ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ: ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ ಸರ್ಕಾರ
ಯೋಜನೆ ಅನುಷ್ಠಾನ ಸಂಬಂಧ ಸರ್ಕಾರ ಟೆಂಡರ್ ಕರೆದಿತ್ತು. ಟೆಂಡರ್ ಪ್ರಕ್ರಿಯೆ ಮಾಹಿತಿಯು ಸೋರಿಕೆ ಆಗಿತ್ತು. ಈಗ ಇದರ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ.
ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಈ ಬಗ್ಗೆ ಟಿವಿ9 ಈ ಬಗ್ಗೆ ನಿರಂತರ ವರದಿ ಕೂಡ ಮಾಡಿತ್ತು. ಈ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯಪಾಲರ ಆದೇಶಾನುಸರ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಗೆ ಸೂಚಿಸಿದೆ. .
ಯೋಜನೆ ಅನುಷ್ಠಾನ ಸಂಬಂಧ ಸರ್ಕಾರ ಟೆಂಡರ್ ಕರೆದಿತ್ತು. ಟೆಂಡರ್ ಪ್ರಕ್ರಿಯೆ ಮಾಹಿತಿಯು ಸೋರಿಕೆ ಆಗಿತ್ತು. ಈಗ ಇದರ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ. ಉನ್ನತ ಮಟ್ಟದ ಈ ತನಿಖಾ ಸಮಿತಿಗೆ ತನಿಖಾಧಿಕಾರಿಯಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಏನಿದು ಪ್ರಕರಣ?
ಬೆಂಗಳೂರು ಸುರಕ್ಷಿತ ನಗರ ಕಾರ್ಯಕ್ರಮದ ಅಡಿ ಸಿಸಿಟಿವಿ ಅಳವಡಿಸಲು ಗುತ್ತಿಗೆ ಕರೆಯಲಾಗಿತ್ತು. ಇದರಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಲಾರ್ಸೆನ್ ಆಂಡ್ ಟೂಬ್ರೋ, ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್ ಕಂಪೆನಿಗಳು ಟೆಂಡರ್ನಲ್ಲಿ ಭಾಗವಹಿಸಿದ್ದವು. ಬಿಇಎಲ್ ಕೊಟ್ಟ ದೂರಿನನ್ವಯ ಮ್ಯಾಟ್ರಿಕ್ಸ್ ಸೆಕ್ಯುರಿಟಿ & ಸರ್ವೇಲೆನ್ಸ್ ಲಿಮಿಟೆಡ್ ಮತ್ತು ಎನ್ಸಿಸಿ ಲಿಮಿಟೆಡ್ ಕಂಪೆನಿಯಲ್ಲಿ ನಿರ್ದೇಶಕರು ಒಬ್ಬರೇ ವ್ಯಕ್ತಿಯಾಗಿದ್ದರಿಂದ, conflict of interest ಇರುವುದು ಕಂಡಿದೆ. ಈ ಎರಡೂ ಕಂಪೆನಿಗಳು ಒಳಒಪ್ಪಂದ ಮಾಡಿಕೊಂಡಿರುವುದು ಕಾಣುತ್ತಿದೆ. ಹಾಗಾಗಿ ಅವರ ಗುತ್ತಿಗೆ ಕರಡು ನಿಯಮಕ್ಕೆ (Contract Document) ವಿರುದ್ಧವಾಗಿದೆ.
ಮ್ಯಾಟ್ರಿಕ್ಸ್ ಕಂಪೆನಿ ಚೀನಾದ ವಸ್ತು ಬಳಕೆ ಮಾಡುವ ಕುರಿತು ಹೇಳಿದ್ದು ಇದು ನಮ್ಮ ಭದ್ರತೆಗೆ ಹೊಡೆತ ಕೊಡಬಹುದು. ಆದ್ದರಿಂದ ಈ ಎರಡೂ ಕಂಪೆನಿಯನ್ನು ಗುತ್ತಿಗೆ ಪ್ರಕ್ರಿಯೆಯಿಂದ ಹೊರಗಿಡಬೇಕೆಂದು ಬಿಇಎಲ್, ತನ್ನ ಪತ್ರದಲ್ಲಿ ಕೇಳಿಕೊಂಡಿತ್ತು. ಇದೇ ಪತ್ರದ ಆಧಾರದ ಮೇಲೆ ಭ್ರಷ್ಟಾಚಾರ ವಿರೋಧಿ ಸಂಘದ ಶರದ್ ಆಜಾದ್ ಕೂಡ ಕಳೆದ ಮಾರ್ಚ್ 13 ರಂದು ಪತ್ರ ಬರೆದಿದ್ದರು.
ಈ ಆಧಾರವಿಟ್ಟುಕೊಂಡು ಪ್ರಧಾನಿ ಕಾರ್ಯಾಲಯವು ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಕೇಳಿತ್ತು. ತಪ್ಪಾಗಿ ಗುತ್ತಿಗೆ ಕರಡನ್ನು ತಯಾರಿಸಿದ್ದ ಖಾಸಗಿ ಸಂಸ್ಥೆ ಅರ್ನಸ್ಟ್ ಅಂಡ್ ಯಂಗ್ ಕಂಪೆನಿಯ ಮುಖ್ಯಸ್ಥರನ್ನು ಮುಖ್ಯ ಕಾರ್ಯದರ್ಶಿ ನಿರ್ದೇಶನದಂತೆ ಗೃಹ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ, ಸರಕಾರದ ನಿರ್ದೇಶನದಂತೆ ಈ ಗುತ್ತಿಗೆ ಪ್ರಕ್ರಿಯೆಯನ್ನು ವಜಾ ಮಾಡಲಾಗಿತ್ತು.
ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆ: ಗೃಹ ಕಾರ್ಯದರ್ಶಿ ರೂಪಾ ಅವರಿಂದ ದಾಖಲೆ ಬಿಡುಗಡೆ, ವಿವಾದಕ್ಕೆ ಹೊಸ ಆಯಾಮ
Published On - 9:59 pm, Fri, 25 December 20