು. ಅಲ್ಲಿಂದ ಬಂದ ಬಳಿಕ ತಾಯಿ-ಮಗಳು ಇಬ್ಬರಿಗೂ ಕೊರೊನಾ ಕಾಣಿಸಿಕೊಂಡಿದೆ.

ಇತ್ತ 1507ನೇ ಸೋಂಕಿತೆಯಾಗಿರೋ 9 ವರ್ಷದ ಬಾಲಕಿಯ ಪೋಷಕರು ಮುಂಬೈನ ಶಿವಾಜಿನಗರದ ನಿವಾಸಿಗಳಾಗಿದ್ದಾರೆ. ಮೇ 18ರಂದು ಧಾರವಾಡಕ್ಕೆ ಬಂದಿದ್ದಾರೆ. ಅಂದು ಕೊರೊನಾ ಟೆಸ್ಟ್ ಮಾಡಿದಾಗ ಒಂದೇ ಕುಟುಂಬದ ಮೂವರಿಗೆ ಸೋಂಕು ಬಂದಿದೆ.

ಅಚ್ಚರಿಯೆಂದ್ರೆ ಇವ್ರ ಜೊತೆ ಬಂದವರಿಗೆ ಮಾತ್ರ ಸೋಂಕು ಬಂದಿಲ್ಲ, ಆದ್ರೆ ಬಾಲಕಿಗೆ ಬಂದಿರೋದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಒಟ್ನಲ್ಲಿ ಕೊರೊನಾ ಮಕ್ಕಳಿಗೆ ವಕ್ಕರಿಸಿಕೊಂಡು ಹಿಂಸೆ ಕೊಡ್ತಿರೋದು ಪೋಷಕರನ್ನ ಚಿಂತೆಗೀಡು ಮಾಡಿದೆ. ಜೊತೆಗೆ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರೋದು ಕೂತ ಆತಂಕವನ್ನುಂಟು ಮಾಡಿದೆ.