AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಕ್ಷೇತ್ರಕ್ಕಿಲ್ಲ ಅನುದಾನ, ದ್ವೇಷ ರಾಜಕಾರಣಕ್ಕೆ ಮುಂದಾಯ್ತಾ BSY ಸರ್ಕಾರ?

ಬಾಗಲಕೋಟೆ: ದ್ವೇಷ ರಾಜಕಾರಣಕ್ಕೆ ಮುಂದಾಯ್ತಾ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ? ಜಿಲ್ಲೆಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಇದಕ್ಕೆ ಕಾರಣವಾಗಿದೆ. ನೆರೆಯಿಂದ ಹಾನಿಯಾದ ರಸ್ತೆ ದುರಸ್ತಿಗೆ ಅನುದಾನ ಸಂಬಂಧಿಸಿದಂತೆ ಬಿಜೆಪಿ ಶಾಸಕರಿರುವ ಬಾಗಲಕೋಟೆ, ತೇರದಾಳ, ಬೀಳಗಿ, ಹುನಗುಂದ ಮತ್ತು ಮುಧೋಳ ಕ್ಷೇತ್ರಗಳ ರಸ್ತೆ ದುರಸ್ತಿಗೆ ತಲಾ 4 ಕೋಟಿ ರೂ. ಸರ್ಕಾರ ಅನುದಾನ ನೀಡಿದೆ. ಆದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಹಾಗೂ ಆನಂದ ನ್ಯಾಮಗೌಡ ಕ್ಷೇತ್ರ ಜಮಖಂಡಿಗೆ ಬಿಡಿಗಾಸು ಅನುದಾನ ನೀಡದೆ ಕಡೆಗಣಿಸಲಾಗಿದೆ. ಹಿಂದೆಯೂ […]

ಸಿದ್ದರಾಮಯ್ಯ ಕ್ಷೇತ್ರಕ್ಕಿಲ್ಲ ಅನುದಾನ, ದ್ವೇಷ ರಾಜಕಾರಣಕ್ಕೆ ಮುಂದಾಯ್ತಾ BSY ಸರ್ಕಾರ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 15, 2019 | 8:59 AM

Share

ಬಾಗಲಕೋಟೆ: ದ್ವೇಷ ರಾಜಕಾರಣಕ್ಕೆ ಮುಂದಾಯ್ತಾ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ? ಜಿಲ್ಲೆಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಇದಕ್ಕೆ ಕಾರಣವಾಗಿದೆ.

ನೆರೆಯಿಂದ ಹಾನಿಯಾದ ರಸ್ತೆ ದುರಸ್ತಿಗೆ ಅನುದಾನ ಸಂಬಂಧಿಸಿದಂತೆ ಬಿಜೆಪಿ ಶಾಸಕರಿರುವ ಬಾಗಲಕೋಟೆ, ತೇರದಾಳ, ಬೀಳಗಿ, ಹುನಗುಂದ ಮತ್ತು ಮುಧೋಳ ಕ್ಷೇತ್ರಗಳ ರಸ್ತೆ ದುರಸ್ತಿಗೆ ತಲಾ 4 ಕೋಟಿ ರೂ. ಸರ್ಕಾರ ಅನುದಾನ ನೀಡಿದೆ. ಆದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಹಾಗೂ ಆನಂದ ನ್ಯಾಮಗೌಡ ಕ್ಷೇತ್ರ ಜಮಖಂಡಿಗೆ ಬಿಡಿಗಾಸು ಅನುದಾನ ನೀಡದೆ ಕಡೆಗಣಿಸಲಾಗಿದೆ.

ಹಿಂದೆಯೂ ಅನುದಾನ ಕಡಿತ ಮಾಡಲಾಗಿತ್ತು: ಈ ಎರಡೂ ಕ್ಷೇತ್ರದ ರಸ್ತೆ ದುರಸ್ತಿಗೆ ಅನುದಾನ ನೀಡದಿದ್ದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿಂದೆಯೂ ಬಾದಾಮಿ ಕ್ಷೇತ್ರದ 35 ಕೋಟಿ ರೂ. ಹಾಗೂ ಜಮಖಂಡಿ ಕ್ಷೇತ್ರದ 47 ಕೋಟಿ ರೂ. ಅನುದಾನವನ್ನು ಕಡಿತ ಮಾಡಲಾಗಿತ್ತು. ಹೀಗಾಗಿ ಬಿಎಸ್​ವೈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು