ನಮ್ಮ ಹೋರಾಟ ತಡೆಯಲು ಬೆದರಿಕೆ ಹಾಕುತ್ತಿದ್ದಾರೆ, ಮುಖ್ಯಮಂತ್ರಿಗಳೇ ಇದು ನಿಮ್ಮ ಪಕ್ಷಕ್ಕೇ ಕೆಟ್ಟ ಹೆಸರು: ಮೃತ್ಯುಂಜಯ ಶ್ರೀ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 07, 2024 | 9:05 PM

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಡಿಸೆಂಬರ್ 10 ರಂದು ಸುವರ್ಣಸೌಧದ ಮೇಲೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ಹೋರಾಟ ಅನಿವಾರ್ಯವಾಗಿದೆ ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ. ಲಕ್ಷಾಂತರ ಜನರು ಈ ಹೋರಾಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹೋರಾಟ ತಡೆಯುವ ಯತ್ನಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ನಮ್ಮ ಹೋರಾಟ ತಡೆಯಲು ಬೆದರಿಕೆ ಹಾಕುತ್ತಿದ್ದಾರೆ, ಮುಖ್ಯಮಂತ್ರಿಗಳೇ ಇದು ನಿಮ್ಮ ಪಕ್ಷಕ್ಕೇ ಕೆಟ್ಟ ಹೆಸರು: ಮೃತ್ಯುಂಜಯ ಶ್ರೀ
ನಮ್ಮ ಹೋರಾಟ ತಡೆಯಲು ಬೆದರಿಕೆ ಹಾಕುತ್ತಿದ್ದಾರೆ, ಮುಖ್ಯಮಂತ್ರಿಗಳೇ ಇದು ನಿಮ್ಮ ಪಕ್ಷಕ್ಕೇ ಕೆಟ್ಟ ಹೆಸರು: ಮೃತ್ಯುಂಜಯ ಶ್ರೀ
Follow us on

ಬೆಳಗಾವಿ, ಡಿಸೆಂಬರ್​ 07: ಪಂಚಮಸಾಲಿ ಮೀಸಲಾತಿಗಾಗಿ ಡಿ.10ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ನಮ್ಮ ಹೋರಾಟ ತಡೆಯಲು ನಮ್ಮ ಮುಖಂಡರಿಗೆ ಕರೆಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿ ಪ್ರಯತ್ನ ಮಾಡಿದ್ರೇ ಮುಖ್ಯಮಂತ್ರಿಗಳೇ ನಿಮ್ಮ ಪಕ್ಷಕ್ಕೇ ಕೆಟ್ಟ ಹೆಸರು ಬರುತ್ತೆ ಎಂದು ಬಸವಜಯ ಮೃತ್ಯುಂಜಯ ಶ್ರೀ (Basava Jaymrityunjaya swamiji) ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಪೂರ್ವಭಾವಿ ಸಭೆ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 10ರಂದು 10 ಸಾವಿರಕ್ಕೂ ಅಧಿಕ ವಕೀಲರು, ಐದು ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳ ಮೂಲಕ ರ್‍ಯಾಲಿ ಮಾಡುತ್ತೇವೆ. ಸರ್ಕಾರ ಈ ಸಮಾಜದ ಹೋರಾಟಕ್ಕೆ ಸ್ಪಂದನೆ ಮಾಡುತ್ತಿಲ್ಲ. ಲಕ್ಷಾಂತರ ಜನ ಹೋರಾಟಕ್ಕೆ ಬರಲು ತಯಾರಾಗಿದ್ದಾರೆ. 4 ವರ್ಷ ಶಾಂತ ರೀತಿಯಲ್ಲಿ ಹೋರಾಟ ಮಾಡಿದ್ದೇವೆ‌. ನಮ್ಮ ಹೋರಾಟ ತಡೆಯುವ ಕೆಲಸವನ್ನ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 2ಎ ಮೀಸಲಾತಿಗೆ ಪಂಚಮಸಾಲಿ ಸಮಾಜ ಆಗ್ರಹ: ಡಿ 10ಕ್ಕೆ ಬೆಳಗಾವಿ ಸುವರ್ಣಸೌಧಕ್ಕೆ 15,000 ಮಂದಿ ಮುತ್ತಿಗೆ: ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಕಾನೂನು ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದರೆ ನಿಮ್ಮ ಸರ್ಕಾರಕ್ಕೆ ಚ್ಯುತಿ ಬರುವ ಸಾಧ್ಯತೆ ಇದೆ. ನಮ್ಮ ಹಕ್ಕನ್ನ ಕೇಳುವ ಪ್ರಯತ್ನ ನಾವು ಮಾಡುತ್ತೇವೆ. ಪ್ರತಿ ಊರಿಂದ ಒಂದು ಟ್ರ್ಯಾಕ್ಟರ್ ಜೊತೆಗೆ ಹತ್ತು ಜನರನ್ನ ಕರೆದುಕೊಂಡು ಬರಬೇಕು. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯ ನಾವು ಹೋರಾಟ ಮಾಡೋದು ಅಷ್ಟೇ ಸತ್ಯ. ನಮ್ಮ ಹೋರಾಟದ ಮುಂಭಾಗದಲ್ಲಿ ವಕೀಲರು, ಅವರ ಹಿಂದೆ ನಾವು, ಹಿಂದೆ ಟ್ರ್ಯಾಕ್ಟರ್ ಇರುತ್ತೆ ಎಂದು ತಿಳಿಸಿದ್ದಾರೆ.

