Night Curfew: ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ! ಯಾವುದಕ್ಕೆಲ್ಲ ನಿರ್ಬಂಧ?

Night Curfew: ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ! ಯಾವುದಕ್ಕೆಲ್ಲ ನಿರ್ಬಂಧ?
ಡಾ. ಕೆ. ಸುಧಾಕರ್ (ಸಂಗ್ರಹ ಚಿತ್ರ)

ನ್ಯೂ ಇಯರ್ ಪಾರ್ಟಿ ಮಾಡಲು ತಯಾರಿ ನಡೆಸಿಕೊಂಡವರಿಗೆ ಶಾಕ್ ಎದುರಾಗಿದೆ. ಸಿಎಂ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಾರ್ವಜನಿಕ ಸ್ಥಳದಲ್ಲಿ ಹೊಸವರ್ಷ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಅಂತ ತಿಳಿಸಿದ್ದಾರೆ.

TV9kannada Web Team

| Edited By: sandhya thejappa

Dec 26, 2021 | 11:37 AM

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ (Omicron) ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಇಂದು (ಡಿಸೆಂಬರ್ 26) ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಡಿಸೆಂಬರ್ 28ರಿಂದ ಸುಮಾರು 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಹೊಸ ವರ್ಷಾಚರಣೆಗೂ ಬ್ರೇಕ್ ಬಿದ್ದಿದೆ.

ಈ ಬಾರಿ ನ್ಯೂ ಇಯರ್ ಪಾರ್ಟಿ ಮಾಡಲು ತಯಾರಿ ನಡೆಸಿಕೊಂಡವರಿಗೆ ಶಾಕ್ ಎದುರಾಗಿದೆ. ಸಿಎಂ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಾರ್ವಜನಿಕ ಸ್ಥಳದಲ್ಲಿ ಹೊಸವರ್ಷ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಅಂತ ತಿಳಿಸಿದ್ದಾರೆ.

ಇನ್ನು ಹೋಟೆಲ್​ಗಳಲ್ಲಿ ಶೇಕಡಾ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೋಟೆಲ್, ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್​ಗಳಲ್ಲಿ 50:50 ನಿಮಯ ಜಾರಿಗೊಳಿಸಲಾಗಿದೆ. ಈ ನಿಯಮ ಹಗಲಿನಲ್ಲೂ ಅನ್ವಯವಾಗುತ್ತದೆ. 50:50 ರೂಲ್ಸ್ ಹೋಟೆಲ್, ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್ ಹೊರತುಪಡಿಸಿ ಬೇರೆ ಕ್ಷೇತ್ರಗಳಿಗೆ ಅನ್ವಯವಾಗಲ್ಲ ಅಂತ ಸುಧಾಕರ್ ಹೇಳಿದ್ದಾರೆ. ಆದರೆ ನೈಟ್ ಕರ್ಫ್ಯೂ ಜಾರಿಯಾದ ಬಳಿಕ ಎಲ್ಲ ಕೆಲಸ ಕಾರ್ಯಗಳು ಬಂದ್ ಆಗಲಿವೆ. ಇನ್ನು ಸಭೆ, ಮದುವೆ ಸಮಾರಂಭಗಳಿಗೆ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. 50:50 ನಿಯಮ ಡಿಸೆಂಬರ್ 30ರಿಂದ ಜನವರಿ 2ರವರೆಗೆ ಮಾತ್ರ ಜಾರಿ ಇರುತ್ತದೆ.

ನೈಟ್ ಕರ್ಫ್ಯೂ ವೇಳೆ ತುರ್ತು ಸೇವೆಗಳಲ್ಲಿ ಯಾವುದೇ ವ್ಯತ್ಯಯವಿಲ್ಲ. ರಾತ್ರಿ ಪಾಳಿಯ ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯವಾಗಿದೆ. ಸರಕು-ಸಾಗಣೆ ವಾಹನಗಳಿಗೆ ಯಾವುದೇ ರೀತಿಯ ಅಡ್ಡಿಯಿಲ್ಲ. ಹೋಮ್ ಡೆಲಿವರಿ, ಆನ್​ಲೈನ್ ಡೆಲಿವರಿಗೆ ನಿರ್ಬಂಧವಿಲ್ಲ. ರೈಲು, ಬಸ್, ವಿಮಾನ ಸಂಚಾರದಲ್ಲಿಯೂ ವ್ಯತ್ಯಯವಿರಲ್ಲ. ಪ್ರಯಾಣಿಕರು ಟಿಕೆಟ್ ತೋರಿಸಿ ಓಡಾಡುವುದಕ್ಕೆ ಅನುಮತಿ ಇದೆ.

ಇದನ್ನೂ ಓದಿ

Night Curfew In Karnataka: ಕರ್ನಾಟಕದಲ್ಲಿ ಡಿ.28ರಿಂದ 10 ದಿನ ನೈಟ್ ಕರ್ಫ್ಯೂ ಜಾರಿ! ಸಭೆ ಸಮಾರಂಭಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ

ಕಾಂಗೋ ಗಣರಾಜ್ಯದ ಬೇನಿ ನಗರದ ಬಾರ್​​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ; ಐವರು ಸಾವು, ಹಲವರಿಗೆ ಗಂಭೀರ ಗಾಯ

Follow us on

Related Stories

Most Read Stories

Click on your DTH Provider to Add TV9 Kannada