ಪಾದರಾಯನಪುರದ ಈ 5 ಮಂದಿ ಬರೀ ಸೋಂಕಿತರಲ್ಲ.. ಕೊರೊನಾ ಬಾಂಬರ್​ಗಳು..!

ಪಾದರಾಯನಪುರದ ಈ 5 ಮಂದಿ ಬರೀ ಸೋಂಕಿತರಲ್ಲ.. ಕೊರೊನಾ ಬಾಂಬರ್​ಗಳು..!

ಬೆಂಗಳೂರು: ಪಾದರಾಯನಪುರದಲ್ಲಿ 5 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ, ಆದ್ರೆ ಇವರು ಬರೀ ಸೋಂಕಿತರಲ್ಲ, ರಾಜ್ಯಕ್ಕೆ ಕೊರೊನಾ ಬಾಂಬ್​ಗಳಿದ್ದಂತೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ.

ಇವರು ಯಾರ ಸಂಪರ್ಕಕ್ಕೆ ಬಂದಿದ್ದರೆಂಬುದೇ ಯಾರಿಗೂ ಗೊತ್ತಿಲ್ಲ. ಗಲಾಟೆಯಲ್ಲಿ ಭಾಗಿಯಾಗಿದ್ದವರು 200ಕ್ಕೂ ಹೆಚ್ಚು ಜನರಿದ್ದಾರೆ. ಇವರಲ್ಲಿ ಯಾರಿಗಾದರೂ ಕೊರೊನಾ ಇತ್ತಾ? ಕ್ವಾರಂಟೈನ್​ನಲ್ಲಿ ಇರಬೇಕಿದ್ದ 58 ಜನರೂ ಗಲಾಟೆಯಲ್ಲಿ ಭಾಗಿಯಾಗಿದ್ದರು.

ಅವರಿಂದ ಇವರಿಗೆ ಸೋಂಕು ಹರಡಿದೆಯಾ? ಸೋಂಕಿತರು ದ್ವಿತೀಯ ಸಂಪರ್ಕಕ್ಕೆ ಬಂದವರಾ? ಅಥವಾ ಬೇರೆಯವರಿಂದ ಕೊರೊನಾ ಸೋಂಕು ಹರಡಿತಾ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಾಗ ನಿಜಕ್ಕೂ ಇವರು ರಾಜ್ಯಕ್ಕೆ ಕೊರೊನಾ ಬಾಂಬ್​ ಆಗಲಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. https://www.facebook.com/Tv9Kannada/videos/554133555479469/

Published On - 12:56 pm, Fri, 24 April 20

Click on your DTH Provider to Add TV9 Kannada