ಬಿಜೆಪಿಯಲ್ಲಿ ಬಣಗಳು ಸೃಷ್ಟಿಯಾಗಿರುವುದು ಸತ್ಯ, ಆದರೆ ಯತ್ನಾಳ್ ಪಕ್ಷಕ್ಕೆ ಬೇಕೇಬೇಕು: ಅರವಿಂದ್ ಬೆಲ್ಲದ್

ಬಿಜೆಪಿಯಲ್ಲಿ ಬಣಗಳು ಸೃಷ್ಟಿಯಾಗಿರುವುದು ಸತ್ಯ, ಆದರೆ ಯತ್ನಾಳ್ ಪಕ್ಷಕ್ಕೆ ಬೇಕೇಬೇಕು: ಅರವಿಂದ್ ಬೆಲ್ಲದ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 28, 2024 | 2:32 PM

ಬಸನಗೌಡ ಯತ್ನಾಳ್ ತಂಡದ ಸದಸ್ಯರು ಪಕ್ಷಕ್ಕೆ ಬೇಕು ಬೇಡ ಅಂತ ಪತ್ರ ಚಳುವಳಿ ನಡೆಯುತ್ತಿದೆ, ಇದು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಅರವಿಂದ್ ಬೆಲ್ಲದ್ ಹೇಳಿದರು. ಅದರೆ ಪಕ್ಷದ ಹಿರಿಯ ನಾಯಕರಿಂದ ಬರುತ್ತಿರುವ ಹೇಳಿಕೆಗಳು ಯತ್ನಾಳ್ ತಂಡದ ವಿರುದ್ಧ ಯಾವುದೇ ಪ್ರಭಾವ ಬೀರುತ್ತಿಲ್ಲ, ಹೈಕಮಾಂಡ್​ಗೆ ದೂರು ಸಲ್ಲಿಸುವವರು ಸಲ್ಲಿಸಲಿ ಎಂದು ಯತ್ನಾಳ್ ಪದೇಪದೆ ಹೇಳುತ್ತಿದ್ದಾರೆ.

ಹುಬ್ಬಳ್ಳಿ: ಪಕ್ಷದಲ್ಲಿ ಗುಂಪುಗಾರಿಕೆ ಶುರುವಾಗಿದೆ ಎಂಬ ಸಂಗತಿಯನ್ನು ಅಂಗೀಕರಿಸುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಪಕ್ಷಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವಶ್ಯಕತೆ ಶತ ಪ್ರತಿದಷ್ಟಿದೆ ಎನ್ನುತ್ತಾರೆ. ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಪಕ್ಷದಲ್ಲಿ ಬಣಗಳು ಸೃಷ್ಟಿಯಾಗಿರುವುದು ನಿಜ, ಅದನ್ನು ಸರಿಮಾಡಿಕೊಳ್ಳಲಾಗುತ್ತದೆ, ವರಿಷ್ಠರು ಬೇರೆ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಗ್ನರಾಗಿರುವುದರಿಂದ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕಡೆ ಗಮನ ಹರಿಸಲಾಗುತ್ತಿಲ್ಲ, ಇನ್ನೂ ಎರಡು ತಿಂಗಳುಗಳ ಕಾಲ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಬೆಲ್ಲದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾರ್ಯಕರ್ತರಿಗೆ ಹೊಸ ಸಂದೇಶ: ವಿಜಯೇಂದ್ರಗೆ ಮತ್ತೊಂದು ಶಾಕ್ ಕೊಟ್ಟ ಯತ್ನಾಳ್​