ಬೆಂಗಳೂರು ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚಾಯ್ತು ಉತ್ತರ ಭಾರತದ ರೋಗಿಗಳ ಹೊರೆ..!

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2024 | 8:24 PM

ಸಿಲಿಕಾನ್ ಸಿಟಿ ಬೆಂಗಳೂರಿಗೆ ಈಗಾಗಲೇ ಐಟಿ ಬಿಟಿಯಿಂದ ಹೊರ ರಾಜ್ಯದವರ ಒತ್ತಡ ಹೆಚ್ಚಾಗಿದೆ.. ನೆರೆರಾಜ್ಯಗಳಿಂದ ಹಿಡದು ದೇಶದ ಎಲ್ಲ ರಾಜ್ಯದವರು ಉದ್ಯೋಗಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ. ಆದ್ರೆ, ಈಗ ಇತ್ತಿಚ್ಚಿನ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಮೇಲೂ ಉತ್ತರ ಭಾರತ ರೋಗಿಗಳ ಒತ್ತಡ ಹೆಚ್ಚಾಗಿದೆ.. ಚಿಕಿತ್ಸೆಗಾಗಿ ಬೇರೆ ರಾಜ್ಯಗಳಿಂದ ಬರುವ ರೋಗಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಿಂದಾಗಿ ಆಸ್ಪತ್ರೆಗಳು ಹಾಗೂ ವೈದ್ಯರ ಮೇಲೆ ಒತ್ತಡ ಹೆಚ್ಚಿಸಿದೆ,

ಬೆಂಗಳೂರು ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚಾಯ್ತು ಉತ್ತರ ಭಾರತದ ರೋಗಿಗಳ ಹೊರೆ..!
ಆಸ್ಪತ್ರೆಗಳು
Follow us on

ಬೆಂಗಳೂರು, (ಅಕ್ಟೋಬರ್ 08):  ಕರ್ನಾಟಕದಲ್ಲಿ ಸರ್ಕಾರದ ಮತ್ತು ಸರ್ಕಾರದ ಅಧೀನದ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಕ್ಯಾನ್ಸರ್, ಹೃದಯರೋಗ ಸೇರಿದಂತೆ ಕೆಲ ದೊಡ್ಡ ದೊಡ್ಡ ರೋಗಳಿಗೆ ಈ ಸರ್ಕಾರಿ ಆಸ್ಪತ್ರೆಗಲ್ಲೇ ಉತ್ತಮ ವೈದ್ಯಕೀಯ ಸೌಲಭ್ಯಗಳು ಇವೆ. ಹೀಗಾಗಿ ಬೇರೆ  ಬೇರೆ ರಾಜ್ಯಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಬರುತ್ತಿರುವ ಸಂಖ್ಯೆ ಹೆಚ್ಚಾಗಿದೆ.  ಹೌದು… ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳಗಿಂತ ಒಳ್ಳೆಯ ಆರೋಗ್ಯ ಸೇವೆ ಕರ್ನಾಟಕದಲ್ಲಿ ಇದೆ ದೊರೆಯುತ್ತಿದೆ. ಆರೋಗ್ಯ ಎಲ್ಲಾ ಸೌಲಭ್ಯಗಳು ಉತ್ತಮವಾಗಿದೆ. ಆದ್ರೆ ಇದೇ ಇದೀಗ ಸಂಕಷ್ಟಕ್ಕೆ ಕಾರಣವಾಗಿದೆ. ಸಿಲಿಕಾನ್ ಸಿಟಿ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳ ಮೇಲೆ ಉತ್ತರ ಭಾರತ ರೋಗಿಗಳ ಒತ್ತಡ ಹೆಚ್ಚಾಗಿದೆ.

ಕಳೆದ ಕೆಲವು ವರ್ಷಗಳಿಂದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ರಾಜೀವ್​ ಗಾಂಧಿ ಆಸ್ಪತ್ರೆಗೆ ನಿತ್ಯವೂ ಹೊರ ರಾಜ್ಯಗಳಿಂದ ಸಾವಿರಾರೂ ರೋಗಿಗಳು ಈ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ಒರಿಸ್ಸಾ, ಹರಿಯಾಣ ಸೇರಿದಂತೆ ತಮಿಳನಾಡು, ಕೇರಳ ಆಂಧ್ರ ಪ್ರದೇಶದಿಂದ ರೋಗಿಗಳ ಸಂಖ್ಯೆಯಲ್ಲಿ ಶೇ 35 % ರಿಂದ 40% ಏರಿಕೆಯಾಗಿದೆ.

