ಬೆಂಗಳೂರು ಬೈಕ್​ ಸವಾರರೇ ಎಚ್ಚರ; ದಂಡ ವಸೂಲಿಗಾಗಿ ಪೊಲೀಸರಿಗೆ ಸಿಕ್ಕಿದೆ ಹೊಸ ಅಸ್ತ್ರ

New Traffic Rules: ನಿಯಮಗಳು ಹೀಗಿವೆ ಎಂಬುದು ಗೊತ್ತಿಲ್ಲದೆ ಕೆಲವೊಮ್ಮೆ ಟ್ರಾಫಿಕ್​ ಪೊಲೀಸರ ಎದುರು ಬೈಕ್​ ಸವಾರರು ವಾದಕ್ಕೆ ಇಳಿಯುತ್ತಾರೆ. ನಿಯಮ ತಿಳಿದ ನಂತರದಲ್ಲಿ ಸುಮ್ಮನಾಗುತ್ತಾರೆ. ಹೀಗಾಗಿ, ಈಗ ಬದಲಾವಣೆ ತಂದ ನಿಯಮವನ್ನೂ ನೀವು ಗಮನಿಸಲೇಬೇಕು.

ಬೆಂಗಳೂರು ಬೈಕ್​ ಸವಾರರೇ ಎಚ್ಚರ; ದಂಡ ವಸೂಲಿಗಾಗಿ ಪೊಲೀಸರಿಗೆ ಸಿಕ್ಕಿದೆ ಹೊಸ ಅಸ್ತ್ರ
ಸಾಂದರ್ಭಿಕ ಚಿತ್ರ
Edited By:

Updated on: Apr 11, 2021 | 8:04 PM

ಬೆಂಗಳೂರು: ಬೈಕ್​ನಲ್ಲಿ ಸಂಚರಿಸುವಾಗ ಹೆಲ್ಮೆಟ್​ ಧರಿಸದಿದ್ದರೆ, ಇನ್ಸುರೆನ್ಸ್​, ಬೈಕ್​ ಆರ್​ಸಿ ಕಾರ್ಡ್​, ಡ್ರೈವಿಂಗ್​ ಲೈಸೆನ್ಸ್​ ಇಲ್ಲದಿದ್ದರೆ ದಂಡ ಹಾಕಲಾಗುತ್ತದೆ. ಏನೂ ಸಿಕ್ಕಿಲ್ಲ ಎಂದರೆ ಪೊಲೀಸರು ಯಾವುದಾದರೂ ಚಿಕ್ಕ ವಿಚಾರಗಳನ್ನು ಇಟ್ಟುಕೊಂಡು ದಂಡ ವಸೂಲಿ ಮಾಡುತ್ತಾರೆ ಎಂಬುದು ಜನಸಾಮಾನ್ಯರ ಆರೋಪ. ಆದರೆ, ಕೆಲ ವಿಚಾರಗಳು ಟ್ರಾಫಿಕ್​ ರೂಲ್ಸ್​ನಲ್ಲೇ ಇರುತ್ತದೆ.  ಈಗ ತರಲಾದ ಹೊಸ ನಿಯಮದಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಆ ತಪ್ಪುಗಳನ್ನು ಮಾಡಿದರೆ ದೊಡ್ಡ ಮೊತ್ತದ ದಂಡ ತೆತ್ತಬೇಕಾಗುತ್ತದೆ.

ನಿಯಮಗಳು ಹೀಗಿವೆ ಎಂಬುದು ಗೊತ್ತಿಲ್ಲದೆ ಕೆಲವೊಮ್ಮೆ ಟ್ರಾಫಿಕ್​ ಪೊಲೀಸರ ಎದುರು ಬೈಕ್​ ಸವಾರರು ವಾದಕ್ಕೆ ಇಳಿಯುತ್ತಾರೆ. ನಿಯಮ ತಿಳಿದ ನಂತರದಲ್ಲಿ ಸುಮ್ಮನಾಗುತ್ತಾರೆ. ಹೀಗಾಗಿ, ಈಗ ಬದಲಾವಣೆ ತಂದ ನಿಯಮವನ್ನೂ ನೀವು ಗಮನಿಸಲೇಬೇಕು.

ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ ಹೊಸ ಟ್ರಾಫಿಕ್​ ನಿಯಮ ಜಾರಿಗೆ ತಂದಿದೆ. ಇದರ ಪ್ರಕಾರ ನಿಮ್ಮ ಬೈಕ್​ ರಸ್ತೆಗೆ ಇಳಿಸುವ ಮೊದಲು ಸೈಡ್ ಮಿರರ್ ಹಾಗೂ ಇಂಡಿಕೇಟರ್ ಇರಲೇಬೇಕು. ಬೈಕ್​ನಲ್ಲಿ ಸಂಚಾರ ಮಾಡುವಾಗ ಸೈಡ್​ ಮಿರರ್​ ಇದ್ದರೆ ಹಿಂಬದಿಯಿಂದ ಬರುವ ವಾಹನವನ್ನು ಗಮನಿಸಬಹುದು. ಈ ಮೂಲಕ ಆಗಬಹುದಾದ ಅಪಘಾತವನ್ನು ತಪ್ಪಿಸಬಹುದು. ಎಡಕ್ಕೆ ಅಥವಾ ಬಲಕ್ಕೆ ತಿರುಗುವಾಗ ಇಂಡಿಕೇಟರ್​ ಹಾಕಿದರೆ ಹಿಂಬದಿಯಿಂದ ಬರುತ್ತಿರುವವರಿಗೆ ನಾವು ಎತ್ತ ತಿರುಗುತ್ತೇವೆ ಎನ್ನುವ ಸೂಚನೆ ಸಿಗುತ್ತದೆ. ಇದು ಕೂಡ ಅಪಘಾತ ತಡೆಯಲು ಸಹಕಾರಿ.

ಹೊಸ ಸುತ್ತೋಲೆಯ ಪ್ರಕಾರ ಸೈಡ್ ಮಿರರ್ ಅಳವಡಿಸದೆ ಮತ್ತು ಇಂಡಿಕೇಟರ್​ ಇಲ್ಲದೆ ನಗರದಲ್ಲಿ ವಾಹನಗಳನ್ನು ಓಡಿಸಿದರೆ ಅದು ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಎರಡನ್ನೂ ಪ್ರತ್ಯೇಕ ತಪ್ಪು ಎಂದು ಪರಿಗಣಿಸಲಾಗುವುದು ಮತ್ತು ಪ್ರತಿ ಉಲ್ಲಂಘನೆಗೆ ರೂ 500 ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

(New Traffic Rules in Bangalore 2021 rule traffic rules change in Bengaluru)

ಇದನ್ನೂ ಓದಿ: ಮುಂಬೈನಲ್ಲಿ ಕೊವಿಡ್ ನಿರ್ಬಂಧ: ರೈಲು ಸಂಚಾರ ಸ್ಥಗಿತಗೊಳ್ಳುವ ಭಯದಿಂದ ಊರಿನತ್ತ ಹೆಜ್ಜೆ ಹಾಕಿದ ವಲಸೆ ಕಾರ್ಮಿಕರು

ಇದನ್ನೂ ಓದಿ: ಟ್ರಾಫಿಕ್​ನಿಂದ ಬೇಸತ್ತ ರಾಹುಲ್​ ದ್ರಾವಿಡ್​; ಬ್ಯಾಟ್​ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್​

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us