ಮೀಸಲಾತಿ ಕೊಡಬಾರದು ಅಂತಿದ್ರೆ ಹೋರಾಟ ಅನಿವಾರ್ಯ ಎಂದ ಯತ್ನಾಳ್ 

ಶಾಸಕ ಬಸನಗೌಡ ಯತ್ನಾಳ್ ಮಾತನಾಡಿ, ಪಂಚಮಸಾಲಿ ಮೀಸಲಾತಿಗಾಗಿ ಡಿ.10ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಸಮಾಜದವರನ್ನ ಕರೆದು ಮಾತಾಡುವ ಕೆಲಸ ಮಾಡುತ್ತಿಲ್ಲ. ಎಲ್ಲಾ ಪೊಲೀಸ್ ಠಾಣೆಗಳಿಗೆ ಸರ್ಕಾರ ಸೂಚನೆ ನೀಡಿದೆ. ಆರೂವರೆ ಸಾವಿರ ಪೊಲೀಸರನ್ನ ನಿಯೋಜನೆ ಮಾಡಿದ್ದೀರಿ. ಮನಸ್ಸು ಮಾಡಿದ್ರೆ 15 ನಿಮಿಷದಲ್ಲಿ ಹಿಂದುಳಿದ ಆಯೋಗದ ವರದಿ ತರಿಸಿಕೊಳ್ತೇವೆ ಅಂದಿದ್ರಿ. ಬೆಳಗಾವಿ ಅಧಿವೇಶನಕ್ಕೂ ಮುನ್ನ ವರದಿ ತರೆಸಿಕೊಂಡು ಅಧಿಸೂಚನೆ ಹೊರಡಿಸಿದ್ರೆ ನಿಲ್ಲಿಸ್ತೇವೆ. ಮೀಸಲಾತಿ ಕೊಡಬಾರದು ಅಂತಿದ್ರೆ ಹೋರಾಟ ಅನಿವಾರ್ಯ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಜೊತೆ ಕೇಂದ್ರ ಸರ್ಕಾರ ಲಿಂಗಾಯತರನ್ನು ಒಬಿಸಿಗೆ ಸೇರಿಸುವಂತೆಯೂ ಹೋರಾಟ: ಯತ್ನಾಳ್

ಸುವರ್ಣಸೌಧಕ್ಕೆ ಮುತ್ತಿಗೆ ತಡೆಯಲು ಷಡ್ಯಂತ್ರ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅವರು ಎಲ್ಲಿ ತಡೀತಾರೆ ಅಲ್ಲೇ ರಸ್ತೆತಡೆದು ಧರಣಿ ಮಾಡಿ. ಸಾಧ್ಯವಾದವರು ನಮ್ಮ ಹೋರಾಟಕ್ಕೆ ಬಂದು ಭಾಗಿಯಾಗುವಂತೆ ಸಮಾಜದ ಜನರಿಗೆ ಬಸನಗೌಡ ಯತ್ನಾಳ್ ಕರೆ ನೀಡಿದ್ದಾರೆ.​​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.