ಇದನ್ನೂ ಓದಿ: ಕರ್ನಾಟಕದ ಈ ಮಠವೊಂದಕ್ಕೆ 3 ಸಾವಿರ ಎಕರೆ ಆಸ್ತಿ ದಾನ ಮಾಡಿದ ಉದ್ಯಮಿ

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 500 ಬೆಡ್ ಗಳಲ್ಲಿ ಶೇ 30% ರಿಂದ 35% ಬೆಡ್ ಗಳಲ್ಲಿ ಹೊರ ರಾಜ್ಯದಿಂದ ಬಂದವರಿಂದಲೇ ತುಂಬಿರುತ್ತವೆ. ಇದರಿಂದ ಕರ್ನಾಟಕದ ಬೇರೆ ಜಿಲ್ಲೆಗಳಿಂದ ರೆಫರಲ್ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ರಾಜ್ಯದ ಜನರಿಗೆ ಯಾವುದೇ ಸ್ಪೆಷಲ್ ಕ್ಲಾಸ್ ಮೀಸಲಾತಿ ಇಲ್ಲದೆ ಇರುವುದರಿಂದ ಸಮಸ್ಯೆಯಾಗುತ್ತಿದೆ.. ಆಸ್ಪತ್ರೆಗಳಲ್ಲಿ ಬೆಡ್ ಫುಲ್ ಆಗಿದ್ರೆ ಅನಿವಾರ್ಯವಾಗಿ ರಾಜ್ಯದ ಜನರು ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಆಸ್ಪತ್ರೆಗಳ ವೈದ್ಯರ ಮೇಲೂ ಒತ್ತಡ

ಇನ್ನು ಹೊರ ರಾಜ್ಯದ ರೋಗಿಗಳ ಸಂಖ್ಯೆ ಏರಿಕೆಯಿಂದ ಆಸ್ಪತ್ರೆಗಳ ವೈದ್ಯರ ಮೇಲೂ ಒತ್ತಡ ಹೆಚ್ಚಾಗಿದೆ. ರಾಜ್ಯ ಸರ್ಕಾರದ ಯಾವುದೇ ಸ್ಕಿಂ ಹೊರ ರಾಜ್ಯದವರಿಗೆ ಅಪ್ಲೈ ಆಗುವುದಿಲ್ಲ. ಆದ್ರೆ ಕೆಲವು ಸರಿ ಅನಿವಾರ್ಯವಾಗಿ ರೋಗಿಗಳ ಬಳಿ ದುಡ್ಡಿಲ್ಲದ ಸಮಯದಲ್ಲಿ ಉಚಿತೆ ಚಿಕಿತ್ಸೆ ನೀಡಬೇಕಾದ ಸ್ಥಿತಿ ಎದುರಾಗಿದೆ. ಇದರಿಂದ ಆಸ್ಪತ್ರೆಗಳ ಮೇಲೆ ಒತ್ತಡವು ಹೆಚ್ಚಾಗುತ್ತಿದೆ.

ಒಟ್ಟಿನಲ್ಲಿ ಕರ್ನಾಟಕದಲ್ಲಿ ಉತ್ತಮ ಚಿಕಿತ್ಸೆ ಹಾಗೂ ವ್ಯವಸ್ಥೆ ಇದೆ ಎಂದು ಹೊರ ರಾಜ್ಯಗಳಿಂದ ನಮ್ಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಏರಿಕೆಯಾಗಿದ್ದು, ಇದರಿಂದ ರಾಜ್ಯದ ಜನರಿಗೆ ಕೊಂಚ ಸಮಸ್ಯೆಯಾಗುತ್ತಿದೆ. ಕೆಲವು ನಿಗಧಿತ ಆಸ್ಪತ್ರೆಗಳು ಅಂದ್ರೆ ಮಕ್ಕಳಿಗೆ ಎಂದು ಮೀಸಲು ಇರುವ ಇಂದಿರಾಗಾಂಧಿ, ಕ್ಯಾನ್ಸರ್​ ಚಿಕಿತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಗಳಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಿದ್ದಾರೆ. ಇದರಿಂದ ಕೆಲವು ಸರಿ ಬೆಡ್ ಗಳು ಫುಲ್ ಆಗಿದ್ರೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಬೇಕಾಗಿದೆ. ಜೊತೆಗೆ ಇದು ವೈದ್ಯರಿಗೂ ಒತ್ತಡಕ್ಕೆ ಕಾರಣವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Tue, 8 October 24